Posted on May 28, 2012 by ವಿಶ್ವ ಕನ್ನಡಿಗ ನ್ಯೂಸ್
ಚನ್ನೈ : ಬಿಸ್ಲಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಕೊಲ್ಕತ್ತಾ ನೈಟ್ ರೈಡರ‍್ಸ್ ತಂಡ ಈ ಬಾರಿಯ ಐಪಿಎಲ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.ಚನ್ನೈನಲ್ಲಿ ನಡೆದ ಫೈನಲ್ ಪಂದ್ಯ ಕೊನೆಯ ಓವರ್‌ವರೆಗೂ ರೋಚಕತೆಯಿಂದ ಕೂಡಿತ್ತು . ಕೊನೆಯ ಓವರಿನ ಎರಡು ಎಸೆತಗಳು ಬಾಕಿ ಇರುವಂತೆಯೇ ಕೊಲ್ಕತ್ತಾ ತಂಡ ರೋಚಕ ಜಯ ಸಾಧಿಸಿತು.
Filed under: Sports Newz | Leave a Comment »
Posted on May 27, 2012 by ವಿಶ್ವ ಕನ್ನಡಿಗ ನ್ಯೂಸ್
ಈ ಬಾರಿಯ ಐಪಿಎಲ್ ಯಾರ ಪಾಲಾಗಲಿದೆ ಎಂಬ ಸಮೀಕ್ಷೆಯನ್ನು ಕಳೆದ ಒಂದು ವಾರದಿಂದ ವಿಶ್ವ ಕನ್ನಡಿಗ ನ್ಯೂಸ್ ಹಮ್ಮಿಕೊಂಡಿತ್ತು . ಅದರಲ್ಲಿ ಒಟ್ಟು ನಾಲ್ಕು ನೂರ ತೊಂಬತ್ತೊಂದು ಮಂದಿ ಪಾಲ್ಗೊಂಡು ಮತ ಚಲಾಯಿಸಿದ್ದು ಮುನ್ನೂರ ಹತ್ತು ಮಂದಿ ಕೊಲ್ಕತ್ತಾ ನೈಟ್ ರೈಡರ್ಸ್ ಈ ಬಾರಿಯ ಐಪಿಎಲ್ ಗೆಲ್ಲಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ .
ಮತ್ತೊಂದು ಫೈನಲ್ ತಂಡ ಚನ್ನೈ ಸೂಪರ್ ಕಿಂಗ್ಸ್ ಪರ ಕೇವಲ ನಲವತ್ತೊಂಬತ್ತು ಓದುಗರು ಮತ ಚಲಾಯಿಸಿದ್ದಾರೆ . ಇನ್ನೇನು ಐಪಿಎಲ್ ಫೈನಲ್ ಪಂದ್ಯ ಆರಂಭಕ್ಕೆ ಕೆಲವೇ ಕ್ಷಣಗಳು ಬಾಕಿ ಉಳಿದಿದ್ದು ನಮ್ಮ ಹೆಚ್ಚಿನ ಓದುಗರ ಅಭಿಪ್ರಾಯ ಸರಿಯಾಗಿ ಕೋಲ್ಕತ್ತಾ ಐಪಿಎಲ್ ಕಪ್ ಗೆಲ್ಲುತ್ತದೋ ಇಲ್ಲ ನಲವತ್ತೊಂಬತ್ತು ಓದುಗರು ಅಭಿಪ್ರಾಯ ವ್ಯಕ್ತಪಡಿಸಿದಂತೆ ಚನ್ನೈ ತಂಡ ಗೆಲ್ಲುತ್ತದೋ ಎಂಬುವುದು ಇಂದು ಮಧ್ಯ ರಾತ್ರಿಯೊಳಗೆ ಗೊತ್ತಾಗಲಿದೆ .
Filed under: Public Opinion | Leave a Comment »
Posted on May 27, 2012 by ಸಲೀಂ,ಅಮ್ಚಿನಡ್ಕ,ಪುತ್ತೂರು.

ಮಂಗಳೂರು: ಮೂಡಬಿದ್ರೆ ಜೈನ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಹಾದಿಯಾ ತಾನು ವ್ಯಾಸಂಗ ಮಾಡುತ್ತಿದ್ದ ಕಾಲೇಜಿನಲ್ಲಿ ಸ್ಕಾರ್ಪ್ ಧಾರಣೆಗೆ ಅವಕಾಶ ನೀಡಿಲ್ಲ ಎಂಬ ಕಾರಣಕ್ಕೆ ಕಾಲೇ ಜಿಗೆ ಹೋಗಿರಲಿಲ್ಲ. ಸ್ಕಾರ್ಪ್ ಧರಿಸಿ ಕಾಲೇಜಿಗೆ ಹೋಗಲು ಅನುಮತಿ ನೀಡುವಂತೆ ಕೋರಿ ಆಕೆ ಜಿಲ್ಲಾಧಿಕಾರಿ, ಮಾನವ ಹಕ್ಕು ಆಯೋಗದ ಅಧ್ಯಕ್ಷರು, ಸಚಿವರು ಸಾಮಾಜಿಕ ನಾಯಕ ರಲ್ಲಿ ಕೋರಿದ್ದರೂ ಪ್ರಯೋಜನವಾಗಿರಲಿಲ್ಲ. ಇದರಿಂದ ಆಕೆಯ ಹಾಜರಿಯಲ್ಲಿ ಕೊರತೆ ಕಂಡುಬಂದಿದ್ದು, ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತಳಾಗುವ ಸನ್ನಿವೇಶ ಉದ್ಭವಿಸಿತ್ತು. ಈ ಸಂದರ್ಭದಲ್ಲಿ ಆಕೆ ನ್ಯಾಯಾಲಯದ ಮೆಟ್ಟಲೇರಿದ್ದಳು. ನ್ಯಾಯಾಲಯದ ಹೋರಾಟದ ಬಳಿಕ ಆಕೆಗೆ ಪರೀಕ್ಷೆಯ ದಿನವೇ ಹಾಲ್ ಟಿಕೆಟ್ ಸಿಕ್ಕಿತ್ತು. ಒಂದು ಕಡೆ ಸ್ಕಾರ್ಪ್ ವಿವಾದ ಇನ್ನೊಂದು ಕಡೆ ಪರೀಕ್ಷೆ ಬರೆಯುವ ವಿಷಯದಲ್ಲೇ ಇದ್ದ ಆತಂಕ ಇದರ ನಡುವೆಯೂ ಓದಿ ಪರೀಕ್ಷೆ ಬರೆದಿದ್ದ ಹಾದಿಯ ಈಗ ಫಲಿತಾಂಶದ ಅನಿಶ್ಚಿತತೆಯನ್ನು ಎದುರಿಸುವಂತಾಗಿದೆ.
Filed under: Dakshina Kannada | 1 Comment »
Posted on May 27, 2012 by ಅಶ್ರಫ್ ಮಂಜ್ರಾಬಾದ್

ಮಂಗಳೂರು : ನಗರದ ಹೊರವಲಯದ ಅಡ್ಯಾರ್ ಎಂಬಲ್ಲಿ ಸಂಭವಿಸಿದ ಅಪಘಾತದಲ್ಲಿ ಮಂಗಳೂರು ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಖಾಲಿದ್ ಯೂಸುಫ್ ಮೃತಪಟ್ಟಿದ್ದಾರೆ . ನಿನ್ನೆ ಮಧ್ಯಾಹ್ನ ಈ ಅಪಘಾತ ಸಂಭವಿಸಿದ್ದು ಖಾಲಿದ್ ಯೂಸುಫ್ ಅವರ ಸ್ಕೂಟರಿಗೆ ಮಾರುತಿ ರಿಟ್ಜ್ ಕಾರು ಡಿಕ್ಕಿ ಹೊಡೆದಿದೆ . ಕೂಡಲೇ ಖಾಲಿದ್ ಯೂಸುಫ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಾಯಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದರು .
ಇವರು ಮೂರು ಬಾರಿ ತಾಲ್ಲೂಕು ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾಗಿದ್ದರು . ಕಣ್ಣೂರು ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ದೀರ್ಘ ಕಾಲದಿಂದ ಸೇವೆ ಸಲ್ಲಿಸುತ್ತಿದ್ದರು . ಇವರ ನಿಧನದ ಸುದ್ದಿ ಕೇಳಿ ಕಾಂಗ್ರೆಸ್ ನಾಯಕರಾದ ವಿನಯ್ ಕುಮಾರ್ ಸೊರಕೆ , ಶಾಸಕ ಯುಟಿ ಖಾದರ್ , ರಮಾನಾಥ ರೈ ಹಾಗೂ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಅಂತಿಮ ದರ್ಶನ ಪಡೆದರು .
Filed under: Dakshina Kannada, State Newz | Leave a Comment »
Posted on May 27, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಐಪಿಎಲ್ ಸರಣಿ ಕೊನೆಯಘಟ್ಟ ತಲುಪಿದೆ. ಅನೇಕ ವಿವಾದಗಳು ಸುತ್ತಿಕೊಂಡರೂ ಐಪಿಎಲ್ ಸರಣಿಯ ಜನಪ್ರಿಯತೆಗೆ ಯಾವುದೇ ಹೊಡೆತ ಬಿದ್ದಿಲ್ಲ. ಸುಮಾರು 2 ತಿಂಗಳುಗಳ ಕಾಲ ನಡೆದ ಈ
ಸರಣಿಯ ಫೈನಲ್ ಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು ತಲುಪಿವೆ. ಮಾಜಿ ಚಾಂಪಿಯನ್ ಹಾಗು ಸರಣಿಯ ಮೇಲೆ ಹ್ಯಾಟ್ರಿಕ್ ಸಾಧನೆಗೆ ಹಂಬಲಿಸುತ್ತಿರುವ ಚೆನ್ನೈ ಮತ್ತೊಮ್ಮೆ ಗೆಲ್ಲುವ ಫೆವರೆಟ್ ಆದರೆ ಮತ್ತೊಂದು ತುದಿಯಲ್ಲಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿ ಐಪಿಎಲ್ ಟ್ರೋಫಿಯ ಮೇಲೆ ಹಿಡಿತ ಸಾಧಿಸಲು ತುದಿಗಾಲಲ್ಲಿ ನಿಂತಿರುವ ಕೊಲ್ಕತ್ತಾ ನೈಟ್ ರೈಡರ್ಸ್, ಪಂದ್ಯ ರೋಚಕವಾಗಿ ಸಾಗುವುದರಲ್ಲಿ ನೋ ಡೌಟ್.
ಚೆನ್ನೈ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿರಬಹುದು ಆದರೆ ಪ್ರಶಸ್ತಿ ಗೆಲ್ಲಬೇಕಾದರೆ ಆ ತಂಡಕ್ಕೆ ಬೆಂಕಿಯಂತ 24 ಚೆಂಡುಗಳನ್ನ ಎದುರಿಸಿ ನಿಲ್ಲೋದು ಅತೀ ಮುಖ್ಯ. ಹೌದು ಐಪಿಎಲ್ ಮೂಲಕ ಹೊರಹೊಮ್ಮಿದ ಭಾರತೀಯ ಮೂಲದ ವಿಂಡಿಸ್ ಆಟಗಾರ ಪ್ರಸ್ತುತ ನೈಟ್ ರೈಡರ್ಸ್ ನ ಸ್ಪಿನ್ ಮಾಂತ್ರಿಕ ಸುನಿಲ್ ಫಿಲಿಪ್ ನರಿನೆ ಅವರ 4 ಓವರ್ ಫಲಿತಾಂಶದಲ್ಲಿ ಪ್ರಮುಖ ಬದಲಾವಣೆಗೆ ಕಾರಣವಾಗಬಹುದು. ಸರಣಿಯಲ್ಲಿ ಎದುರಾಳಿಗೆ ಅತಿ ಕಡಿಮೆ ರನ್ ಬಿಟ್ಟುಕೊಟ್ಟು 24 ವಿಕೆಟ್ ಪಡೆದಿರುವ ಸುನಿಲ್ ಎದುರಾಳಿಗೆ ಬಿಟ್ಟುಕೊಟ್ಟದ್ದು ಕೇವಲ 5.20 ಸರಾಸರಿ ಓವರ್ ರನ್. ಇದು ಟಿ-20 ಯ ಅತಿ ದೊಡ್ಡ ಸಾಧನೆ. ಸುನಿಲ್ ದಾಳಿಯನ್ನ ತಡೆಯದಿದ್ದರೆ ಚೆನ್ನೈಗೆ ಪ್ರಶಸ್ತಿ ಯ ಮೇಲೆ ಅಧಿಕಾರ ಸಾಧಿಸಲು ಅಷ್ಟೊಂದು ಸುಲಭವಿಲ್ಲ. ಆದರೆ ಲಕ್ಕಿ ಧೋನಿ ಹಾಗು ಅವರ ಹುಡುಗರು ಸುನಿಲ್ ಧಾಳಿಯನ್ನ ಯಾವ ರೀತಿಯಾಗಿ ಎದುರಿಸುತ್ತಾರೆ ಅನ್ನೋದನ್ನ ಕಾದುನೋಡಬೇಕು.
ಫೈನಲ್ ಪಂದ್ಯದ ನೇರ ಪ್ರಸಾರಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ…
- ನಿತಿನ್ ರೈ, ಕುಕ್ಕುವಳ್ಳಿ. (ವರದಿಗಾರರು, ವಿಕೆ ನ್ಯೂಸ್)
Filed under: Sports Newz | 1 Comment »
Posted on May 27, 2012 by ವಿಶ್ವ ಕನ್ನಡಿಗ ನ್ಯೂಸ್

ಪೇಸ್ ಬುಕ್ ಗ್ರೂಪ್ ಚಿರಿಕಳಿ ಕಟ್ಟೆ ಪಾರ್ಟ್ – 2 ಎ೦ಬ ಗ್ರೂಪ್ ಸುಮಾರು 14,000 ಮೇಲೆ ಸದಸ್ಯರಿದ್ದಾರೆ. ಇದು ದಿನದ 24 ಗ೦ಟೆಯಲ್ಲೂ ಚಲಾವಣೆಯಲ್ಲಿದ್ದು ಗ್ರೂಪ್ ನೋಡಿಕೊಲ್ಲಲ್ಲು ಒಟ್ಟು ಎಂಟು ಅಡ್ಮಿನ್ ಗಳು ಇದ್ದಾರೆ.
ನಿನ್ನೆ ರಾತ್ರಿ ಈ ಗ್ರೂಪ್ ಗೆ ಒಬ್ಬ ಸದಸ್ಯ ಅಡ್ಮಿನ್ ಆದ 8 ಜನರನ್ನ ಹ್ಯಾಕ್ ಮಾಡಿ ಅಶ್ಲೀಲ ಫೋಟೋ ಹಾಕಿದ, ಇದನ್ನು ಕಂಡ ಇನ್ನೊಬ್ಬ ಸದಸ್ಯ ಅಡ್ಮಿನ್ ಗೆ ವಿಷಯ ತಿಳಿಸಿದಾಗ ಅಡ್ಮಿನ್ ಆತನಿಗೆ ಪೋಸ್ಟ್ ತೆಗೆಯಲು ಅಡ್ಮಿನ್ ಸ್ಥಾನ ಕೊಟ್ಟ, ಆದರೆ ಇದನ್ನು ನೋಡುತ್ತಿದ್ದ ಹ್ಯಾಕರ್ ಸುಲಭವಾಗಿ ಹೊಸ ಅಡ್ಮಿನ್ ನ ಈ ಮೇಲ್ ವಿಳಾಸ ಹ್ಯಾಕ್ ಮಾಡಿ ಗ್ರೂಪ್ ನ ಎಲ್ಲ ಅಡ್ಮಿನ್ ಗಳನ್ನೂ ರಿಮೂವ್ ಮಾಡಿ, ಗ್ರೂಪನ್ನು ದುರ್ಬಳಕೆ ಮಾಡಿದ್ದಾನೆ.
ಘಟನೆಯನ್ನು ಅರಿತ ಗ್ರೂಪ್ ನ ಅಡ್ಮಿನ್ ಮೊಯ್ದೀನ್ ಎ೦ಬವರು ಇದರ ಬಗ್ಗೆ ಬೆಂಗಳೂರು ಕ್ರೈಂ ಪೋಲಿಸ್ ಠಾಣೆಗೆ ಈ ಮೇಲ್ ವಿಳಾಸ ಹ್ಯಾಕ್ ಮಾಡಿ ಗ್ರೂಪ್ ಗೆ ವ೦ಚನೆ ಎ೦ಬುವುದಾಗಿ ಕೇಸು ದಾಖಲಿಸುವುದಾಗಿ ಹೇಳಿದ್ದಾರೆ. ಘಟನೆ ಬಗ್ಗೆ ಕಾನೂನು ತಜ್ಞರಲ್ಲಿ ಅಡ್ಮಿನ್ ಮಾತಾಡಿದಾಗ, ಹ್ಯಾಕರ್ ಹೊರದೇಶದಲ್ಲಾದರೆ ಆತನ ಕ೦ಪೆನಿಗೆ ದೂರು ನೀಡಿ ಕೆಲಸದಿ೦ದ ಕಿತ್ತು ಹಾಕಿ ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಮಾತಾಡಿದರು. ಮೊಯ್ದೀನ್ ಈ ಬಗ್ಗೆ 3 ಜನರನ್ನು ಸಂಶಯ ವ್ಯಕ್ತಪಡಿಸಿದ್ದಾರೆ. ಈ ಮೂವರು ಹೊರದೇಶದಲ್ಲಿ ಕೆಲಸ ಮಾಡುವವರಾಗಿದ್ದಾರೆ.
ವರದಿ : ಶಿಹಾ, ಉಳ್ಳಾಲ.
Filed under: Dakshina Kannada, State Newz | 2 Comments »
Posted on May 27, 2012 by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಸುಳ್ಯ : ತಾಲೂಕಿನ ಬೆಳ್ಳಾರೆಯ ಸುನ್ನೀ ಕೊರ್ಡಿನೆಶನ್ ಕಮೀಟಿ ವತಿಯಿಂದ ಇದೇ ಬರುವ ಜೂನ್ 03ರಂದು ಸಾಯಂಕಾಲ 4 ಗಂಟೆಗೆ ಸರಿಯಾಗಿ ಬೆಳ್ಳಾರೆಯ ಕೆ.ಯಂ ನಗರದಲ್ಲಿ ಕಮರುಲ್ ಉಲಮಾ ಕಾಂತಪುರಂ ಉಸ್ತಾದ್ ರವರಿಗೆ ಅಭಿನಂದನಾ ಸಮಾರಂಭ ಮತ್ತು ಬೃಹತ್ ಸುನ್ನೀ ಸಮ್ಮೇಳನ ನಡೆಯಲಿದೆ.
ಈ ಬೃಹತ್ ಸುನ್ನೀ ಸಮ್ಮೇಳನಕ್ಕೆ ತಾಜುಲ್ ಉಲಮಾ ಉಳ್ಳಾಲ ತoಙಳ್, ಕಮರುಲ್ ಉಲಮಾ ಕಾಂತಪುರಂ ಎ.ಪಿ ಅಬೂಬಕ್ಕರ್ ಮುಸ್ಲಿಯಾರ್, ಸಯ್ಯದ್ ಫಝಲ್ ಕೊಯ್ಯಮ್ಮ ತoಙಳ್ ಕೂರ, ಸಯ್ಯದ್ ಉಮರ್ ಫಾರೂಕ್ ತoಙಳ್ ಪೊಸೊಟ್, ತಂಬಿನಮಕ್ಕಿ ತoಙಳ್, ಮoಞನಾಡಿ ಆಬ್ಬಾಸ್ ಮುಸ್ಲಿಯಾರ್, ಕೂಟಂಬಾರಾ ದಾರಿಮಿ, ದಕ್ಷಿಣ ಭಾರತ ಎಸ್.ಎಸ್.ಎಫ್ ಅಧ್ಯಕ್ಷರಾದ ಎಂ.ಎಸ್.ಎಂ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ, ವಕ್ಫ್ ಮಂಡಳಿ ಚಯರಮನ್ ಶಾಫಿ ಸಅದಿ, ಬೆಂಗಳೂರು ಉದ್ಯಮಿ ಕೆ.ಎಂ ಅಬ್ಧುಲ್ ರಶೀದ್ ಬೆಳ್ಳಾರೆ,ಅಸ್ಲಂ ಗುರುಕ್ಕಲ್ ರಾಜ್ಯ ಬಿ ಜೆ ಪಿ ಅಲ್ಪ ಸಂಖ್ಯಾತ ಘಟಕ ಉಪಾಧ್ಯಕ್ಷರು ಅಲ್ಲದೆ ರಾಜಕೀಯ ಧುರೀಣರಾದ ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಮ್, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಚಾಮರಾಜನಗರ ಶಾಸಕ ಜಮೀರ್ ಅಹಮ್ಮದ್ ಅಲ್ಲದೆ ತಮಿಳುನಾಡು ಸರಕಾರದ ಮಂತ್ರಿಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪತ್ರಿಕೆಗೆ ತಿಳಿಸಿದ್ದಾರೆ. ಈ ಬೃಹತ್ ಸಮ್ಮೇಳನದ ನೇರ ಪ್ರಸಾರವು ಹಲವು ಅಂತರ್ಜಾಲ ತಾಣಗಳಲ್ಲಿ ಪ್ರಸಾರವಾಗಲಿದೆ.
Filed under: Dakshina Kannada, State Newz | Leave a Comment »
Posted on May 27, 2012 by ರಫೀಕ್ ದಲ್ಕಾಜೆ,ಕೋಲ್ಪೆ
ಭಾರಿ ಜನಬೆಂಬಲದ ನಡುವೆ ವರದಕ್ಷಿಣೆ ವಿರೋಧಿ ಅಭಿಯಾನಕ್ಕೆ ಚಾಲನೆ: ಆಡಂಬರದ ಮದುವೆಗೆ ಕತ್ತರಿ

ದುಬೈ: ಕರಾವಳಿ ವೆಲ್ಫೇರ್ ಅಸೋಸಿಯೇಶನ್ ಯು.ಎ.ಇ. ಘಟಕದ ವತಿಯಿಂದ ” ವರದಕ್ಷಿಣೆ ವಿರೋಧಿಸಿ ಸಮುದಾಯವನ್ನು ರಕ್ಷಿಸಿ “ಎಂಬ ಅಭಿಯಾನದ ಉಧ್ಘಾಟನೆಯು ದೇರಾ ಮುತೀನಾ ರಸ್ತೆಯಲ್ಲಿರುವ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಅಡಿಟೋರಿಯಂನಲ್ಲಿ ನಡೆಯಿತು. ಕರಾವಳಿ ವೆಲ್ಫೇರ್ ಅಸೋಸಿಯೇಶನ್ ಯು.ಎ.ಇ. ಘಟಕದ ಸದಸ್ಯ ಜಾಫರ್ ಸವಣೂರು ಕಿರಾಹತ್ ಪಠಣದೊಂದಿಗೆ ಆರಂಭಗೊಂಡಿತು. ಕರಾವಳಿ ವೆಲ್ಫೇರ್ ಅಸೋಸಿಯೇಶನ್ ಯು.ಎ.ಇ. ಘಟಕದ ಕಾರ್ಯದರ್ಶಿ ಮಹಮ್ಮದ್ ಉನೈಸ್ ರವರು ಆಗಮಿಸಿದ ಎಲ್ಲಾ ಅತಿಥಿಗಳನ್ನು ಸಭೆಗೆ ಸ್ವಾಗತಿಸಿದರು. ಕಾರ್ಯಕ್ರಮದ ದುವಾಃ ಮತ್ತು ಅಧ್ಯಕ್ಷತೆಯನ್ನು ಹಾಜಿ. ಮಹ್ಮೂದುಲ್ ಫೈಝಿ ಓಲೆಮುಂಡೋವು ಉಸ್ತಾದ್ ರವರು ವಹಿಸಿದ್ದರು.

ಜನಾಬ್ ಹಾಜಿ ಮೊಯಿದ್ದೀನ್ ಕುಟ್ಟಿ ಕಕ್ಕಿಂಜೆ, ದಿಬ್ಬರವರು ಕಾರ್ಯಕ್ರಮದ ಉದ್ಘಾಟನೆಯನ್ನು ನಿರ್ವಹಿಸಿ ಮಾತನಾಡಿ ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದು ಇಸ್ಲಾಮಿಗೆ ವಿರುದ್ಧವಾಗಿದೆ. ಇಸ್ಲಾಮಿನ ಚರಿತ್ರೆಯಲ್ಲಿರುವ ಮಹರ್ ವ್ಯವಸ್ಥೆಯನ್ನು ಬಲಪಡಿಸಬೇಕು, ವರದಕ್ಷೆಣೆಯಿಂದ ಅದೆಷ್ಟೋ ಕುಟುಂಬಗಳು ಬೀದಿಪಾಲಾಗಿವೆ ಎಂದು ಅವರು ತಮ್ಮ ಭಾಷಣದಲ್ಲಿ ತಿಳಿಸಿದರು. ಅಭಿಯಾನದ ಉದ್ಘಾಟನೆಯನ್ನು ಜನಾಬ್ ಅಬ್ದುರ್ರಶೀದ್ ಝೈನಿ ಸಖಾಫಿ ಕಾಮಿಲ್ ರವರು ನೆರವೇರಿಸಿ ಮಾತನಾಡಿ ವರದಕ್ಷಿಣೆ ಹಿಡಿತ ನಮ್ಮ ಸಮಾಜದಲ್ಲಿ ಭದ್ರವಾಗಿದೆ, ಕೇವಲ ಭಾಷಣ-ಬರಹಗಳಿಂದ ವರದಕ್ಷಿಣೆ ನಿರ್ಮೂಲನೆ ಅಸಾಧ್ಯ ಇದರ ಬಗ್ಗೆ ಪರಿವರ್ತನೆ ಆಗಬೇಕು, ಮದುವೆಯ ವ್ಯವಸ್ಥೆ ಬದಲಾಗಬೇಕು, ಆಡಂಬರದ ಮದುವೆಯನ್ನು ನಿಷೇಧಿಸಿ, ಆದಷ್ಟು ಸರಳವಾಗಿಸಿ ಮತ್ತು ಅಭ್ಯಾಸಗಳನ್ನು ನಾವು ಬದಲಾಯಿಸದಿದ್ದರೆ ಅಭ್ಯಾಸ ನಿಮ್ಮನ್ನು ಬದಲಾಯಿಸುತ್ತದೆ ಇದರಿಂದಾಗಿ ಸಾಮಾಜಿಕ ಮನ ಪರಿವರ್ತನೆಗಳಾಗಲಿ ಖಂಡಿತವಾಗಿಯು ಯಶಸ್ಸು ಸಿಗುತ್ತದೆ ಎಂದು ಅವರು ಹೇಳಿದರು. ಇದೇ ಸಂದರ್ಭದಲ್ಲಿ “ವರದಕ್ಷಿಣೆ ವಿರೋಧಿಸಿ ಸಮುದಾಯವನ್ನು ರಕ್ಷಿಸಿ “ಎಂಬ ಅಭಿಯಾನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.


ವಿಶೇಷ ಮುಖ್ಯ ಅತಿಥಿಯಾಗಿ ಆಗಮಿಸಿದ ಸಯ್ಯದ್ ಅಸ್ಕರಲಿ ತಂಙಳ್ ಕೋಲ್ಪೆ ರವರು ಮಾತನಾಡಿ ವರದಕ್ಷಿಣೆ ಕೊಡುವುದು ಮತ್ತು ತೆಗೆದುಕೊಳ್ಳುವುದರ ವಿರುದ್ಧ ಜನಜಾಗೃತಿ ಮೂಡಿಸಿ ಯುವಕರನ್ನು ಇಂತಹ ಸಾಮಾಜಿಕ ಪಿಡುಗಿನಿಂದ ರಕ್ಷಿಸಿ ಎಂದು ಹೇಳಿದರು. ವಿಶೇಷ ಮುಖ್ಯ ಅತಿಥಿಯಾಗಿ ಆಗಮಿಸಿದ ಝೈನುಲ್ ಅಬಿದೀನ್ ವಾಫಿ ರವರು ಮಾತನಾಡಿ “ಸ್ತ್ರೀಧನ” ಎಂದರೆ “ಸ್ತ್ರೀ” ಯು ನಿಜವಾದ “ಧನ” ಎಂದು ಅರ್ಥ. ಆದರೆ ನಮ್ಮ ಸಮಾಜದಲ್ಲಿ “ಸ್ತ್ರೀಧನ” ಕ್ಕೆ ಬೇರೆಯೇ ಅರ್ಥ ಕಲ್ಪಿಸಲಾಗಿದೆ. ಕಾರು, ಒಡವೆ, ಜಮೀನು, ಹಣ ಇಂತಹ ವಿಷಯಗಳಿಗೆ ಮಾರು ಹೋಗಬೇಡಿ ಎಂದು ಕಿವಿ ಮಾತು ಹೇಳಿದರು.
ವೇದಿಕೆಯಲ್ಲಿ ಅತಿಥಿಗಳಾಗಿ ವಿಶ್ವಕನ್ನಡಿಗ ನ್ಯೂಸ್. ಸಂಪಾದಕರಾದ ಸಿ.ಎಚ್. ಅಬ್ದುಲ್ ಹಮೀದ್ ಕಾವು, ಕರ್ನಾಟಕ ಇಸ್ಲಾಮಿಕ್ ಸೆಂಟರ್, ಕುಂಬ್ರ ಇದರ ದುಬೈ ಘಟಕದ ಅಧ್ಯಕ್ಷರಾದ ಅಬ್ದುಲ್ ಖಾದರ್ ಬೈತಡ್ಕ, ಅಬ್ದುಲ್ಲ ಮುಸ್ಲಿಯಾರ್ ಕುಡ್ತಮೊಗೆರು, ಜಲೀಲ್ ನಿಜಾಮಿ ಎಮ್ಮೆಮಾಡು ಹಾಜರಿದ್ದರು ಮತ್ತು ವರದಕ್ಷಿಣೆ ನಿರ್ಮೂಲನ ಹೋರಾಟಗಾರ ಝಹೀರ್ ಶಾ ಪುತ್ತೂರು, ಕರ್ನಾಟಕ ಇಸ್ಲಾಮಿಕ್ ಸೆಂಟರ್ ಯು.ಎ.ಇ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಅಬ್ದುಲ್ ರಜಾಕ್ ಬುಳೆರಿಕಟ್ಟೆ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಕರಾವಳಿ ವೆಲ್ಫೇರ್ ಅಸೋಸಿಯೇಶನ್ ಯು.ಎ.ಇ. ಘಟಕದ ಹೆಚ್ಚಿನ ಎಲ್ಲಾ ಸದಸ್ಯರು ಹಾಜರಿದ್ದರು. ಕೊನೆಯಲ್ಲಿ ಕರಾವಳಿ ವೆಲ್ಫೇರ್ ಅಸೋಸಿಯೇಶನ್ ಯು.ಎ.ಇ. ಘಟಕದ ಅಧ್ಯಕ್ಷರಾದ ನಿಯಾಜ್ ಮಿಯಂದಾದ್ ಆಗಮಿಸಿದ ಎಲ್ಲಾ ಗಣ್ಯರಿಗೂ ಮತ್ತು ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು. ರಿಫಾಯಿ ಗೂನಡ್ಕ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಯಾಗಿ ನಿರೂಪಿಸಿದರು.

ನಂತರ ನಡೆದ ಸಮಾಲೋಚನ ಸಭೆಯಲ್ಲಿ ಭಾಗವಹಿಸಿದ ವಾರ್ತಾಭಾರತಿ ಪ್ರಧಾನ ಸಂಪಾದಕರಾದ ಅಬ್ದುಸ್ಸಲಾಮ್ ಪುತ್ತಿಗೆ, ಹಿದಾಯ ಫೌಂಡೇಶನ್ ಸ್ಥಾಪಕ ಕಾಶಿಂ ಅಹ್ಮದ್, ಹಾಜಿ ಮೊಯಿದ್ದೀನ್ ಕುಟ್ಟಿ ಕಕ್ಕಿಂಜೆ, ಆಸ್ಕರ್ ಅಲಿ ತಂಗಲ್ ಕೋಲ್ಪೆ ಮುಂತಾದವರು ವರದಕ್ಷಿಣೆಯನ್ನು ಹೇಗೆ ನಿರ್ಮೂಲನೆ ಮಾಡಬಹುದು ಎಂಬುವುದರ ಬಗ್ಗೆ ಕರಾವಳಿ ವೆಲ್‌ಫೇರ್ ಸದಸ್ಯರಿಗೆ ಸಲಹೆ ಸೂಚನೆಗಳನ್ನು ನೀಡಿ ಶುಭ ಹಾರೈಸಿದರು.
This slideshow requires JavaScript.
15 ದಿವಾಸಗಳ ಕಾಲ ನಡೆಯಲಿರುವ ಈ ಅಭಿಯಾನದ ಸಮಾರೋಪ ಜೂನ್ 8 ರಂದು ಇದೇ ದುಬೈ ಇಂಡಿಯನ್ ಇಸ್ಲಾಮಿಕ್ ಸೆಂಟರ್ ಸಭಾಂಗಣದಲ್ಲಿ ಬಹಳ ವಿಜ್ರಂಬಣೆಯಿಂದ ನಡೆಯಲಿದೆ. ತಾವೇಲ್ಲರೂ ತಾನು ಮನ ಧನಗಳಿಂದ ಸಹಕರಿಸಬೇಕಾಗಿ ಸಂಘಟಕರು ವಿನಂತಿಸಿಕೊಂಡಿದ್ದಾರೆ.
ವರದಿ: ನಝೀರ್ ಬೆಳ್ಳಾರೆ.
Filed under: Gulf Newz | Leave a Comment »
Posted on May 27, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ತುಮಕೂರು ಜಿಲ್ಲೆಯಲ್ಲೇ ಪ್ರಪ್ರಥಮ ಬಾರಿಗೆ ಅಪ್ಯಾರೆಲ್ (ವಸ್ತ್ರವಿನ್ಯಾಸ) ಮತ್ತು ಫ್ಯಾಷನ್ ಡಿಸೈನಿಂಗ್ ಕೋರ್ಸ್ ಆರಂಭಿಸಿದ ಹೆಗ್ಗಳಿಕೆ ಹೊಂದಿರುವ ತುಮಕೂರಿನ ಆರ್ಯಭಾರತಿ ಪಾಲಿಟೆಕ್ನಿಕ್ ಇದೀಗ ಮತ್ತೊಂದು ಹೊಸ ಹೆಜ್ಜೆ ಇಡುತ್ತಿದೆ. ಈವರೆಗೆ ಬಾಲಕಿಯರಿಗೆ ಮಾತ್ರ ಅವಕಾಶವಿದ್ದ ಫ್ಯಾಷನ್ ಡಿಸೈನಿಂಗ್ ಕೋರ್ಸ್‌ಗೆ ಈ ವರ್ಷದಿಂದ ಬಾಲಕರಿಗೂ ಪ್ರವೇಶಾವಕಾಶ ನೀಡಲು ಮುಂದಾಗಿದೆ.
2002-04 ನೇ ಸಾಲಿನಲ್ಲಿ ಆರ್ಯಭಾರತಿ ಪಾಲಿಟೆಕ್ನಿಕ್‌ನಲ್ಲಿ ಫ್ಯಾಷನ್ ಡಿಸೈನಿಂಗ್ ಕೋರ್ಸ್ ಆರಂಭಿಸಲಾಗಿದೆ. ಅಂದಿನಿಂದ ಈವರೆಗೆ ನೂರಾರು ವಿದ್ಯಾರ್ಥಿನಿಯರು ಈ ಕೋರ್ಸ್ ಮುಗಿಸಿದ್ದು, ಅನೇಕರು ಸ್ವಾವಲಂಬಿಗಳಾಗಿದ್ದಾರೆ. ಇತರೆ ಹಲವರು ವಿವಿಧ ಹಂತಗಳಲ್ಲಿ ಉದ್ಯೋಗಸ್ಥರಾಗಿದ್ದಾರೆ. ಹೀಗೆ ಅನೇಕರಿಗೆ ಈ ಕೋರ್ಸ್ ಜೀವನಾಧಾರವನ್ನು ಒದಗಿಸಿದ್ದು, ಈ ಕೋರ್ಸ್ ಪ್ರಸ್ತುತ ಅಪಾರ ಬೇಡಿಕೆಯನ್ನು ಹೊಂದಿದೆ ಎಂದು ಆರ್ಯಭಾರತಿ ಪಾಲಿಟೆಕ್ನಿಕ್‌ನ ಪ್ರಾಚಾರ್ಯ ಕೆ.ಆರ್. ಅಶೋಕ್ ಅವರು ಅಭಿಪ್ರಾಯಪಟ್ಟಿದ್ದಾರೆ.

ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಾಲಿಟೆಕ್ನಿಕ್ ಹಂತದಲ್ಲಿ ಇಂತಹ ಕೋರ್ಸ್ ಆರಂಭಿಸಿದ ಕೀರ್ತಿ ತುಮಕೂರಿನ ಸರಸ್ವತಿಪುರಂನಲ್ಲಿ ಸುಸಜ್ಜಿತ ಕಟ್ಟಡ ಹೊಂದಿರುವ ಆರ್ಯಭಾರತಿ ಪಾಲಿಟೆಕ್ನಿಕ್‌ಗೆ ಸಲ್ಲುತ್ತದೆ. ಅಂದಿನಿಂದ ಈವರೆಗೆ ಈ ಕೋರ್ಸ್ ವಿದ್ಯಾರ್ಥಿನಿಯರಗಷ್ಟೇ ಸೀಮಿತವಾಗಿತ್ತು. ಈ ಕೋರ್ಸ್‌ಗೆ ವಿದ್ಯಾರ್ಥಿನಿಯರೂ ಅಷ್ಟೇ ಆಸಕ್ತಿಯಿಂದ ಸೇರ್ಪಡೆಗೊಂಡು ಫ್ಯಾಷನ್ ಡಿಸೈನಿಂಗ್‌ನಲ್ಲಿ ಪರಿಣತರಾಗಿದ್ದಾರೆ. ವಿದ್ಯಾರ್ಥಿಗಳು ಪ್ರತಿವರ್ಷವೂ ತಾವೇ ಸಿದ್ಧಪಡಿಸಿದ ಉಡುಪಿನಲ್ಲಿ ಫ್ಯಾಷನ್ ಷೋ ನೀಡುತ್ತ ಬಂದಿರುವುದು ಜನಪ್ರಿಯವಾಗಿದೆ. ಬಹುಬೇಡಿಕೆಯುಳ್ಳ ಹಾಗೂ ಉದ್ಯೋಗಾಧಾರಿತವಾದ ಈ ಕೋರ್ಸ್‌ಗೆ ಪ್ರಸ್ತುತ ಬಾಲಕರಿಗೂ ಪ್ರವೇಶಾವಕಾಶ ನೀಡುವ ಮಹತ್ವದ ತೀರ್ಮಾನವನ್ನು ಪಾಲಿಟೆಕ್ನಿಕ್ ತೆಗೆದುಕೊಂಡಿದ್ದು, ಇನ್ನುಮುಂದೆ ತುಮಕೂರಿನಂತಹ ಜಿಲ್ಲಾ ಕೇಂದ್ರದಲ್ಲಿ ಫ್ಯಾಷನಿಂಗ್ ಡಿಸೈನಿಂಗ್‌ನಲ್ಲಿ ಬಾಲಕರು ಮಿಂಚಲಿದ್ದಾರೆ.
ಈ ಕೋರ್ಸ್‌ಗೆ ಪ್ರವೇಶ ಪಡೆಯಲು ಎಸ್.ಎಸ್.ಎಲ್.ಸಿ. ಉತ್ತೀರ್ಣರಾಗಿದ್ದರೆ ಸಾಕು. ಇಲ್ಲಿ ಗಣಿತ ಅಥವಾ ವಿಜ್ಞಾನ ಮೊದಲಾದ ವಿಷಯಗಳು ಇರದೆ ಕೇವಲ ಫ್ಯಾಷನ್ ಡಿಸೈನಿಂಗ್ ಬಗ್ಗೆ ಮಾತ್ರ ಪಠ್ಯಕ್ರಮವಿರುವುದು ಈ ಕೋರ್ಸ್‌ನ ವಿಶೇಷವಾಗಿದೆ. ಈ ವಿಭಾಗದಲ್ಲಿ ೩ ವರ್ಷಗಳ ಅವಧಿಯಲ್ಲಿ ೬ ಸೆಮಿಸ್ಟರ್ ಗಳಿರುತ್ತವೆ. ಈ ಕೋರ್ಸ್ ಮುಗಿಸಿದ ನಂತರ ಉದ್ಯೋಗಸ್ಥರಾಗಲೂಬಹುದು ಅಥವಾ ಮುಂದಿನ ವ್ಯಾಸಂಗದ ಇಚ್ಚೆಯಿದ್ದರೆ ಆ ನಿಟ್ಟಿನಲ್ಲೂ ಮುಂದುವರೆಯಬಹುದು.

ಹೆಚ್ಚಿನ ಮಾಹಿತಿಗೆ ಟಿ.ಪಿ. ಮಂಜುಳಾ, ಫ್ಯಾಷನ್ ಡಿಸೈನಿಂಗ್ ವಿಭಾಗ ಮುಖ್ಯಸ್ಥರು, ಆರ್ಯಭಾರತಿ ಪಾಲಿಟೆಕ್ನಿಕ್, ಸರಸ್ವತಿಪುರಂ, ತುಮಕೂರು ಮೊಬೈಲ್: 99807 77993 ಅವರನ್ನು ಸಂಪರ್ಕಿಸಬಹುದು.
ಆರ್ಯಭಾರತಿ ಪಾಲಿಟೆಕ್ನಿಕ್‌ನ ವಸ್ತ್ರವಿನ್ಯಾಸ ವಿಭಾಗದ ವತಿಯಿಂದ ಪ್ರತಿ ವರ್ಷ ಏರ್ಪಡಿಸುವ ‘ಫ್ಯಾಷನ್ ಗೀಕ್’ ಕಾರ್ಯಕ್ರಮವು ಅಪಾರ ಜನಮನ್ನಣೆ ಗಳಿಸಿದ್ದು, ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಸೂಕ್ತ ವೇದಿಕೆಯಾಗಿದೆ. ವಿದ್ಯಾರ್ಥಿಗಳು ತಾವೇ ಸಿದ್ಧಪಡಿಸಿದ ವೈವಿಧ್ಯಮಯ ಉಡುಪುಗಳನ್ನು ಧರಿಸಿ ನೀಡುವ ಫ್ಯಾಷನ್ ಶೋ ಜನಪ್ರಿಯವಾಗಿದೆ.
- ಆರ್. ವಿಶ್ವನಾಥನ್, ತುಮಕೂರು. (ವರದಿಗಾರರು, ವಿಕೆ ನ್ಯೂಸ್)
Filed under: State Newz, Tumakooru | Leave a Comment »
Posted on May 27, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ಬಂಟ್ವಾಳ : ಕಲ್ಲಡ್ಕ ಶ್ರೀರಾಮ ಪದವಿಪೂರ್ವ ಕಾಲೇಜಿನ ಪ್ರಸಕ್ತ ಸಾಲಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಹಾಜರಾದ 234 ವಿದ್ಯಾರ್ಥಿಗಳಲ್ಲಿ 227 ಮಂದಿ ತೇರ್ಗಡೆಗೊಂಡಿದ್ದು, ಶೇ. 97 ಫಲಿತಾಂಶ ಬಂದಿರುತ್ತದೆ.
ಕಲಾ ವಿಭಾಗದಲ್ಲಿ 119 ರಲ್ಲಿ 118 ವಿದ್ಯಾರ್ಥಿಗಳು ತೇರ್ಗಡೆಯಾದರೆ, ವಾಣಿಜ್ಯ ವಿಭಾಗದಲ್ಲಿ 68 ರಲ್ಲಿ 67 ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 47 ರಲ್ಲಿ 42 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 9 ಮಂದಿ ವಿಶಿಷ್ಟ ಶ್ರೇಣಿಯಲ್ಲಿ, 167ಮಂದಿ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ ಎಂದು ಸಂಸ್ಥೆಯ ಪ್ರಾಚಾರ್ಯ ಕೃಷ್ಣ ಪ್ರಸಾದ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 27, 2012 by ಅಶ್ರಫ್ ಮಂಜ್ರಾಬಾದ್

ಅಬುದಾಭಿ (ಯುಎಇ) : ಇಲ್ಲಿನ ರಸ್ತೆಗಳಲ್ಲಿ ನಿಗದಿ ಪಡಿಸಿದ ಕನಿಷ್ಠ ವೇಗಕ್ಕಿಂತಲೂ ನಿಧಾನವಾಗಿ ವಾಹನ ಚಲಾಯಿಸಿದ ಪ್ರಕರಣದಲ್ಲಿ ಕಳೆದ ವರ್ಷ ಒಟ್ಟು ನೂರ ಇಪ್ಪತ್ತೆಂಟು ಮಂದಿ ಚಾಲಕರಿಗೆ ದಂಡ ವಿಧಿಸಲಾಗಿದೆ . ನಿಗದಿ ಪಡಿಸಿದ ವೇಗಕ್ಕಿಂತ ನಿಧಾನವಾಗಿ ವಾಹನ ಚಲಾಯಿಸುವುದರಿಂದ ಟ್ರಾಫಿಕ್ ಜಾಮ್ ಮತ್ತು ಹಲವು ಅವಘಡಗಳು ಸಂಭವಿಸುತ್ತಿದ್ದು ಈ ಕಾರಣಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಂಚಾರಿ ವಿಭಾಗದ ಹಿರಿಯ ಅಧಿಕಾರಿ ಬ್ರಿಗೇಡಿಯರ್ ಹುಸೈನ್ ಅಲ್ ಅರ್ತಿ ತಿಳಿಸಿದ್ದಾರೆ .
ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ವಿಭಾಗ ಹಲವು ಕ್ರಮಗಳನ್ನು ಕೈಗೊಂಡಿದ್ದು ವಾಹನ ಚಾಲಕರಿಗೆ ಸುರಕ್ಷಿತ ಚಾಲನೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ . ಕೆಲ ಮಾರ್ಗದಲ್ಲಿ ಕನಿಷ್ಠ ಹಾಗೂ ಗರಿಷ್ಠ ವೇಗ ಮಿತಿಯನ್ನು ನಿಗದಿಪಡಿಸಲಾಗಿದೆ . ಕನಿಷ್ಠ ವೇಗಮಿತಿ ಪ್ರಕರಣದಲ್ಲಿ ನಿಯಮ ಉಲ್ಲಂಘಿಸಿದ ನೂರ ಇಪ್ಪತ್ತೆಂಟು ಮಂದಿಗೆ ತಲಾ ಇನ್ನೂರು ದಿರ್ಹಂ ದಂಡ ವಿಧಿಸಲಾಗಿದೆ ಎಂದರು .
Filed under: Gulf Newz | Leave a Comment »
Posted on May 27, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಕುಂದಾಪುರ : ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66 ರ ಪೆಟ್ರೋಲ್ ಬಂಕ್ ಬಳಿ ಇಂದು ಬೆಳಿಗ್ಗೆ 8 ಗಂಟೆ ಸುಮಾರಿಗೆ ನಡೆದ ಖಾಸಗಿ ಬಸ್ ಮತ್ತು ಬೈಕ್ ಅಪಘಾತದಲ್ಲಿ ಬೈಕ್ ಸವಾರ ಕೋಟೇಶ್ವರದ ಸುಹಾಸ್ ಶೆಟ್ಟಿ(27ವ.) ಮ್ರತಪಟ್ಟಿದ್ದಾರೆ. ತೀವ್ರವಾಗಿ ಗಾಯಗೊಂಡ ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮದ್ಯದಲ್ಲಿ ಕೊನೆಯುಸಿರೆಳದಿದ್ದಾರೆ.
ಮ್ರತ ಸುಹಾಸ್ ಕೋಟೇಶ್ವರದ ಶೇಖರ್ ಶೆಟ್ಟಿ ಎನ್ನುವವರ ಪುತ್ರನಾಗಿದ್ದು ಗುತ್ತಿಗೆದಾರರೊಬ್ಬರ ಬಳಿ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದುಬಂದಿದೆ.
ಘಟನೆಯ ವಿವರ : ಬೆಳಿಗ್ಗೆ ಕೋಟೇಶ್ವರದಿಂದ ಕುಂದಾಪುರದೆಡೆಗೆ ಬೈಕ್ ನಲ್ಲಿ ಸಾಗುತ್ತಿರುವ ಸಂದರ್ಭ ಎದುರಿನಿಂದ ಬಂದ ಖಾಸಗಿ ಬಸ್ಸೊಂದು ಬೈಕ್‌ಗೆ ಮುಖಾಮುಖಿಯಾಗಿ ಡಿಕ್ಕಿಹೊಡೆದಿದೆ. ಪರಿಣಾಮವಾಗಿ ಗಾಯಗೊಂಡ ಸುಹಾಸ್ ನನ್ನು ಹತ್ತಿರದ ಆಸ್ಪತ್ರೆಗೆ ಕೊಂಡೊಯ್ಯುವ ಪ್ರಯತ್ನ ಮಾಡಲಾಯಿತಾದರು ದಾರಿಮದ್ಯೆ ಮ್ರತಪಟ್ಟಿರುತ್ತಾನೆ. ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷ್ಯ ಮತ್ತು ಬಸ್ ಸಾಗಿಬಂದ ತಪ್ಪು ಮಾರ್ಗವೇ (ರಾಂಗ್ ರೂಟ್) ಕಾರಣ, ಮತ್ತು ಸ್ಥಳದಲ್ಲಿ ಚತುಷ್ಪತ ಕಾಮಗಾರಿ ನಡೆದಿದ್ದು ಏಕಮುಖ ಸಂಚಾರ (ಒನ್ ವೇ) ಮಾರ್ಗವಾಗಿದ್ದರು ಕೂಡ ಬಸ್ ಚಾಲಕ ನಿಯಮ ಉಲ್ಲಂಘಿಸಿ ಬಸ್ ಚಲಾಯಿಸಿದ್ದು ಘಟನೆಗೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಕುಂದಾಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವರದಿ : ಯೋಗಿಶ್, ಕಂಭಾಶಿ.
Filed under: State Newz, Udupi | Leave a Comment »
Posted on May 27, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ಬಂಟ್ವಾಳ : ಮಂಗಳೂರು ಎಜ್ಯುಕೇಶನ್ ಎನ್‌ಹ್ಯಾಸ್‌ಮೆಂಟ್ ಟ್ರಸ್ಟ್ ಇದರ ಎರಡನೇ ಶೈಕ್ಷಣಿಕ ಘಟಕವಾಗಿ ಬಂಟ್ವಾಳ ತಾಲೂಕಿನ ಮೆಲ್ಕಾರ್ ಸಮೀಪದ ಮಾರ್ನಬೈಲ್‌ನ ಮಹಿಳಾ ಪದವಿಪೂರ್ವ ಕಾಲೇಜಿನಲ್ಲಿ ಪ್ರಸ್ತುತ ಶೈಕ್ಷಣಿಕ ವರ್ಷದಿಂದ ಪದವಿ ಕೋರ್ಸ್‌ಗಳಾದ ಬಿ.ಎ. ಹಾಗೂ ಬಿ.ಕಾಂ ತರಗತಿಗಳನ್ನು ಆರಂಭಿಸಲು ರಾಜ್ಯ ಸರಕಾರ ಶಿಫಾರಸ್ಸು ಮಾಡಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 27, 2012 by ವಿಶ್ವ ಕನ್ನಡಿಗ ನ್ಯೂಸ್


ಮುಂಬಯಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ತಮ್ಮ ನವಜಾತ ಶಿಶುವಿನೊಂದಿಗೆ ಶುಕ್ರವಾರ ಮನೆಗೆ ಮರಳಿದ್ದಾರೆ.ಇಲ್ಲಿನ ಹಿಂದೂಜಾ ಆಸ್ಪತ್ರೆಯಲ್ಲಿ ಶಿಲ್ಪಾ ಶೆಟ್ಟಿ ಮೇ 21ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ಸಂದರ್ಭದಲ್ಲಿ ಶಿಲ್ಪಾ ಪತಿ ಉದ್ಯಮಿ ರಾಜ್ ಕುಂದ್ರಾ ಸಹ ಜೊತೆಯಲ್ಲಿದ್ದು ಮಗುವನ್ನು ಎತ್ತಿಕೊಂಡಿದ್ದರು . ಆಸ್ಪತ್ರೆಯ ಹೊರಗೆ ಬರುತ್ತಿದ್ದಂತೆ ಅಭಿಮಾನಿಗಳತ್ತ ಕೈಬೀಸಿದ ಶಿಲ್ಪಾ ಅವರಿಗೆ ವಿಶ್ ಮಾಡಿದರು .
Filed under: Film Duniya | Leave a Comment »
Posted on May 27, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಮಂಗಳೂರು : ಜಿಲ್ಲೆಯ ಮಾಧ್ಯಮ ರಂಗಕ್ಕೆ ಮತ್ತೊಂದು ಗರಿ ಸೇರ್ಪಡೆಗೊಂಡಿದೆ. ಎಂ.ಜಿ. ರಹೀಂ ನೇತೃತ್ವದ ‘ತುಳುನಾಡ ನ್ಯೂಸ್’ ಎಂಬ ಕನ್ನಡ ಮಾಸ ಪತ್ರಿಕೆ ಗುರುವಾರ ಲೋಕಾರ್ಪಣೆಗೊಂಡಿತು.
ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶ್ರೀದೇವಿ ಎಜ್ಯುಕೇಶನ್ ಟ್ರಸ್ಟ್ ಚೆಯರ್‌ಮೆನ್ ಸದಾನಂದ ಶೆಟ್ಟಿ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಇದೇ ವೇಳೆ ‘ತುಳುನಾಡನ್ಯೂಸ್.ಕಾಂ’ ಎಂಬ ವೆಬ್‌ಸೈಟ್ ಚಾನೆಲ್‌ಗೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ವಕ್ಫ್ ಬೋರ್ಡ್ ಸದಸ್ಯ ಹಾಜಿ ವೈ. ಮುಹಮ್ಮದ್ ಕುಂಞಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಐವನ್ ಡಿ’ಸೋಜ, ತುಳುನಾಡ ಐಕ್ಯತಾ ವೇದಿಕೆಯ ಅಧ್ಯಕ್ಷ ಎ.ಎ. ಹೈದರ್ ಪರ್ತಿಪ್ಪಾಡಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಹರೀಶ್ ರೈ ಪಿ.ಬಿ., ತುಳುನಾಡ ರಕ್ಷಣಾ ವೇದಿಕೆಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಡಾ. ನಿರಂಜನ ಉಪ್ಪಿನಂಗಡಿ, ಬಶೀರ್ ಬೈಕಂಪಾಡಿ, ದಿನಕರ್ ಉಳ್ಳಾಲ ಮೊದಲಾದವರು ಶುಭ ಹಾರೈಕೆಯ ಮಾತುಗಳನ್ನಾಡಿದರು.
This slideshow requires JavaScript.
ನೋಟರಿ-ನ್ಯಾಯವಾದಿ ಎಂ.ಬಿ. ಅಬ್ದುಲ್ ರಹಿಮಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹುಸೈನ್ ಕಾಟಿಪಳ್ಳ ಸ್ವಾಗತಿಸಿ, ಪತ್ರಿಕೆಯ ಸಂಪಾದಕ ಎಂ.ಜಿ. ರಹೀಂ ವಂದಿಸಿದರು. ಕೆ.ಕೆ. ಪೇಜಾವರ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ಶೋಭಾ ಭಾಸ್ಕರನ್ ಹಾಗೂ ತಂಡದಿಂದ ಸಂಗೀತ ರಸಮಂಜರಿ ಮತ್ತು ಆರ್.ಕೆ. ಆರ್ಟ್ಸ್ ಚಿಣ್ಣರ ಮನೆ ವಿಟ್ಲ ಇವರಿಂದ ‘ತುಳುನಾಡ ವೈಭವ’ ನೃತ್ಯ ರೂಪಕ ಪ್ರದರ್ಶನಗೊಂಡಿತು.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 27, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ಬಂಟ್ವಾಳ : ಜಿಲ್ಲಾ ದಾರಿಮೀಸ್ ಎಸೋಸಿಯೇಶನ್ ಇದರ ವತಿಯಿಂದ ತ್ವರೀಖತ್ ಕ್ಲಾಸ್ ಹಾಗೂ ಅಜ್ಮೀರ್ ಮೌಲಿದ್ ಮಜ್ಲಿಸ್ ಕಾರ್ಯಕ್ರಮ ಮೇ. ೨೯ ರಂದು ಮಾರಿಪಳ್ಳ ಸುಜೀರ್‌ಗುಡ್ಡೆ ಮದ್ರಸಾ ವಠಾರದಲ್ಲಿ ನಡೆಯಲಿದೆ.
ನಂದಿ ದಾರುಸ್ಸಲಾಂ ಪ್ರೊಫೆಸರ್ ಮೌಲಾನಾ ಅಬ್ದುಲ್ ಬಾರಿ ಉಸ್ತಾದ್ ತಲಿಪ್ಪರಂಬು ವಿಷಯ ಮಂಡನೆಗೈಯುವರು. ಫರಂಗಿಪೇಟೆ ಎಂಜೆಎಂ ಕಾರ್ಯದರ್ಶಿ ಎಫ್. ಮುಹಮ್ಮದ್ ಬಾವಾ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 27, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ಬಂಟ್ವಾಳ : ಬೈಕ್ ಹಾಗೂ ಕೆಎಸ್‌ಆರ್‌ಟಿಸಿ ಬಸ್ಸು ನಡುವೆ ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಶನಿವಾರ ಸಂಜೆ ಪಾಣೆಮಂಗಳೂರು ಸಮೀಪದ ಮೆಲ್ಕಾರ್ ಎಂಬಲ್ಲಿ ನಡೆದಿದೆ.
ವಿಟ್ಲ ಕಸಬಾ ಗ್ರಾಮದ ಶಿವಾಜಿ ನಗರ ನಿವಾಸಿ ನಾಗಪ್ಪ ಪೂಜಾರಿ ಎಂಬವರ ಪುತ್ರ ನೀಲೇಶ್ ಪೂಜಾರಿ (30) ಎಂಬವರು ಮಂಗಳೂರಿನಿಂದ ವಿಟ್ಲಕ್ಕೆ ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಪುತ್ತೂರಿನಿಂದ ಮಂಗಳೂರು ಕಡೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸು ಮೆಲ್ಕಾರ್ ಪೆಟ್ರೋಲ್ ಬಂಕ್ ಬಳಿ ಬೈಕ್‌ಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಅಪಾಘತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ನೀಲೇಶ್ ಪೂಜಾರಿ ಅವರನ್ನು ಸ್ಥಳೀಯರು ಸೇರಿಕೊಂಡು ತಕ್ಷಣ ಆಸ್ಪತ್ರೆಗೆ ಸಾಗಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 26, 2012 by ಕೆ.ಎಂ. ಮಹಮ್ಮದ್ ಅನ್ಸಾರ್ ಬೆಳ್ಳಾರೆ (ಅಲ್ಫಾ).

ಮೂಡಿಗೆರೆ :ಇತ್ತೀಚಿಗೆ ಉಡುಪಿಯಲ್ಲಿ jc ಉದ್ಯಾವರ, ಕುತ್ಪಾಡಿಯಲ್ಲಿ ನಡೆದ ರಾಜ್ಯಮಟ್ಟದ ಕರ್ನಾಟಕ ಸಾಂಸ್ಕೃತಿಕ ಹಬ್ಬದಲ್ಲಿ ಮೂಡಿಗೆರೆ jc ಸದಸ್ಯರು ಘಟಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿ ದ್ವಿತೀಯ ಸ್ಥಾನ ಪಡೆದರು. jc ಅಣ್ಣನಾಯಕ್, jc ಟಿ ಹರೀಶ್, ಜೆಸಿ ಪ್ರಸನ್ನ, ಜೆಸಿ ರವಿಕುಮಾರ್, jc ರೋಹಿತ್, ಜೆಸಿ ರಾಜೇಶ್, jc ಪ್ರವೀಣ್, jc ಮಣಿಕಂಠ, jc ಅಶೋಕ್ ಹಾಗು ಸದಸ್ಯರು ಭಾಗವಹಿಸಿದ್ದರು.
Filed under: State Newz, Udupi | Leave a Comment »
Posted on May 26, 2012 by ಅಶ್ರಫ್ ಮಂಜ್ರಾಬಾದ್
ಲಕ್ನೋ : ಉತ್ತರ ಪ್ರದೇಶ : ಮುಖ್ಯಮಂತ್ರಿ ಅಖಿಲೇಶ್ ಸಿಂಗ್ ಯಾದವ್ ರಾಜಿನಾಮೆಯಿಂದ ತೆರವಾಗಿರುವ ಕನೌಜ್ ಲೋಕಸಭಾ ಕ್ಷೇತ್ರದಿಂದ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಅವರ ಪತ್ನಿ ಡಿಂಪಲ್ ಯಾದವ್ ಕಣಕ್ಕೆ ಇಳಿಯಲಿದ್ದಾರೆ . ಪಕ್ಷ ಈ ಕುರಿತು ಇದುವರೆಗೂ ಅಧಿಕೃತ ಘೋಷಣೆ ಮಾಡಿಲ್ಲವಾದರೂ ಅಲ್ಲಿನ ಸ್ಥಳೀಯ ಸಮಿತಿಗಳು ಮತ್ತು ಜಿಲ್ಲಾ ಸಮಿತಿಗಳು ಡಿಂಪಲ್ ಯಾದವ್ ಅವರ ಹೆಸರನ್ನು ಸೂಚಿಸಿ ಅವರನ್ನೇ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವಂತೆ ಕೋರಿದೆ.
ಇಂದು ನಡೆಯುವ ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಸಭೆಯ ನಂತರ ಈ ಕುರಿತ ಅಧಿಕೃತ ಪ್ರಕಟಣೆ ಹೊರಬೀಳುವ ಸಾಧ್ಯತೆ ಇದೆ. ಕನೌಜ್ ಕ್ಷೇತ್ರದಲ್ಲಿ ಜೂನ್ ಇಪ್ಪತ್ತನಾಲ್ಕನೇ ತಾರೀಕು ಮತದಾನ ನಡೆಯಲಿದ್ದು ಇದಕ್ಕಾಗಿ ಮೇ ಮೂವತ್ತರಿಂದ ನಾಮಪತ್ರ ಸಲ್ಲಿಕೆಯ ಕಾರ್ಯ ಆರಂಭವಾಗಲಿದೆ . ಜೂನ್ ಇಪ್ಪತ್ತೇಳರಂದು ಮತ ಎಣಿಕೆ ನಡೆಯಲಿದೆ . ಡಿಂಪಲ್ ಈ ಹಿಂದೆ ೨೦೦೯ ರಲ್ಲಿ ಫಿರೋಜಾಬಾದ್ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ್ ಬಬ್ಬರ್ ವಿರುದ್ಧ ಸ್ಪರ್ಧಿಸಿ ಸೋಲು ಕಂಡಿದ್ದರು . ಈ ಬಾರಿ ಟಿಕೆಟ್ ಸಿಕ್ಕರೆ ಇದು ಅವರಿಗೆ ಎರಡನೇ ಉಪ ಚುನಾವಣೆಯಾಗಲಿದೆ.
Filed under: National Newz, Uttar Pradesh | Leave a Comment »
Posted on May 26, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
(ವಿಕೆ ನ್ಯೂಸ್ ಓದುಗಾರನ ಕೆಲವೊಂದು ಸಂಶಯಗಳು)

ಈ ವರ್ಷದ ಅವಧಿಯ ಕ್ರಿಕೆಟ್ ವೀಕ್ಷಿಸಿದ ಅಪ್ಪಟ ಅಭಿಮಾನಿಗಳಿಗೆ ಕ್ರಿಕೆಟ್ ಆಟದ ಬಗ್ಗೆ ಕೆಲವು ಸಂಶಯಗಳಿಗೆ ಉತ್ತರ ಸಿಗಬೇಕಿದೆ. ಬೇರೆ ಯಾವುದೇ ಹಳೆಯ ಬೇರುಗಳನ್ನು ಕೆದಕಲು ನಾನು ಇಲ್ಲಿ ಇಷ್ಟಪಡುವುದಿಲ್ಲ. ಬರೀ ನಿನ್ನೆಯ (25.05.2012) ರಂದು ನಡೆದ ಡೆಲ್ಲಿ ವರ್ಸಸ್ ಚೆನ್ನೈ ಅರ್ಹತಾ ಸುತ್ತಿನ ಪಂದ್ಯದಲ್ಲಿ ನಿಜವಾದ ಕ್ರಿಕೆಟ್ ಅಭಿಮಾನಿಯ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಅದರಲ್ಲಿ ಕೆಲವೊಂದು ಪ್ರಶ್ನೆಗಳು ಈ ಕೆಳಗಿನಂತಿವೆ,
1. ಸಿಕ್ಸರ್ ಎತ್ತುವುದನ್ನೇ ಇಷ್ಟಪಡುವ ಸೆಹ್ವಾಗ್ ಟಾಸ್ ಗೆದ್ದರೂ ಯಾಕಾಗಿ ಬೌಲಿಂಗನ್ನು ಆಯ್ದುಕೊಂಡರು.
2. ಹೆಚ್ಚಿನ ವಿಕೆಟ್ ಕಬಳಿಸಿದ ಪಟ್ಟಿಯಲ್ಲಿರುವ ಮೊರ್ಕೆಲ್ ಅವರನ್ನು ಹಾಗೂ ಸ್ಪಿನ್ನರ್ ನದೀಮ್ ರನ್ನು ಯಾಕಾಗಿ ಹೊರಗಿರಿಸಿದರು.
3. ಸವ್ಯಸಾಚಿ ಇರ್ಫಾನ್ ಪಠಾಣ್ ರನ್ನು ಹೊರಗಿರಿಸಿ ಗುಪ್ತ ಅವರನ್ನು ಆಡಿಸಿದ ಒಳಗುಟ್ಟೇನು ?
ಈ ಬದಲಾವಣೆ ಮಾಡಲು ಕೋಚ್ ಅಥವಾ ಸ್ವತಃ ನಾಯಕನ ತೀರ್ಮಾನವೇ ಅಂತಿಮವಾದರೂ ಈ ಮೇಲಿನ ಬದಲಾವಣೆಗಳು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ. ಒಂದು ವೇಳೆ ಮೋಸದಾಟಕ್ಕೆ ಸಿಲುಕಿಸಿ ಚೆನ್ನೈ ತಂಡಕ್ಕೆ ಈ ಕಪ್ ಕೊಡಬೇಕೆನ್ನುವ ಉದ್ದೇಶವಿದ್ದಲ್ಲಿ ಈಗಲೇ ಆ ಕಪ್ ಕೊಟ್ಟು ಬಡಪಾಯಿ ಅಭಿಮಾನಿಗಳ ನೈಜ ಆವೇಶಕ್ಕೆ ಕಡಿವಾಣ ಹಾಕಬೇಕಾಗಿದೆ. ಈಗಾಗಲೇ ಹಗರಣಗಳ ಸಂಕಷ್ಟಕ್ಕೆ ಸಿಲುಕಿರುವ 20-20 ಆವೃತಿಯನ್ನು ನಿಷೇಧಿಸಿ ಆಟದ ಸ್ವಚಂದತೆಯನ್ನು
ಕಾಪಾಡಬೇಕಾದ ಜವಾಬ್ದಾರಿ ಭಾರತೀಯ ಕ್ರಿಕೆಟ್ ಮಂಡಳಿಯ ಮೇಲಿದೆ. ಆದರೆ ನೈಜ ಅಭಿಮಾನಿಗಳ ಈ ಕೂಗು ನೋಟಿನ ಕಂತೆಯಲ್ಲಿ ಜೀವನವನ್ನು ಚೆಲ್ಲಾಡುವ ಆಡಳಿತ ಮಂದಿಗಾಗಲಿ, ಸ್ವಿಜ್ ಬ್ಯಾಂಕಿನಿಂದ ಕಪ್ಪು ಹಣದ ಲೆಕ್ಕಾಚಾರವನ್ನು ಬಿಳಿಯಾಗಿಸಲು ಅಹೋರಾತ್ರಿ ಶ್ರಮಿಸುತ್ತಿರುವ “ಅಪ್ಪಟ” ಭಾರತೀಯ ಉದ್ಯಮಿಗಳಿಗಾಗಲಿ ಅಥವಾ ನರ್ತಕಿ ರಂಗಿನಾಟದ ಹಿಂದೆ ಕೆಂಪು ದೀಪದಡಿಯಲ್ಲಿ ಕುಡಿದು ತೇಗುತ್ತಿರುವ ಕೆಲವು ಹಿರಿಯ ಆಟಗರರಿಗಾಗಲಿ ಕೇಳಿಸುವುದಿಲ್ಲವೆನ್ನುವುದೇ ಬಹು ಬೇಸರದ ಸಂಗತಿ.
- ಅಬ್ದುಲ್ ಆಜೇಜ್, ದುಬೈ – ಮಂಗಳೂರು.
Filed under: Articles, Sports Newz | 3 Comments »
Posted on May 26, 2012 by ಅಶ್ರಫ್ ಮಂಜ್ರಾಬಾದ್
ದುಬೈ : ಭಾರತದಲ್ಲಿ ಪೆಟ್ರೋಲ್ ಬೇರೆ ಏರಿಕೆಯಾಗಿ ಜನಗಳಿಗೆ ತೊಂದರೆಯಾಗುತ್ತಿದ್ದರೆ ಇತ್ತ ಯುಎಇ ಸರ್ಕಾರ
ಪೆಟ್ರೋಲ್ ಬೆಲೆಯಲ್ಲಿ ಭಾರೀ ಪ್ರಮಾಣದ ಕಡಿತ ಮಾಡುವುದಾಗಿ ಪ್ರಕಟಿಸಿದೆ. ಈ ಪ್ರಸ್ತಾಪವನ್ನು ಫೆಡರಲ್ ನ್ಯಾಷನಲ್ ಕೌನ್ಸಿಲ್ ಅಂಗೀಕರಿಸಿದ್ದು ಅನುಮೋದನೆಗಾಗಿ ಕ್ಯಾಬಿನೆಟ್ ಗೆ ಕಳುಹಿಸಲಾಗಿದೆ . ಈಗ ಯುಎಇ ಯಲ್ಲಿ ಪೆಟ್ರೋಲ್ ದರ ಪ್ರತೀ ಲೀಟರ್ ಗೆ ಒಂದು ದಿರ್ಹಂ ಎಪ್ಪತ್ತೆರಡು ಫಿಲ್ಸ್ ( ಅಂದರೆ ಭಾರತದ ಸುಮಾರು ಇಪ್ಪತ್ತೊಂದು ರೂಪಾಯಿ ) ದರವಿದೆ . ಇದೀಗ ಈ ದರದಲ್ಲಿ ಶೇಖಡ ಅರವತ್ತರಷ್ಟು ಕಡಿಮೆಯಾಗಲಿದೆ. ಸರ್ಕಾರದ ಈ ತೀರ್ಮಾನದಿಂದ ಜನತೆ ಸಂತೋಷಗೊಂಡಿದ್ದು ಇದನ್ನು ಸ್ವಾಗತಿಸಿದ್ದಾರೆ.
ಯು.ಎ.ಇ ಯಲ್ಲಿ ಉತ್ಪಾದನಾ ವೆಚ್ಚಕ್ಕಿಂತ ಸಾಗಾಣಿಕೆಯ ವೆಚ್ಚ ಹೆಚ್ಚಾಗಿದ್ದು ಇದರಿಂದ ಹಲವು ಕಂಪೆನಿಗಳ ವಸ್ತುಗಳಿಗೆ ಸಾಗಾಣಿಕ ಹೊರೆ ಬೀಳುತ್ತಿತ್ತು . ಇದೀಗ ಈ ತೀರ್ಮಾನದಿಂದ ಕೈಗಾರಿಕೆಗಳಿಗೂ ಲಾಭವಾಗಲಿದೆ. ದುಬೈನಲ್ಲಿ ಕೆಲಸ ನಿರ್ವಹಿಸುವ ಭಾರತೀಯ ಮೂಲದ ಬಹುತೇಕ ಮಂದಿ ತಮ್ಮ ವಾಸಕ್ಕಾಗಿ ಶಾರ್ಜಾ ಮತ್ತು ಸುತ್ತ ಮುತ್ತಲ ಪ್ರದೇಶಗಳಲ್ಲಿ ವಸತಿ ಸಂಕೀರ್ಣಗಳನ್ನು ಪಡೆದು ಅಲ್ಲಿ ವಾಸಿಸುತ್ತಿದ್ದರು . ಇಂತಹವರು ಪ್ರತೀ ದಿನದ ದುಡಿಮೆಯಲ್ಲಿ ಸ್ವಲ್ಪ ಹಣ ಪೆಟ್ರೋಲ್ ಖರ್ಚಿಗೆ ವ್ಯಯಿಸಬೇಕಾಗಿತ್ತು. ಈಗ ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿನ ಹಣ ಉಳಿಯಲಿದ್ದು ಈ ತೀರ್ಮಾನ ಸಂತಸ ತಂದಿರುವುದಾಗಿ ಭಾರತೀಯ ಮೂಲದ ನಾಗರೀಕರು ಸಹ ಹೇಳಿದ್ದಾರೆ.
Filed under: Gulf Newz | Leave a Comment »
Posted on May 26, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ಪೆಟ್ರೋಲ್ ದರವನ್ನು ದುಪ್ಪಟ್ಟು ಏರಿಸಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಭಾರತೀಯ ಮಜ್ದೂರ್ ರಿಕ್ಷಾ ಚಾಲಕರ ಸಂಘದ ಆಶ್ರಯದಲ್ಲಿ ಶುಕ್ರವಾರ ಬಿ ಸಿ ರೋಡಿನಲ್ಲಿ ಹೆದ್ದಾರಿ ತಡೆ ಹಾಗೂ ಪ್ರತಿಭಟನೆ ನಡೆಯಿತು.
ಹದಿನೈದು ನಿಮಿಷಗಳಷ್ಟು ಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಳಿತ ಪ್ರತಿಭಟನಾಕಾರರು ಕೇಂದ್ರ ಸರಕಾರದ ತೈಲ ಬೆಲೆ ಏರಿಕೆ ನೀತಿಯ ವಿರುದ್ದ ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನುದ್ದೇಶಿಸಿ ಬಿಜೆಪಿ ಮುಖಂಡರಾದ ತುಂಗಪ್ಪ ಬಂಗೇರ, ಗೋವಿಂದ ಪ್ರಭು, ಸಂಘದ ಅಧ್ಯಕ್ಷ ಸದಾನಂದ ನಾವೂರು ಮಾತನಾಡಿದರು.

ಪ್ರತಿಭಟನಾಕಾರರು ಹೆದ್ದಾರಿ ತಡೆ ನಡೆಸಿದುದರಿಂದ ಸುಮಾರು ಅರ್ಧ ಗಂಟೆಗಳಿಗೂ ಹೆಚ್ಚು ಕಾಲ ಬಿ ಸಿ ರೋಡಿನಲ್ಲಿ ಟ್ರಾಫಿಕ್ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು. ಬಳಿಕ ತಾಲೂಕು ತಹಶೀಲ್ದಾರ್ ಕಛೇರಿಗೆ ತೆರಳಿದ ಪ್ರತಿಭಟನಾಕಾರರು ತಹಶೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರಾರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 26, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ಕನಿಷ್ಠ ಕೂಲಿಗೆ ಆಗ್ರಹಿಸಿ ಜಿಲ್ಲೆಯಾದ್ಯಂತ ಬೀಡಿ ಕಾರ್ಮಿಕರು ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟ ಮುಷ್ಕರ ನಡೆಸುತ್ತಿದ್ದರೆ, ಇತ್ತ ಬೀಡಿ ಬ್ರಾಂಚ್‌ವೊಂದು ಕಾರ್ಯನಿರ್ವಹಿಸುತ್ತಿದೆ ಎಂದು ಆರೋಪಿಸಿ ಬೀಡಿ ಬ್ರಾಂಚ್‌ಗೆ ಕಾರ್ಮಿಕ ಸಂಘಟನೆಯ ಸದಸ್ಯರು ಮುತ್ತಿಗೆ ಹಾಕಿದ ಘಟನೆ ಶನಿವಾರ ಬೆಳಿಗ್ಗೆ ಬಿ ಸಿ ರೋಡಿನಲ್ಲಿ ನಡೆದಿದೆ.

ಇಲ್ಲಿನ ಎನ್ ಕೆ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣದಲ್ಲಿ ಕಾರ್ಯಾಚರಿಸುತ್ತಿರುವ ಕಂಪೆನಿಯೊಂದರ ಬೀಡಿ ಬ್ರಾಂಚ್ ಶನಿವಾರವಾಗಿರುವುದರಿಂದ ಎಂದಿನಂತೆ ವಾರಾಂತ್ಯದ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಂಡಿತ್ತು. ಬೀಡಿ ಕಾರ್ಮಿಕರ ಸಂಘಟನೆಯ ಮುಷ್ಕರದ ಬಗ್ಗೆ ಅರಿವಿಲ್ಲದ ಇಲ್ಲಿನ ಬೀಡಿ ಕಾರ್ಮಿಕರು ತಮ್ಮ ಬೀಡಿಗಳನ್ನು ಬ್ರಾಂಚಿಗೆ ತಂದು ತಮ್ಮ ಮಜೂರಿಗಾಗಿ ಸಾಲುಗಟ್ಟಿ ನಿಂತಿದ್ದರು. ಈ ವೇಳೆ ಬ್ರಾಂಚಿಗೆ ಮುತ್ತಿಗೆ ಹಾಕಿದ ಕಾರ್ಮಿಕ ಸಂಘಟನೆಯ ಸದಸ್ಯರು ಬೀಡಿ ಬ್ರಾಂಚನ್ನು ಮುಚ್ಚಿಸಿದರು ಎನ್ನಲಾಗಿದೆ. ಈ ಸಂದರ್ಭ ಸಂಘಟನೆಯ ಸದಸ್ಯರು ಹಾಗೂ ಮಜೂರಿಗಾಗಿ ಕಾಯುತ್ತಿದ್ದ ಬೀಡಿ ಕಾರ್ಮಿಕರ ಮಧ್ಯೆ ಮಾತಿನ ಚಕಮಕಿಯೂ ನಡೆಯಿತು. ತಾವು ತಂದ ಬೀಡಿಯನ್ನು ಬ್ರಾಂಚಿಗೆ ಒಪ್ಪಿಸಿ ಮಜೂರಿ ಪಡೆಯದೆ ವಾಪಾಸು ಹೋಗುವುದಿಲ್ಲ ಎಂದು ಪಟ್ಟು ಹಿಡಿದ ಕಾರ್ಮಿಕರು ಸಂಘಟನೆಯ ಸದಸ್ಯರಿಗೇ ಸವಾಲೆಸೆದರು ಎನ್ನಲಾಗಿದೆ.
ಈ ಸಂದರ್ಭ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಂಟ್ವಾಳ ನಗರ ಪೊಲೀಸ್ ಪ್ರಭಾರ ಠಾಣಾಧಿಕಾರಿ ಕೇಪುಗೌಡ ಅವರು ಎರಡೂ ಕಡೆಯವರೊಂದಿಗೆ ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರಾರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 26, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಮುಂಬಯಿ : ರಾಷ್ಟ್ರದ ಆಥಿಕ ರಾಜಧಾನಿ ಮುಂಬಯಿಯಲ್ಲಿ ಎರಡು ದಿನಗಳ ಮೊದಲು ಆರಂಭಗೊಂಡ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಾವೇಶವನ್ನು ರಾಷ್ಟ್ರೀಯ ಹಿರಿಯ ನಾಯಕ ಎಲ್.ಕೆ ಅಡ್ವಾಣಿ ದೀಪ ಬೆಳಗಿಸಿ ಉದ್ಘಾಟಿಸಿದರು. ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ, ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಎಸ್ ಈಶ್ವರಪ್ಪ, ಕರ್ನಾಟಕ ರಾಜ್ಯದ ಸಚಿವರುಗಳಾದ ಎಸ್.ಸುರೇಶ್ ಕುಮಾರ್, ಗೋವಿಂದ ಕಾರಜೋಳ, ಜಗಧೀಶ್ ಶೆಟ್ಟರ್, ರಾಷ್ಟ್ರದ ಪ್ರಭಾವೀ ಧುರೀಣರುಗಳಾದ ಅರಣ್ ಜೇಟ್ಲಿ, ರಾಜನಾಥ್ ಸಿಂಗ್, ವೆಂಕಯ್ಯ ನಾಯ್ಡು, ಸುಷ್ಮಾ ಸ್ವರಾಜ್, ಉಮಾ ಭಾರತಿ, ಮೇನಕ ಗಾಂಧಿ, ಹೇಮ ಮಾಲಿನಿ, ವಿಜಯರಾಜೇ ಸಿಂಧಿಯಾ, ಗೋಪಿನಾಥ್ ಮುಂಧೆ, ನವಜೀತ್ ಸಿದ್ಧು, ಮುಂಬಯಿ ಪ್ರದೇಶ ಬಿಜೆಪಿ ಅಧ್ಯಕ್ಲ ರಾಜ್ ಪುರೋಹಿತ್, ಬೋರಿವಿಲಿ ಕ್ಷೇತ್ರದ ಮಹಾರಾಷ್ಟ್ರ ರಾಜ್ಯದ ಶಾಸಕ ಗೋಪಾಲ್ ಸಿ.ಶೆಟ್ಟಿ ಸೇರಿದಂತೆ ಕ್ಷದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ರಾಷ್ಟ್ರೀಯ ಮುಖಂಡರು ಸೇರಿದಂತೆ ರಾಷ್ಟ್ರದಾದ್ಯಂತದ ಸುಮಾರು 600ಕ್ಕೂ ಅಧಿಕ ಪಕ್ಷದ ಸಕ್ರೀಯ ಕಾರ್ಯಕರ್ತರು-ಸದಸ್ಯರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಗುಜರಾತ್ ರಾಜ್ಯದ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಮಾತ್ರ ಸಮಾವೇಶದಲ್ಲಿ ಗೈರು ಹಾಜರಿಯಾಗಿದ್ದು ಎದ್ದು ಕಾಣುತಿತ್ತು.
ಕಾರ್ಯಕಾರಿ ಸಮಾವೇಶಡ ಕೊನೆಯ ದಿನವಾದ ನಿನ್ನೆ ಮುಂದಿನ ಅವಧಿಗೆ ಪ್ರಸಕ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ಗಡ್ಕರಿ ಅವರೇ ಪುನಾರಾಯ್ಕೆಗೊಂಡರು. ಗಡ್ಕರಿ ಅವನ್ನು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅವರು ಅಭಿನಂದಿಸಿ ಶುಭಹಾರೈಸಿದರು. ಇದೇ ಮೊದಲ ಬಾರಿಗೆ ಬಿಜೆಪಿಯ ಸಂವಿಧಾನಕ್ಕೆ ತಿದ್ದುಪಡಿ ತಂದು ಹಾಲಿ ಅಧ್ಯಕ್ಷ ನಿತಿನ್ ಗಡ್ಕರಿ ಅವರನ್ನು ಅಧ್ಯಕ್ಷರನ್ನಾಗಿ ಮತ್ತೆ 3 ವರ್ಷಕ್ಕೆ ಮುಂದುವರಿಸಲು ಬಿಜೆಪಿ ಕಾರ್ಯಕಾರಿಣಿ ಒಪ್ಪಿಗೆ ಸೂಚಿಸಿತು. ಆರ್ಎಸ್‌ಎಸ್ ಕೂಡ ಗಡ್ಕರಿಯವರನ್ನು ಮುಂದುವರಿಸಲು ಒಲವು ತೋರಿತ್ತು. ಈ ಬಗ್ಗೆ ತೀವ್ರ ಅಸಮಾಧಾನಗೊಂಡಿರುವ ಆಡ್ವಾಣಿ, ಅನಾವಶ್ಯಕವಾಗಿ ಪಕ್ಷದಲ್ಲಿ ಆರ್ಎಸ್‌ಎಸ್ ಹಸ್ತಕ್ಷೇಪ ಮಾಡುತ್ತಿದೆ ಎಂದಿದ್ದರು.
Filed under: Maharashtra, National Newz | Leave a Comment »
Posted on May 26, 2012 by ರಫೀಕ್ ದಲ್ಕಾಜೆ,ಕೋಲ್ಪೆ

ಬೆಂಗಳೂರು: ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕಾಗಿ ಕಾಳಜಿ ಇಟ್ಟು ನಿಸ್ವಾರ್ಥದಿಂದ ಸೇವೆ ಸಲ್ಲಿಸಿದ ಮುಂಬಯಿಯ ಕಲಾ ಸಂಘಟಕ ಪ್ರೊ| ವೆಂಕಟೇಶ ಪೈ ಅವರಿಗೆ 13.05.2012 ರಂದು ಬೆಂಗಳೂರು ನಗರದ ಟೌನ್ ಹಾಲಿನಲ್ಲಿ ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಭಾರತ ರತ್ನ ಸರ್ ವಿಶ್ವೇಶ್ವರಯ್ಯ ಪ್ರತಿಷ್ಠಾನ ಬೆಂಗಳೂರು ಇದರ ಆಶ್ರಯದಲ್ಲಿ ಜರುಗಿದ ಅಖಿಲ ಕರ್ನಾಟಕ ತೃತೀಯ ಕವಿ ಸಮ್ಮೇಳನದಂದು ಅಧ್ಯಕ್ಷರಾದ ಡಾ| ಪಂಚಾಕ್ಷರಿ ಹಿರೇಮಠ, ಖ್ಯಾತ ಹಿರಿಯ ಚಲನ ಚಿತ್ರ ಕಲಾವಿದರಾದ ಶ್ರೀ ಶಿವರಾಂ, ಪ್ರಸಿದ್ಧ ಚಲನ ಚಿತ್ರ ನಟಿ ಕುಮಾರಿ ರೂಪಿಕ ರಮೇಶ ಸುರ್ವೆ ಮೊದಲಾದವರು ಪ್ರೊ| ವೆಂಕಟೇಶ ಪೈ ಅವರಿಗೆ ಕರ್ನಾಟಕ ಜ್ಯೋತಿ ರಾಜ್ಯ ಪ್ರಶಸ್ತಿಯನ್ನು ಪ್ರಧಾನಿಸಿದರು.
Filed under: Bengaluru Nagara, State Newz | Leave a Comment »
Posted on May 26, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಹಾವೇರಿ: ಇಲ್ಲಿಗೆ ಸಮೀಪದ ಬಂಕಾಪುರ ಪಟ್ಟಣದ ಮುಖ್ಯಬೀದಿಗೆ ಹೊಂದಿಕೊಂಡಂತಿರುವ ಅಕ್ಕಪಕ್ಕದ ಬೀದಿಗಳಲ್ಲಿ ವಾಸಿಸುತ್ತಿರುವ ಮೂಲತಃ ಬೆಳಗಾವಿ ಜಿಲ್ಲೆ ಸವದತ್ತಿಯವರಾದ ತಾನಾಬಾಯಿ, ಮೈನಾಬಾಯಿ ಇಬ್ಬರೂ ಹತ್ತಿರ-ಹತ್ತಿರ 105 ವಯಸ್ಸಿನವರಾಗಿದ್ದು, ಶತಾಯುಷಿಗಳಾಗಿರುವ ಇವರು ಈಗಲೂ ಗಟ್ಟಿಮುಟ್ಟಾಗಿದ್ದು, ತಮ್ಮ ಮೊಮ್ಮಕ್ಕಳ ಮಕ್ಕಳನ್ನು ಆಡಿಸುತ್ತಾ ಹಳೆ ಬೇರಿಗೆ ಹೊಸ ಚಿಗುರು ಸೇರಿದರೆ ಮರ ಸೊಗಸು ಎನ್ನುವಂತೆ ಈ ಅಜ್ಜಿಯಂದಿರದು ಬತ್ತದ ಜೀವನೋತ್ಸಾಹ.
ತಾನಾಬಾಯಿಯವರನ್ನು ಸೋಮಸಿಂಗ್ ಟೋಪಣ್ಣನವರ ಹಾಗೂ ಸಹೋದರಿ ಮೈನಾಬಾಯಿಯನ್ನು ದುರ್ಗಾರಾಮಸಿಂಗ್ ಅವರನ್ನು ವಿವಾಹವಾಗಿದ್ದರು. ಇವರು ಅವಳಿ ಸಹೋದರಿಯರು, ತಾನಾಬಾಯಿ ಮತ್ತು ಸೋನುಬಾಯಿ ಹಾವೇರಿ ಜಿಲ್ಲೆ ಶಿಗ್ಗಾವಿ ತಾಲೂಕು ಬಂಕಾಪುರ ಪಟ್ಟಣದ ರಜಪೂತರ ಓಣಿಯಲ್ಲಿರುವ ಟೋಪಣ್ಣನವರ ಕುಟುಂಬದ ಸಹೋದರರನ್ನೇ ವರಸಿ ಮದುವೆಯಾಗಿ ನೂರು ವರ್ಷದ ತುಂಬು ಜೀವನ ನಡೆಸಿದವರು.
ಕುಟುಂಬ ವರ್ಗದವರ ನಿಖರ ಮಾಹಿತಿಯಂತೆ ಸವದತ್ತಿಯಲ್ಲಿ 1905ರಲ್ಲಿ ಈ ಅವಳಿ ಜವಳಿಗಳಾದ ತಾನಾಬಾಯಿ ಮತ್ತು ಸೋನುಬಾಯಿ ಜನಿಸಿದ್ದಾರೆ. ಹೀಗಾಗಿ ಇವರಿಗೆ ಈಗ 105 ವರ್ಷ ವಯಸ್ಸು ಎಂದು ಖಚಿತವಾಗಿ ಹೇಳುತ್ತಾರೆ ಕುಟುಂಬ ವರ್ಗದವರು.
ತಾನಾಬಾಯಿಯವರ ಹಿರಿಯ ಮಗ ನರಸಿಂಗ್ ಅವರಿಗೆ ಈಗ 71 ವರ್ಷ ವಯಸ್ಸು, ಉಳಿದವರೆಲ್ಲ ಇವರಿಗಿಂತ ಚಿಕ್ಕವರು. ತಾನಾಬಾಯಿಗೆ ಒಟ್ಟು 9 ಜನ ಗಂಡು, 10 ಜನ ಹೆಣ್ಣು ಮಕ್ಕಳು, ಮೈನಾಬಾಯಿಗೆ 5 ಗಂಡು, ಇಬ್ಬರು ಹೆಣ್ಣು ಮಕ್ಕಳು. ಇವರ ಮಕ್ಕಳು, ಮೊಮ್ಮಕ್ಕಳು, ಗಿರಿಮೊಮ್ಮಕ್ಕಳು ಸೇರಿ ಕುಟುಂಬದ ಸಂಖ್ಯೆ ನೂರು ದಾಟುತ್ತದೆ.
ಹಿರಿಯಳಾದ ತಾನಾಬಾಯಿ ಯಜಮಾನ ಕೃಷಿಕರು, ಹೀಗಾಗಿ ತಾನಾಬಾಯಿ ಕೂಡ ಕೃಷಿಯೊಂದಿಗೆ ಬೆರೆತು ಹೋಗಿದ್ದರು, ತೀರ ಇತ್ತೀಚಿನ ಕೆಲ ತಿಂಗಳವರೆಗೂ ತಾನಾಬಾಯಿ ಹೊಲದಲ್ಲೇ ಇದ್ದು ಬೆಳೆ ರಕ್ಷಣೆ, ಜಾನುವಾರು ಸಂರಕ್ಷಣೆ ಕೆಲಸ ಮಾಡುತ್ತಿದ್ದಳು ಎಂದು ಹೆಮ್ಮೆಯಿಂದ ಹೇಳುತ್ತಾರೆ ಆಕೆಯ ಮಕ್ಕಳು.
ಈ ಅಜ್ಜಿಯ ಹಲ್ಲುಗಳು ಇನ್ನೂ ಗಟ್ಟಿಯಾಗಿವೆ. ಇವರ ಮಗನ ಹಲ್ಲುಗಳು ಆಗಲೇ ಬಿದ್ದು ಹೋಗಿವೆ. ಇದು ತಲೆಮಾರಿನ ಅಂತರವನ್ನು, ಆಹಾರ ಪದ್ಧತಿಯನ್ನು ತೋರುತ್ತದೆ. ಸೋನುಬಾಯಿಯವರ ಪತಿ ಶಿಕ್ಷಕರಾಗಿದ್ದರು, ಹೀಗಾಗಿ ಅವರಿಗೆ ಒಂದಿಷ್ಟು ಸುಖ ಸಿಕ್ಕಿದ್ದು ಇನ್ನೂ ಗಟ್ಟಿಮುಟ್ಟಾಗಿದ್ದಾರೆ, ತಾನಾಬಾಯಿ ಹೆಚ್ಚು ಹೊಲದಲ್ಲಿ ಕೆಲಸ ಮಾಡುತ್ತಿದ್ದುದರಿಂದ ಸ್ವಲ್ಪ ಸೊರಗಿದ್ದಾರೆ, ಆದರೂ ಕೂಡ ಅವರಲ್ಲಿ ಇನ್ನೂ ಜೀವನೋತ್ಸಾಹ ಕುಗ್ಗಿಲ್ಲ.

ಆಶ್ಚರ್ಯ ಎಂದರೆ ಈ ಇಬ್ಬರೂ ಅವಳಿ ಸಹೋದರಿಯರು ಅವಳಿ-ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಾನಾಬಾಯಿಗೆ ಅವಳಿ ಗಂಡು ಮಕ್ಕಳಾದರೆ ಮೈನಾಬಾಯಿಗೆ ಅವಳಿ ಹೆಣ್ಣು ಮಕ್ಕಳು. ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು, ಗಿರಿಮೊಮ್ಮಕ್ಕಳನ್ನು ನೋಡಿರುವ ಈ ಅಜ್ಜಿಯರಿಗೆ ಈಗಿನ ಆಹಾರ ಪದ್ಧತಿಯ ಬಗ್ಗೆ ಬೇಸರವಿದೆ. ದುಡಿಯದೆ ಕುಳಿತು ಉಣ್ಣುವ ಈಗಿನ ಜನರ ಬಗ್ಗೆ ಬಹಳಷ್ಟು ನಿರಾಶೆ ಕೂಡ ಇದೆ.
ಹಾವೇರಿ ಜಿಲ್ಲೆಯ ರಜಪೂತ ಸಮಾಜದಲ್ಲಿ ಅತಿ ಹೆಚ್ಚು ವಯಸ್ಸಿನ ಶತಾಯುಷಿಗಳು, ಹಿರಿಯರೂ ಆದ ತಾನಾಬಾಯಿ ಮತ್ತು ಸೋನುಬಾಯಿ ಅವಳಿ ಸೋದರಿಯರಿಗೆ ಮೇ.26ರಂದು ಹಾವೇರಿಯಲ್ಲಿ ರಜಪೂತ ಸಮಾಜ ಹಮ್ಮಿಕೊಂಡಿರುವ ಮಹಾರಾಣಾ ಪ್ರತಾಪಸಿಂಹ 473ನೇ ಜಯಂತಿ ಕಾರ್ಯಕ್ರಮದಲ್ಲಿ ಸನ್ಮಾನಿಸುವ ಮೂಲಕ ತಲೆಮಾರಿನಿಂದ ತಲೆಮಾರಿನ ಹಿರಿಯ ತಲೆಗಳನ್ನು ಗೌರವಿಸುವ ಮೂಲಕ ಈ ಹಿರಿಯ ಜೀವಗಳನ್ನು ಗೌರವಿಸುತ್ತಿದ್ದಾರೆ.
ಈ ಇಳಿವಯಸ್ಸಿನಲ್ಲಿಯೂ ಸಹ ಈ ಶತಾಯುಷಿ ಅಜ್ಜಿಯಂದಿರು ಪರಸ್ಪರ ಬಿಟ್ಟಿರಲಾರದ ಅನ್ಯೋನ್ಯ ಪ್ರೀತಿ, ವಿಶ್ವಾಸ ಇವರದ್ದು. ಇವರು ಮಕ್ಕಳಿಂದ ಗಿರಿಮೊಮ್ಮಕ್ಕಳವರೆಗೂ ಸಾಲು-ಸಾಲು ಪ್ರೀತಿ ಉಂಡು ಬೆಳೆದವರಾಗಿದ್ದು, ಇದೀಗ ಸೊಸೆಯಂದಿರ ಆರೈಕೆಯಲ್ಲಿ ತಮ್ಮ ಉಳಿದ ದಿನಗಳನ್ನು ಕಳೆಯುತ್ತಿದ್ದಾರೆ.
-ಮಾಲತೇಶ ಅಂಗೂರ, ಹಾವೇರಿ. (ವರದಿಗಾರರು, ವಿಕೆ ನ್ಯೂಸ್)
Filed under: Haveri, State Newz | Leave a Comment »
Posted on May 26, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಸುಳ್ಯ : ಶ್ರೀಕಾಶಿ ಮಠ ಸಂಸ್ಥಾನದ ವ್ಯಾಸ ರಘುಪತಿ ರಥವು ಸುಳ್ಯದಿಂದ ಬೆಳ್ಳಾರೆ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನಕ್ಕೆ ಮೇ.25ರಂದು ಆಗಮಿಸಿತು.
ರಥವನ್ನು ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಣಿಕ್ಕಾರ ಗೋಪಾಲಕೃಷ್ಣ ಶ್ಯಾನುಭಾಗ್ ಸೇರಿದಂತೆ ಮೊಕ್ತೇಸರರು ಹಾಗೂ ಊರ ಹತ್ತು ಸಮಸ್ತರು ಸ್ವಾಗತಿಸಿದರು. ರಥದೊಡನೆ ಆಗಮಿಸಿದ ವೇದಮೂರ್ತಿ ಸುಧಾಕರ ಭಟ್ ಶ್ರೀವೆಂಕಟ್ರಮಣ ದೇವರ ಮತು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಪ್ರಾರ್ಥನೆ ನೆರವೇರಿಸಿ, ಭಕ್ತಾದಿಗಳಿಗೆ ಪ್ರಸಾದ ವಿತರಿಸಿದರು. ಶ್ರೀಮಠದ ಮುಷ್ಠಿ ಕಾಣಿಕಾ ಕೆಲಸವನ್ನು ದೇವಸ್ಥಾನದ ಪ್ರತಿಷ್ಠಾ ದಿನವಾದ ಜೂ.೧೦ರಂದು ನೆರವೇರಿಸಲು ಈ ಸಂದರ್ಭದಲ್ಲಿ ನಿರ್ಧರಿಸಲಾಯಿತು. ಬೆಳ್ಳಾರೆ ವರ್ತಕರ ಸಂಘದ ಅಧ್ಯಕ್ಷ ರಾಜೇಶ್ ಶ್ಯಾನುಭಾಗ್, ಹಿಂದೂ ಜಾಗರಣ ವೇದಿಕೆಯ ಸಂಚಾಲಕ ಕರುಣಾಕರ ಗೌಡ ಬರಮೇಲು ಮತ್ತಿತರರು ಉಪಸ್ಥಿತರಿದ್ದರು.
ಚಿತ್ರ :ಪ್ರೇಮ್ ಬೆಳ್ಳಾರೆ, ವರದಿ : ಉಮೇಶ್ ಮಣಿಕ್ಕಾರ.
Filed under: Dakshina Kannada, State Newz | Leave a Comment »
Posted on May 26, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ವಿಶ್ವಕನ್ನಡಿಗ ಪ್ರತಿಭಾ ರಂಗ ಒಂಬತ್ತನೇ ಸಂಚಿಕೆ – ನಿತಿನ್ ರೈ, ಕುಕ್ಕುವಳ್ಳಿ ಸಾರಥ್ಯ..

ಯುವಜನರು ಹೆಚ್ಚಾಗಿ ಮಾರು ಹೋಗುತ್ತಿರುವ ಕ್ಷೇತ್ರ ಬಣ್ಣದ ಕ್ಷೇತ್ರ, ಕೆಲವರಿಗೆ ನಟರಾಗುವ ಹಂಬಲ, ಇನ್ನು ಕೆಲವರಿಗೆ ನಿರ್ದೇಶಕನಾಗುವ ತವಕ, ಮತ್ತೆ ಕೆಲವರಿಗೆ ಯಾವುದಾದರು ಸರಿ ಮಾದ್ಯಮ ಕ್ಷೆತ್ರದಲ್ಲಿ ಸಾಧನೆ ಮಾಡಬೇಕು ಅನ್ನೋ ಆಸೆ. ದೂರದ ಬೆಟ್ಟ ನುಣ್ಣಗೆ ಅನ್ನೋ ಹಾಗೆ ಮಾಧ್ಯಮ ಹಾಗು ಬಣ್ಣ ತುಂಬಿದ ಕ್ಷೇತ್ರ ನೋಡಲು ಸುಲಭ ಆದರೆ ಅಲ್ಲಿ ಶಾಶ್ವತವಾಗಿ ನೆಲೆ ನಿಲ್ಲಬೇಕಾದರೆ ಶ್ರದ್ದೆ, ಕೆಲಸದ ಮೆಲಿನ ಪ್ರೀತಿ ಎಲ್ಲಕ್ಕಿಂತಲೂ ಹೆಚ್ಚಾಗಿ ತಾಳ್ಮೆ ಅತಿ ಮುಖ್ಯವಾದುದು. ನಮ್ಮ ಇಂದಿನ ಪ್ರತಿಭೆ ಇದೆಲ್ಲವನ್ನು ತನ್ನಲ್ಲಿ ಅಳವಡಿಸಿಕೊಂಡು ಶೂನ್ಯದಿಂದ ಮೇಲೆದ್ದು ಇಂದು ಗಳಿಕೆಯಲ್ಲಿ ಶತಕ ಬಾರಿಸಿದ ಸಾಧಕ. ಯಾರದೇ ಬೆಂಬಲವಿಲ್ಲದೆ ತನ್ನ ಸ್ವಸಾಮರ್ಥ್ಯದಿಂದ ಮೇಲೆಬಂದ ಅಪ್ರತಿಮ ಪ್ರತಿಭೆ. ಪ್ರಸ್ತುತ ಕನ್ನಡದ ಪ್ರಸಿದ್ದ ಸುದ್ದಿ ಸಂಸ್ಥೆ ಟಿವಿ 9 ಇದರ ವಾರ್ತಾವಾಚಕ ಹಾಗು ವರದಿಗಾರನಾಗಿರುವ ಶೇಷ ಕೃಷ್ಣ. ನಮ್ಮ ಇಂದಿನ ಪ್ರತಿಭಾರಂಗದ “ಪ್ರತಿಭೆ”.


ಹುಟ್ಟಿದ್ದು ಪುತ್ತೂರು ತಾಲೂಕಿನ ನಿಡ್ಪಳ್ಳಿ ಗ್ರಾಮದ ನುಲಿಯಾಳು ಎಂಬಲ್ಲಿ. ಚಿಕ್ಕ ವಯಸ್ಸಿನಲ್ಲೇ ಯಕ್ಷಗಾನ ಕಲೆಯಲ್ಲಿ ಹೆಸರಾಂತ ಹಾಗು ಹಿರಿಯ ಅನೇಕ ಕಲಾವಿದರ ಜೊತೆ ರಂಗಸ್ಥಳವನ್ನ ಹಂಚಿಕೊಂಡ ಹೆಗ್ಗಳಿಕೆ ಶೇಷ ಕೃಷ್ಣನದ್ದು. ಮುಂಡೂರು ಶಾಲೆಯಲ್ಲಿ ತನ್ನ ಪ್ರಾಥಮಿಕ ಹಾಗು ಬೆಟ್ಟಂಪಾಡಿ ನವೋದಯ ಪ್ರೌಡಶಾಲೆಯಲ್ಲಿ ಪ್ರೌಡಶಿಕ್ಷಣ ಪೂರೈಸಿದ ಶೇಷ ಕೃಷ್ಣ ಪುತ್ತೂರಿನ ಪ್ರತಿಷ್ಟಿತ ವಿವೇಕಾನಂದ ಕಾಲೇಜ್ ನಲ್ಲಿ ಡಿಗ್ರೀ ವಿಧ್ಯಾಬ್ಯಾಸವನ್ನ ಪೂರ್ಣಗೊಳಿಸಿದನು. ವಿವೇಕಾನಂದದಲ್ಲಿ ಇರುವಾಗ ಪತ್ರಿಕೋದ್ಯಮ ಹಾಗು ಫೋಟೋಗ್ರಫಿ ಕ್ಲೌಬ್, ನಾಟಕ, ನಿರೂಪಣೆ ಹಾಗು ಕಾಲೇಜಿನ ಯಾವುದೇ ಕಾರ್ಯಕ್ರಮವಿರಲಿ ಅದರಲ್ಲಿ ತನ್ನನ್ನ ತಾನು ತೊಡಗಿಸಿಕೊಳ್ಳುತ್ತಿದ್ದ ಶೇಷ ಕೃಷ್ಣ, ಮಾಧ್ಯಮ ಕ್ಷೇತ್ರದಲ್ಲೇ ತನ್ನ ಜೀವನವನ್ನ ಅರಸ ತೊಡಗಿದ. ಕಾಲೇಜ್ ದಿನಗಳಲ್ಲೂ ಯಕ್ಷಗಾನದಲ್ಲಿ ತನ್ನನ್ನ ತಾನು ತೊಡಗಿಸಿಕೊಂಡಿದ್ದ. ತದ ನಂತರ ಬೆಂಗಳೂರು ಪ್ರವೇಶಿಸಿದ ಶೇಷ ಕೃಷ್ಣ ಟಿವಿ 9 ನ ವರದಿಗಾರನಾಗಿ ಕಾರ್ಯನಿರ್ವಹಿಸತೊಡಗಿದ. ಶೇಷ ಕೃಷ್ಣನ ಪ್ರತಿಭೆಯನ್ನ ಗಮನಿಸಿದ ಟಿವಿ 9 ಇತನಿಗೆ ವಾರ್ತಾವಾಚಕನಾಗಿ ಅವಕಾಶ ನೀಡಿತು. ಅದನ್ನ ಸಮರ್ಪಕವಾಗಿ ನಿರ್ವಹಣೆ ಮಾಡಿದ ಹೆಗ್ಗಳಿಕೆ ಇತನದು.


ಶೇಷ ಕೃಷ್ಣ ಇನ್ನು ಮುಂದಿನ ದಿನಗಳಲ್ಲೂ ಸುದ್ದಿ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಲಿ ಅನ್ನೋದು ವಿಶ್ವಕನ್ನಡಿಗ ಪ್ರತಿಭಾರಂಗದ ಮನಃ ಪೂರ್ವಕ ಹಾರೈಕೆ.
Filed under: Articles | Leave a Comment »
Posted on May 26, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಉಡುಪಿ : ಪೆಟ್ರೋಲ್ ಬೆಲೆ ದಿನದಿಂದ ದಿನಕ್ಕೆ ಏರುವುದಕ್ಕೆ ಅಭಿವೃದ್ದಿಶೀಲ ದೇಶಗಳು, ಅಭಿವೃದ್ದಿ ಹೊಂದುತ್ತಿರುವ ದೇಶಗಳ ವಿರುದ್ದ ಹೂಡುತ್ತಿರುವ ಒಟ್ಟಾರೆ ಒಂದು ಜಾಗತಿಕ ಶೀತಲ ಯುದ್ಧ ಇದು. ಇದನ್ನು ನಮ್ಮ ದೇಶದ ಅರ್ಥ ಶಾಸ್ತ್ರಜ್ಞರು, ರಾಷ್ಟ್ರಪತಿ, ರಾಯಭಾರಿಗಳು ತೀವ್ರವಾಗಿ ಚಿಂತಿಸಿ ಬಲಿಷ್ಠ ರಾಷ್ಟ್ರಗಳ ತಂತ್ರಗಾರಿಕೆಗೆ ಕಡಿವಾಣ ಹಾಕಬೇಕು. ಅದರಲ್ಲೋ ದೇಶದಾದ್ಯಂತ ಅತೀ ಹೆಚ್ಚು ಬೆಲೆ ಕರ್ನಾಟಕದಲ್ಲಿಯೇ ಕಂಡಿರುವುದು ಖಂಡನೀಯ, ವಿಷಾದಕರ ಸಂಗತಿ. ಕೇಂದ್ರ ಮತ್ತು ರಾಜ್ಯ ಸರ್ಕಾರ ಆದಷ್ಟು ಬೇಗ ಕ್ರಮ ಕೈಗೊಳ್ಳಬೇಕಾದ್ದು ಅಗತ್ಯ ಎಂದು “ಜಮಾತೆ ಇಸ್ಲಾಂ ಹಿಂದ್” ಮತ್ತು “ಜಯಕರ್ನಾಟಕ” ಸಂಘಟನೆಗಳು ನಿನ್ನೆ (ಮೇ .25) ಉಡುಪಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದವು.
ಜಮಾತೆ ಇಸ್ಲಾಂ ಹಿಂದ್ ನ ಉಡುಪಿ ಘಟಕದ ಯೂತ್ ವಿಂಗ್ ಉಡುಪಿ ತಾಲೂಕು ಕಚೇರಿ ಮುಂದೆ ಪ್ರತಿಭಟನೆಯನ್ನು ಕೈಗೊಂಡಿತು. ಹುಸೇನ್, ಇಂದ್ರಿಸ್ ಹೂಡೆ, ಅದಲ್, ಮಹಮ್ಮದ್ ಮುಂತಾದವರು ಭಾಗವಹಿಸಿದ್ದರೆ, ಉಡುಪಿ ತಹಶಿಲ್ದಾರರ ಕಚೇರಿ ಮುಂದೆ ದಿವಾಕರ ಶೆಟ್ಟಿ, ಸುಧಾಕರ ರಾವ್, ನಾಗರಾಜ್ ಗಾಣಿಗರ ನೇತೃತ್ವದಲ್ಲಿ ಜಯಕರ್ನಾಟಕ ಸಂಘಟನೆ ಪ್ರತಿಭಟನೆ ನಡೆಸುವಲ್ಲಿ ಯಶಸ್ವಿಕಂಡಿತು.
ವರದಿ : ಶಿವಕುಮಾರ್, ಹೊಸಂಗಡಿ.
Filed under: State Newz, Udupi | Leave a Comment »
Posted on May 26, 2012 by ರಫೀಕ್ ದಲ್ಕಾಜೆ,ಕೋಲ್ಪೆ

ಪುತ್ತೂರು: ಬೀಡಿ ಕಾರ್ಮಿಕರಿಗೆ ಕನಿಷ್ಟ ಕೂಲಿ ರೂ.116.20 ಪೈನ್ನು ಎಪ್ರಿಲ್ 1ರಿಂದಲೇ ಜಾರಿಗೊಳಿಸಬೇಕೆಂದು ಕರ್ನಾ ಟಕ ರಾಜ್ಯ ಸರಕಾರವನ್ನು ಒತ್ತಾಯಿಸಿ ಪುತ್ತೂರು ತಾಲೂಕು ಬೀಡಿ ಕೆಲಸಗಾರರ ಸಂಘ ಮತ್ತು ಸಿಐಟಿಯು ನೇತೃತ್ವದಲ್ಲಿ ಅನಿರ್ಧಿಷ್ಟಾವಧಿ ಮುಷ್ಕರವುಮೇ 25ರಂದು ಮಂಜಲ್ಪಡ್ಪು ಗಣೇಶ್ ಬೀಡಿ ವಕ್ಸರ್ಸ್ ಕಛೇರಿ ಮುಂದೆ ಆರಂಭಗೊಂಡಿದೆ. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರ್ಯ ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಭಟನಾಕಾರರು ಸ್ಥಳದಲ್ಲೇ ಗಂಜಿಊಟದ ವ್ಯವಸ್ಥೆಯನ್ನು ಮಾಡಿಕೊಂಡಿದ್ದಾರೆ. ಸಿಐಟಿಯು ತಾಲೂಕು ಕಾರ್ಯದರ್ಶಿ ಪಿ.ಕೆ. ಸತೀಶನ್ ಮತ್ತಿತರರು ಉಪಸ್ಥಿತರಿದ್ದಾರೆ.
ಕೃಪೆ: ಸುದ್ದಿ, ಪುತ್ತೂರು.
Filed under: Dakshina Kannada, State Newz | Leave a Comment »
Posted on May 26, 2012 by ಅಶ್ರಫ್ ಮಂಜ್ರಾಬಾದ್
This slideshow requires JavaScript.
ಮನಾಮ , ಬಹರೈನ್ : 35 ವಸಂತಗಳನ್ನು ಕಂಡ ರಾಜ್ಯ ಪ್ರಶಸ್ತಿ ವಿಜೇತ “ಕನ್ನಡ ಸಂಘ ಬಹರೈನ್” ಕಳೆದ 18 ನೇ ಶುಕ್ರವಾರದಂದು ” ವಸಂತೋತ್ಸವ -2012 “ನ್ನು ಅದ್ದೂರಿಯಿಂದ ಆಚರಿಸಿತು.ಸ್ಥಳೀಯ “ ಸಾಂಸ್ಕೃತಿಕ ಸಭಾಂಗಣ “ದಲ್ಲಿ ಇದೇ ವೇದಿಕೆಯಲ್ಲಿ ರಾಜ್ ಕುಮಾರ್ ಅಧ್ಯಕ್ಷತೆಯ 2012 – 13 ರ ಸಾಲಿನ ಸಂಘದ ನೂತನ ಆಡಳಿತ ಸಮಿತಿಯ ” ಪದ ಗ್ರಹಣ ” ಸಮಾರಂಭವೂ ನೆರವೇರಿತು. ಈ ದಿನದ ಗಣ್ಯಾತಿಗಣ್ಯರನ್ನು ಪೂರ್ಣಕುಂಭ,ಚೆಂಡೆ ಮೇಳದ ವೈಭವದ ಮೆರವಣಿಗೆಯೊಂದಿಗೆ ಹೃದಯಂಗಮವಾಗಿ ವೇದಿಕೆಗೆ ಕರೆ ತರಲಾಯಿತು.

ಈ ಸಂಜೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಪ್ರಧಾನ ಕಾರ್ಯದರ್ಶಿ ಶ್ರೀ ರಾಜೇಶ್ ಶೆಟ್ಟಿ ಸ್ವಾಗತಿಸಿದ ಬಳಿಕ ಶ್ರೀ ರಾಜ್ ಕುಮಾರ್ ಅಧ್ಯಕ್ಷೀಯ ಭಾಷಣವನ್ನು ಮಾಡಿದರು.ಈ ವಿಶೇಷ ಸಮಾರಂಭದಲ್ಲಿ ಶ್ರೀ ಕ್ಷೇತ್ರ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ ಶ್ರೀ ಭೀಮೇಶ್ವರ ಜೋಷಿಯವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೂತನ ಸಮಿತಿಗೆ ಶುಭ ಹಾರೈಸಿದರು. ಶ್ರೀ ಜೋಷಿಯವರು ಮಾತನಾಡುತ್ತಾ “ಕನ್ನಡದ ಕಲೆ-ಸಂಸ್ಕೃತಿ ಯನ್ನು ಈ ವಿದೇಶಿ ಮಣ್ಣಿನಲ್ಲಿ ಪೋಷಿಸಿ ಬೆಳಸಿದ ತನ್ಮೂಲಕ ಕನ್ನಡದ ನಿಜಾರ್ಥದ ಸೇವೆಯನ್ನು ಮಾಡುವ ಎಲ್ಲಾ ಕನ್ನಡಿಗರನ್ನು ಪ್ರಶಂಸಿದರು. ಇಲ್ಲಿನ ಕನ್ನಡ ಸಂಘವು ಒಂದು ಮಾದರಿ ಸಂಘವಾಗಿ ಬೆಳೆದು ನಿಂತಿದ್ದು ಇನ್ನೂ ಮುಂದಕ್ಕೂ ಕನ್ನಡದ ಕೀರ್ತಿ ಪತಾಕೆಯನ್ನು ಬಾನೆತ್ತೆರಕೆ ಹಾರಿಸಲಿ , ಈ ಮುಖೇನ ತಾಯಿ ಭುವನೇಶ್ವರಿಯ ಕೃಪಾಶೀರ್ವಾದ ಸದಾ ಎಲ್ಲರ ಮೇಲಿರಲಿ “ ಎಂದು ಶುಭಾಶೀರ್ವಚನವನ್ನಿತ್ತರು.


ಸಂಘದ ನೂತನ ಅಧ್ಯಕ್ಷ ಶ್ರೀ ರಾಜ್ ಕುಮಾರ್ ಹಾಗೂ ಇನ್ನಿತರ ಗಣ್ಯರು ಶ್ರೀ ಭೀಮೇಶ್ವರ ಜೋಷಿಯವರನ್ನು ಶಾಲು ಹೊದೆಸಿ, ಫಲ ಪುಷ್ಪ, ಹಾರ ಹಾಗೂ ವಿಶೇಷ ಸ್ಮರಣಿಕೆಯೊಂದಿಗೆ ದ್ವೀಪದ ಸಮಸ್ತ ಕನ್ನಡಿಗರ ಪರವಾಗಿ ಗೌರವಿಸಿದರು.ಸಭಾ ಸಮಾರಂಭದಲ್ಲಿ ಗೌರವಾನ್ವಿತ ಅತಿಥಿಗಳಾಗಿ ಬಹರೈನಿನ ಭಾರತೀಯ ರಾಯಭಾರಿ ಕಚೇರಿಯ ಪ್ರಥಮ ಕಾರ್ಯದರ್ಶಿಗಳಾದ ಶ್ರೀ ಅಜಯ್ ಕುಮಾರ್, ಹಾಗೂ ಗಣ್ಯರಾದ ರಾಮೀ ಸಮೂಹ ಸಂಸ್ಥೆಗಳ ಸಮೂಹ ಪ್ರಭಂದಕರಾದ ಶ್ರೀ ಶಾಂತಾರಾಮ್ ಶೆಟ್ಟಿ, I C R F ಮುಖ್ಯಸ್ಥ ಶ್ರೀ ಜಾನ್ ಐಯ್ಪ್, ಕಿಮ್ಸ್ ಬಹ್ರೈನ್ ನಿರ್ದೇಶಕ ಶ್ರೀ ಬೋಬನ್ ಇಡಿಕ್ಕುಲ, ಬಾರ್ಕೂರು ವಲಯದ ರೋಟರಿ ಅಧ್ಯಕ್ಷ ಶ್ರೀ ಅಬ್ದುಲ್ ಮುಬಾರಕ್ ಭಾಗವಹಿಸಿದ್ದರು . ಸಭಾ ಕಾರ್ಯಕ್ರಮದ ಕೊನೆಯ ಅಂಗವಾಗಿ ಜೊತೆ ಕಾರ್ಯದರ್ಶಿ ಶ್ರೀ ರಾಮ್ ಪ್ರಸಾದ್ ವಂದನಾರ್ಪಣೆ ಗೈದರು.
ಮುಂದೆ ಅನಾವರಣ ಗೊಂಡ ಸಾಂಸ್ಕೃತಿಕ ವೈಭವದಲ್ಲಿ ಕರುನಾಡಿಂದ ಆಗಮಿಸಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ನೃತ್ಯ ಜೋಡಿ ಶ್ರೀ ಸೂರ್ಯ ಯನ್ ರಾವ್ ಹಾಗೂ ಶ್ರೀಮತಿ ಪ್ರಥಮಾ ಪ್ರಸಾದ್ ರಾವ್ ಇವರು ಭಾರತೀಯ ನೃತ್ಯ ಪರಂಪರೆಯ “ಕೂಚುಪುಡಿ ” ಮತ್ತು “ಕಥಕ್ ” ಗಳ ಅಮೋಘ “ಜುಗಲ್ ಬಂದಿ” ಯನ್ನು ಪ್ರದರ್ಶಿಸಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು ನಾಟ್ಯ ಲೋಕದಲ್ಲಿ ಮೈ ಮರೆಯುವಂತೆ ಮಾಡಿದರು. ಇನ್ನೋರ್ವ ಅತಿಥಿ ಕಲಾವಿದ ಮೈಸೂರಿನ ಖ್ಯಾತ ಹಾಸ್ಯ , ಮಿಮಿಕ್ರಿ ಪಟು ಶ್ರೀ ರಮೇಶ್ ಬಾಬು ತಮ್ಮ ಹಾಸ್ಯ ಚಟಾಕಿ, ಮಿಮಿಕ್ರಿಯಿಂದ ಎಲ್ಲರನ್ನೂ ನಗೆ ಗಡಲಲ್ಲಿ ತೇಲಾಡಿಸಿದರು.


ಇವೆಲ್ಲವಕ್ಕೂ ಮುಕುಟವಿಟ್ಟಂತೆ ಸಂಘದ ಪ್ರತಿಭಾನ್ವಿತ ಕಲಾವಿದರು ತಮ್ಮ ಸುಂದರ ನೃತ್ಯ, ಗಾನಗಳಿಂದ ಸಭಿಕರ ಕಣ್ಮನ ರಂಜಿಸಿದರು. ಈ ವಿಶೇಷ ಉತ್ಸವದಲ್ಲಿ ಭಾಗವಿಸಿದ ಎಲ್ಲಾ ಕಲಾವಿದರುಗಳನ್ನು ಧರ್ಮಕರ್ತ ಶ್ರೀ ಭೀಮೇಶ್ವರ ಜೋಷಿ ಹಾಗೂ ಅಧ್ಯಕ್ಷ ಶ್ರೀ ರಾಜ್ ಕುಮಾರ್ ವಿಶೇಷ ಸ್ಮರಣಿಕೆಯೊಂದಿಗೆ ಗೌರವಿಸಿದರು.
ಸಂಘದ ಕಲಾವಿದರ ನೃತ್ಯಗಳನ್ನು ನಿರ್ದೇಶಿಸಿದ ಶ್ರೀಮತಿ ಹನ್ಸುಲ್ ಗನಿ, ಶ್ರೀಮತಿ ಚಂದ್ರಕಲಾ ಮೋಹನ್, ಕುಮಾರಿ ಸ್ಮೃತಿ ಶೆಟ್ಟಿ, ಕುಮಾರಿ ಸಂಧ್ಯಾ ದಾಮೋದರ್, ಕುಮಾರಿ ಕಾವ್ಯ ಶೆಟ್ಟಿ , ಕುಮಾರಿ ಹೆಯ್ಜಿಲ್ ಡೆಸ ಇವರನ್ನು ಈ ವೇದಿಕೆಯಲ್ಲಿ ಪುರಸ್ಕರಿಸಲಾಯಿತು.

2012 ನೇ ಸಾಲಿನ ಆರ್ಯಭಟ ಪ್ರಶಸ್ತಿ ಪುರಸ್ಕೃತ ದ್ವೀಪ ಕನ್ನಡಿಗ ಶ್ರೀ ಕಮಲಾಕ್ಷ ಅಮೀನ್ ಹಾಗೂ ಸಂಘದ ಮನೋರಂಜನಾ ಕಾರ್ಯದರ್ಶಿ ಶ್ರೀ ನವೀನ್ ಶೆಟ್ಟಿ ಕಾರ್ಯಕ್ರಮದ ನಿರೂಪಕರಾಗಿದ್ದರು.ಕಾರ್ಯಕ್ರಮದ ಕೊನೆಯಲ್ಲಿ ಮಲಬಾರ್ ಗೋಲ್ಡ್ ಪ್ರಾಯೋಜಕತ್ವದ ಲಕ್ಕಿ ಡ್ರಾದಲ್ಲಿ ಶ್ರೀ ಸತೀಶ್ ಉಳ್ಳಾಲ್ ಅವರು ಅದೃಷ್ಟಶಾಲಿ ವಿಜೇತರಾಗಿ ವಜ್ರದುಂಗುರ ತನ್ನದಾಗಿಸಿಕೊಂಡರು. expat properties ಪ್ರಾಯೋಜಕತ್ವದ ಅದೃಷ್ಟ ಶಾಲಿ ಡ್ರಾದಲ್ಲಿ ಶ್ರೀ ರಾಘವೇಂದ್ರ ಶೆಟ್ಟಿ ಅವರು ಮುತ್ತಿನ ನೆಕ್ಲೆಸ್ ನ್ನು ಪಡಕೊಂಡರು.ಈ ಕಾರ್ಯಕ್ರಮದ ಯಶಸ್ಸಿಗೆ ಮಲಬಾರ್ ಗೋಲ್ಡ್ ,ಕಂಟ್ರಿ ಕ್ಲಬ್, UAE exchange , Expat Properties ,ರಾಮೀ ಸಮೂಹ ಸಂಸ್ಥೆ, ಡೆಲ್ಟಾ ಸಂಸ್ಥೆ, ಹಾಗೂ ಶ್ರೀ ರಾಜೇಶ್ ಶೆಟ್ಟಿ ಮೊದಲಾದವರು ಪ್ರಾಯೋಜಕರಾಗಿ ಸಹಕರಿಸಿದ್ದರು.
ವರದಿ : ರಾಮ್ ಪ್ರಸಾದ್ ಅಮ್ಮೆನಡ್ಕ/ಬಹರೈನ್
Filed under: Gulf Newz | Leave a Comment »
Posted on May 25, 2012 by ವಿಶ್ವ ಕನ್ನಡಿಗ ನ್ಯೂಸ್

ಹಾಸನ : ಸಕಲೇಶಪುರದಲ್ಲಿ ಮರಳು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್ ಚಾಲಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಗುರುವಾರ ರಾತ್ರಿ ನಡೆದಿದೆ.ಸಕಲೇಶಪುರ ಪಟ್ಟಣದ ಟ್ಯಾಕ್ಟರ್ ಚಾಲಕ ಸುಬ್ರಹ್ಮಣ್ಯ(೩೩) ಮೃತ ವ್ಯಕ್ತಿ. ಕಳೆದ ರಾತ್ರಿ ಟ್ರ್ಯಾಕ್ಟರ್ ಚಾಲನೆ ಮಾಡಿಕೊಂಡು ಮನೆಗೆ ಮರಳುತ್ತಿದ್ದ ವೇಳೆ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಅಡ್ಡಗಟ್ಟಿ ಹಲ್ಲೆ ಮಾಡಿ, ಆಸ್ಪತ್ರೆಗೂ ಸೇರಿಸದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ ಎಂದು ಮೃತನ ಸಂಬಂಧಿಕರು ಆರೋಪಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡ ಸುಬ್ರಹ್ಮಣ್ಯ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಇದರಿಂದ ಕಂಗಾಲಾಗಿರುವ ಸುಬ್ರಹ್ಮಣ್ಯ ಕುಟುಂಬದವರು, ಈ ಸಾವಿಗೆ ಪಿ.ಡಬ್ಲ್ಯೂ.ಡಿ. ಅಧಿಕಾರಿಗಳೇ ಕಾರಣ ಎಂದು ಆರೋಪಿಸಿದ್ದಾರೆ. ಅಕ್ರಮ ಮರಳು ದಂಧೆಯೇ ಈ ಸಾವಿಗೆ ಕಾರಣವಾಗಿದ್ದು, ಆರೋಪಿಗಳನ್ನು ಬಂಧಿಸಬೇಕೆಂದು ಮೃತನ ಸಂಬಂಧಿ ಕಿರಣ್ ಆಗ್ರಹಿಸಿದ್ದಾರೆ.
- ಅಕ್ಬರ್ ಜುನೈದ್ . ವರದಿಗಾರರು .ವಿಕೆ ನ್ಯೂಸ್
Filed under: Hassana, State Newz | Leave a Comment »
Posted on May 25, 2012 by ವಿಶ್ವ ಕನ್ನಡಿಗ ನ್ಯೂಸ್

ಯುಪಿಎ ಸರ್ಕಾರ ತನ್ನ ಮೂರು ವರ್ಷದ ಅಧಿಕಾರ ಅವಧಿಯನ್ನು ಪೂರೈಸಿದೆ. ಈ ಸಮಯದಲ್ಲಿ ದೇಶದ ಸಾಮಾನ್ಯ ಜನರಿಗೆ ವಾರ್ಷಿಕೋತ್ಸವದ ಉಡುಗೊರೆಯಾಗಿ ಪೆಟ್ರೋಲ್ ಬೆಲೆಯಲ್ಲಿ ೭.೫ ರೂಪಾಯಿ ಏರಿಕೆ ಮಾಡಿದೆ. ಮೊದಲೇ ಬೆಲೆ ಏರಿಕೆಯಿಂದ ಕುಗ್ಗಿದ್ದ ಜನ ಸಾಮಾನ್ಯ ಇನ್ನಷ್ಟು ಕುಗ್ಗುವಂತೆ ಆಗಿದ್ದಾನೆ. ಸರ್ಕಾರ ಈ ಬಾರಿ ರುಪಾಯಿ ಅಪಮೌಲ್ಯ ಕಾರಣವಾಗಿ ನೀಡಿದೆ. ಹೌದು, ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ರುಪಾಯಿ ದಿನ ಕಳೆದಂತೆ ಅಪಮೌಲ್ಯಗೊಳ್ಳುತ್ತಿದೆ. ಇದರಿಂದಾಗಿ ತೈಲ ಕಂಪನಿಗಳ ಖರ್ಚು ಹೆಚ್ಚಾಗುತ್ತಿದೆ ಎಂಬುವುದು ಕೂಡ ನಿಜ .ಇದೇ ಕಾರಣ ನೀಡಿ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆ ಮಾಡಿದೆ ಮತ್ತು ಡಿಸೇಲ ಬೆಲೆ ಏರಿಕೆ ಮಾಡುವ ಬಗ್ಗೆ ಚಿಂತನೆ ನಡೆಸುತ್ತಾ ಇದೆ. ರುಪಾಯಿ ಅಪಮೌಲ್ಯಕ್ಕೆ ತೈಲ ಬೆಲೆ ಏರಿಕೆ ಪರಿಹಾರವೇ ? ಎಂಬುವುದು ಮಾತ್ರ ಜನ ಸಾಮಾನ್ಯನ ಉತ್ತರ ಸಿಗದ ಪ್ರಶ್ನೆಯಾಗಿದೆ.

ಇಲ್ಲಿ ರೂಪಾಯಿ ಅಪಮೌಲ್ಯ ಕ್ಕೆ ಪರಿಹಾರ ಕಂಡುಹಿಡಿಯುವ ಬದಲು , ಅದರ ಪರಿಣಾಮಕ್ಕೆ ತಾತ್ಕಾಲಿಕ ಪರಿಹಾರ ಕಂಡುಹಿಡಿಯಲಾಗಿದೆ. ಇದರಿಂದ ಪೆಟ್ರೋಲ್ ಕಂಪನಿಗಳ ಸಮಸ್ಯೆ ಏನೋ ಪರಿಹಾರವಾಗುತ್ತೆ. ಆದರೆ ಸಾಮಾನ್ಯ ಜನರಿಗೆ ದೊಡ್ಡ ಹೊರೆ. “ಕಾಂಗ್ರೆಸ್ ಕ ಹಾಥ್ ಆಮ್ ಆದ್ಮಿ ಕೆ ಸಾಥ್ ” ಅಂತ ಹೇಳಿ ಅಧಿಕಾರಕ್ಕೆ ಬಂದು ಇವತ್ತು, ಕಾಂಗ್ರೆಸ್ ಅದೇ ಆಮ್ ಆದ್ಮಿ ಯನ್ನು ಮರೆತುಬಿಟ್ಟಿದೆ. ಇವತ್ತು ರುಪಾಯಿ ಅಪಮೌಲ್ಯಗೊಂಡಿರಬಹುದು . ಆದರೆ ಅಂತರಾಷ್ಟ್ರಿಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಬೆಲೆ ಕೂಡ ಕಡಿಮೆಯಾಗಿದೆ . ಮಾರ್ಚ್–ಏಪ್ರಿಲ್ ತಿಂಗಳ ಸಮಯದಲ್ಲಿ ಮತ್ತು ಮೇ ಮೊದಲ ವಾರದ ಆಸುಪಾಸಿನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಬಾರೆಲ್ ಗೆ ೧೨೨ ಡಾಲರ್ ಇತ್ತು. ಅದರೆ ಪೆಟ್ರೋಲ್ ಬೆಲೆ ಈಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ೧೦೯ ಡಾಲರ್ ಗೆ ಇಳಿದಿದೆ. ಎಪ್ರಿಲ್ ಆಸುಪಾಸಿನಲ್ಲಿ ಡಾಲರ್ ಎದುರುಗಡೆ ೪೯ ಇದ್ದ ರುಪಾಯಿ ಬೆಲೆ ಈಗ ೫೬ ಕ್ಕೆ ಏರಿದೆ. ಅಂದರೆ ರುಪಾಯಿ ಅಪಮೌಲ್ಯಗೊಂಡಿದೆ. ಆದರೆ ತೈಲ ಕಂಪನಿಗಳ ಖರ್ಚು ಹೆಚ್ಚು ಕಮ್ಮಿ ಮಾರ್ಚ್ ತಿಂಗಳಿನಲ್ಲಿ ಎಷ್ಟಿತ್ತೋ ಅಷ್ಟೇ ಇದೆ. ಒಂದು ಕಡೆ ಏರಿದರೆ , ಇನ್ನೊಂದು ಕಡೆ ಇಳಿದಿದೆ.
ರೂಪಾಯಿ ಅಪಮೌಲ್ಯ ಮತ್ತು ಅಂತರಾಷ್ಟ್ರೀಯ ಮಾರುಕಟ್ಟೆಯ ತೈಲ ಬೆಲೆ ಪರಿಗಣನೆಗೆ ತೆಗೆದು ಲೆಕ್ಕ ಹಾಕಿದರೆ ಇವತ್ತು ೩೮ ರುಪಾಯಿಗೆ ಒಂದು ಲೀಟರ್ ಪೆಟ್ರೋಲ್ ತೈಲ ಕಂಪನಿಗೆ ದೊರೆಯುತ್ತದೆ. ತೈಲ ಕಂಪನಿ ಮತ್ತು ಮದ್ಯವರ್ತಿಗಳ ಖರ್ಚು ಮತ್ತೆ ಲಾಭ ಪ್ರತಿ ಲೀಟರ್ ಗೆ ೧೫ ರುಪಾಯಿ ದಾಟಲಾರದು. ಅಂದರೆ ತೆರಿಗೆ ಬಿಟ್ಟರೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೫೨ ರುಪಾಯಿ ದಾಟಲಾರದು. ಆದರೆ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ೮೧ ರುಪಾಯಿ . ಅಂದರೆ ಪ್ರತಿ ಲೀಟರ್ ಗೆ ೨೯ ರುಪಾಯಿಯಷ್ಟು ಸರ್ಕಾರಗಳು ತೆರಿಗೆ ರೂಪದಲ್ಲಿ ತಿನ್ನುತ್ತಾ ಇದೆ. ಇದರಲ್ಲಿ ಸಿಂಹಪಾಲು ರಾಜ್ಯ ಸರ್ಕಾರದ ತಿಜೋರಿ ಸೇರುತ್ತದೆ. ಜನಸಾಮಾನ್ಯರ ಬಗ್ಗೆ ಸ್ವಲ್ಪವಾದರೂ ಕಾಳಜಿ ಇದ್ದಲ್ಲಿ ಸರ್ಕಾರಗಳು ತೆರಿಗೆ ಹಣದಲ್ಲಿ ಕಡಿತ ಮಾಡುತ್ತಾ ಇತ್ತು . ಆದರೆ ಆ ರೀತಿಯ ಯಾವುದೇ ಬೆಳವಣಿಗೆ ಕಾಣುತ್ತಾ ಇಲ್ಲ .ಯು ಪಿ ಎ ಬೆಲೆ ಏರಿಕೆ ವಿರುದ್ಧ ಬಿಜೆಪಿ ಮತ್ತು ಮಿತ್ರ ಪಕ್ಷಗಳು ಭಾರತ ಬಂದ್ ಘೋಷಿಸಿದೆ. ಇದು ಕೇವಲ ಒಂದು ರಾಜಕೀಯ ಗಿಮ್ಮಿಕ್ . ಜನರ ಬಗ್ಗೆ ಇವರಿಗೆ ಅಷ್ಟೊಂದು ಕಾಳಜಿ ಇದ್ದಿದ್ದಲ್ಲಿ , ತಾವು ಆಡಳಿತ ನಡೆಸೋ ರಾಜ್ಯಗಳಲ್ಲಿ ಪೆಟ್ರೋಲ್ ಮೇಲಿನ ತೆರಿಗೆ ಕಡಿಮೆ ಮಾಡುವಂತೆ ಮಾಡಬಹುದಿತ್ತು. ನೆರೆಯ ಕೇರಳ ಮತ್ತು ಗೋವ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಪೆಟ್ರೋಲ್ ದುಬಾರಿ. ಗೋವಾ ದಲ್ಲಿ ಪ್ರತಿ ಲೀಟರ್ ಬೆಲೆ ಈಗ ೭೨ ರುಪಾಯಿ . ಅಂದರೆ ಕರ್ನಾಟಕ ಕ್ಕಿಂತ ಹೆಚ್ಚು ಕಮ್ಮಿ ೧೦ ರುಪಾಯಿ ಕಮ್ಮಿ.

ಇಮ್ತಿಯಾಜ್ ಎಸ್ ಎಂ . ಬಹ್ರೈನ್
ಇಲ್ಲಿ ಸರ್ಕಾರ ನಡೆಸೋ ಜನಕ್ಕೆ ಜನ ಸಾಮಾನ್ಯರ ಸಮಸ್ಯೆ ಪರಿಹಾರ ಮಾಡೋ ಇಚ್ಚಾಸಕ್ತಿ ಕೊರತೆ ಎದ್ದು ಕಾಣುತ್ತೆ . ಜನ ಒಂದೆರಡು ದಿನ ಬೊಬ್ಬೆ ಹಾಕಿ ಮತ್ತೆ ಸುಮ್ಮನಾಗುತ್ತಾರೆ ಎಂದು ಸರ್ಕಾರ ನಡೆಸುವವರಿಗೆ ತಿಳಿದಿದೆ.ಪ್ರತಿ ಬಾರಿ ಬೆಲೆ ಏರಿಕೆ ಮಾಡಿದಾಗ ಸರ್ಕಾರ ಒಂದೊಂದು ಕಾರಣ ಮುಂದಿಡುತ್ತೆ. ಈ ಬಾರಿ ಕಾರಣ ರುಪಾಯಿ ಅಪಮೌಲ್ಯ . ಪೆಟ್ರೋಲ್ ಬೆಲೆ ಏರಿಕೆಯಲ್ಲಿ ಸರ್ಕಾರದ ಯಾವುದೇ ಪಾತ್ರವಿಲ್ಲ. ಪೆಟ್ರೋಲ್ ಬೆಲೆಯನ್ನು ನಿಯಂತ್ರಣ ಮುಕ್ತ ಮಾಡಲಾಗಿದೆ ಎನ್ನುವುದು ಸರ್ಕಾರದ ಸಮರ್ಥನೆ . ಹಾಗಾದರೆ ಲೋಕಸಭೆ ಅಧಿವೇಶನ ಮುಗಿದ ಕೂಡಲೇ ಏಕೆ ಬೆಲೆ ಏರಿಕೆ ಮಾಡಲಾಯಿತು ಎನ್ನೋ ಪ್ರಶ್ನೆಗೆ ಸರ್ಕಾರದ ಬಳಿ ಉತ್ತರವಿಲ್ಲ .
ಕೊನೆಯ ಮಾತು : “ಸರ್ಕಾರ ಏರಿಕೆ ಮಾಡಿರುವ ೭.೫ ರುಪಾಯಿಯಲ್ಲಿ ಐದು ರುಪಾಯಿಯಷ್ಟು ಸರ್ಕಾರಕ್ಕೆ ತೆರಿಗೆ ರೂಪದಲ್ಲಿ ಹೋಗುತ್ತೆ. ಅದು ಸರ್ಕಾರಿ ಬಾಬುಗಳ ವಿದೇಶಿ ಯಾತ್ರೆಗೆ ಖರ್ಚಾಗುತ್ತೆ”. ಇದು ಆಜ್ ತಕ್ ಸುದ್ಧಿವಾಹಿನಿಯ ಪ್ರಭು ಚಾವ್ಲ ರವರ ಟ್ವೀಟ್. ಅಧಿಕಾರದಲ್ಲಿ ಇರೋ ಜನ ಹೇಗೆ ಜನ ಸಾಮಾನ್ಯನ ರಕ್ತ ಹೀರುತ್ತಾರೆ ನೋಡಿ ?
ಇಮ್ತಿಯಾಜ್ ಎಸ್ ಎಂ . ಬಹ್ರೈನ್, ಮಂಗಳೂರು
Filed under: Articles | Leave a Comment »
Posted on May 25, 2012 by ಅಶ್ರಫ್ ಮಂಜ್ರಾಬಾದ್

ಹಾಸನ :ದಲಿತ ಸಾಹಿತ್ಯ ಪರಿಷತ್‌ನ ಹಾಸನ ಜಿಲ್ಲಾಧ್ಯಕ್ಷರಾಗಿ ಪತ್ರಕರ್ತ ಹಾಗೂ ಕರ್ನಾಟಕ ಯುವ ದಲಿತ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ನಾಗರಾಜ್ ಹೆತ್ತೂರು ಆಯ್ಕೆಯಾಗಿದ್ದಾರೆ. ವಿವಿಧ ಕ್ಷೇತ್ರದಲ್ಲಿ ತಮ್ಮ ಕ್ರಿಯಾಶೀಲತೆಯನ್ನು ಗುರುತಿಸಿ ರಾಜ್ಯ ದಲಿತ ಸಾಹಿತ್ಯ ಪರಿಷತ್, ರಾಜ್ಯ ಘಟಕ ಗದಗ ವತಿಯಿಂದ ಹಾಸನ ಜಿಲ್ಲಾ ಅಧ್ಯಕ್ಷರೆಂದು ನೇಮಕ ಮಾಡಿ ಕಾರ್ಯ ನಿರ್ವಹಿಸಬೇಕೆಂದು ರಾಜ್ಯಾಧ್ಯಕ್ಷರಾದ ಡಾ|| ಅರ್ಜುನ ಗೊಳಸಂಗಿ ಹಾಗೂ ಕಾರ್ಯದರ್ಶಿ ಡಾ|| ಹೆಚ್.ಬಿ. ಪೂಜಾರ ನೇಮಕ ಮಾಡಿ ಆದೇಶ ನೀಡಿದ್ದಾರೆ. ಈ ಕುರಿತಂತೆ ದಲಿತ ಸಾಹಿತ್ಯ ಮತ್ತು ಸಂಸ್ಸೃತಿಯನ್ನು ಪ್ರೀತಿಸುವ ಸಮಾನ ಮನಸ್ಕರನ್ನು ಸೇರಿಸಿಕೊಂಡು ಪರಿಷತ್ತನ್ನು ಸಂಘಟಿಸಬೇಕೆಂದು ತಿಳಿಸಿದ್ದಾರೆ.
ಮನವಿ: ಈ ಸಂಬಂಧ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕ ಪದಾಧಿಕಾರಿಗಳು ಹಾಗೂ ಎಲ್ಲಾ ತಾಲೂಕು ಅಧ್ಯಕ್ಷ , ಉಪಾಧ್ಯಕ್ಷರನ್ನು ಶೀಘ್ರವೇ ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು ಈ ನಿಟ್ಟಿನಲ್ಲಿ ದಲಿತ ಸಾಹಿತ್ಯ ಮತ್ತು ಸಂಸ್ಸೃತಿಯನ್ನು ಪ್ರೀತಿಸುವ ಮತ್ತು ದಲಿತ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ, ಹಿರಿಯ ಮತ್ತು ಕಿರಿಯ ಹಾಗೂ ಯುವ ಬರಹಗಾರರು ಪರಿಷತ್‌ನ್ನು ಸೇರಲು ಉತ್ಸುಕರಾಗಿರುವವರು ನಾಗರಾಜ್ ಹೆತ್ತೂರು ಜಿಲ್ಲಾಧ್ಯಕ್ಷರು, ಹಾಸನ ದೂ: ೯೯೬೪೪೩೭೮೮೨ ಇವರನ್ನು ಸಂಪರ್ಕಿಸಲು ಕೋರಲಾಗಿದೆ. ಅಲ್ಲದೇ ರಾಜ್ಯ ಪರಿಷತ್ ವತಿಯಿಂದ ಈಗಾಗಲೇ ೨ ಅಖಿಲ ಭಾರತ ರಾಜ್ಯ ಸಮ್ಮೇಳನ ನಡೆಸಲಾಗಿದ್ದು. ಈ ಬಾರಿ ರಾಜ್ಯ ಮಟ್ಟದ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನವನ್ನು ಹಾಸನದಲ್ಲಿ ನಡೆಸುವ ಸಂಬಂಧ ಶೀಘ್ರವೇ ಸಭೆ ಕರೆದು ತೀರ್ಮಾನಿಸಲಾಗುವುದು ಎಂದು ರಾಜ್ಯಾಧ್ಯಕ್ಷರಾದ ಅರ್ಜುನ ಗೋಳಸಂಗಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Filed under: Hassana, State Newz | Leave a Comment »
Posted on May 25, 2012 by ವಿಶ್ವ ಕನ್ನಡಿಗ ನ್ಯೂಸ್

ಸಕಲೇಶಪುರ:- ಭಾರತೀಯ ಜನತಾಪಾರ್ಟಿಗೆ ನಾನು ಅನಿವಾರ್ಯ ಹಾಗೂ ಮುಂದಿನ ದಿನಗಳಲ್ಲಿ ಉನ್ನತ ಹುದ್ದೆಗೆ ಏರಲಿದ್ದೇನೆ ಆದರೆ ಯಾವ ಹುದ್ದೆ ಎಂಬುದನ್ನು ಈಗಲೇ ಹೇಳುವುದಿಲ್ಲ ಎಂದು ವಿಧಾನ ಪರಿಷತ್ ಉಪ ಸಭಾಪತಿ ವಿಮಲಾ ಗೌಡ ಹೇಳಿದರು.ಧರ್ಮಸ್ಥಳಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪಕ್ಷದಿಂದ ಎರಡು ಬಾರಿ ಮಾತ್ರ ವಿದಾನ ಪರಿಷತ್‌ಗೆ ಆಯ್ಕೆಮಾಡಲು ಅವಕಾಶ ಕಲ್ಪಿಸಲಾಗುವುದು ಎಂಬ ಪ್ರಶ್ನೆಗೆ ಮಾತನಾಡಿ ಈಗಾಗಲೇ ಎರಡು ಬಾರಿಗೆ ವಿದಾನಪರಿಷತ್ ಸದಸ್ಯರಾಗಿರುವ ನಾನು ಮುಂದೆ ನಡೆಯಲಿರುವ ವಿದಾನಪರಿಷತ್ ಚುನಾವಣೆಯಲ್ಲಿ ನನ್ನ ಆಯ್ಕೆ ಖಚಿತವಾಗಿದೆ. ನಾನು ರಾಜ್ಯದ ಪ್ರಬಲ ಕೋಮಿನಿಂದ ಬಂದವಳು ನನ್ನ ಆಯ್ಕೆಯಿಂದ ರಾಜ್ಯದ ಜನತೆಗೆ ಒಂದು ಒಳ್ಳೆಯ ಸಂದೇಶ ರವಾನೆಯಾಗುತ್ತದೆ. ಈ ನಿಟ್ಟಿನಲ್ಲಿ ಪಕ್ಷ ಚಿಂತಿಸಿ ನನ್ನನ್ನು ಆಯ್ಕೆ ಮಾಡಬಹುದೆಂದರು.
ಪಕ್ಷದ ಆಂತರೀಕ ಕಚ್ಚಾಟದ ಬಗ್ಗೆ ಮಾತನಾಡಿ, ಜಗಳವನ್ನು ಒಂದು ಕೋಣೆಯ ಒಳಗೆ ನಡಸಲಿ, ಒಬ್ಬರಿಗೆ ಒಬ್ಬರು ಆರ್ಥಮಾಡಿ ಕೊಳ್ಳಲಿ . ನಂತರ ಕಚ್ಚಾಟದ ಬಗ್ಗೆ ಇಬ್ಬರಿಗೆ ಅರೀವು ಮೂಡಿದರೆ ತಮ್ಮನ್ನು ಅಯ್ಕೆ ಮಾಡಿದ ಜನರ ಋಣ ತೀರಿಸಬಹುದೆಂದರು. ಮುಂದಿನ ಚುಣಾವಣೆಯನ್ನು ಪಕ್ಷವೂ ಸಮೂಹಿಕ ನಾಯಕತ್ವದಲ್ಲಿ ನಡೆಸಲಾಗುವುದೆಂದರು.ಯಡಿಯೂರಪ್ಪ ಎಂದಿಗೂ ಪಕ್ಷ ತೆಜಿಸುವುದಿಲ್ಲ ಆ ನಿಟ್ಟಿನಲ್ಲಿ ಯೋಚಿಸುವುದು ತಪ್ಪಾಗಲಿದೆ ಎಂದು ವಿಧಾನಪರಿಷತ್ ಉಪಸಭಾಪತಿ ವಿಮಾಲಗೌಡ ಹೇಳಿದ್ದಾರೆ.ಗುರುವಾರ ಯಡಿಯೂರಪ್ಪರವರಿಗೆ ಪಕ್ಷ ಅನಿವಾರ್ಯ ಹಾಗೂ ಪಕ್ಷಕ್ಕೆ ಯಡಿಯೂರಪ್ಪ ಅನಿವಾರ್ಯ ಪಕ್ಷದ ನೀತಿ ಸಿದ್ದಾಂತವನ್ನು ಬಲವಾಗಿ ಪ್ರತಿಪಾದಿಸುವ ಯಡಿಯೂರಪ್ಪನವರ ಬಗ್ಗೆ ಆರೋಪಗಳು ಬಂದ ತಕ್ಷಣ ಪಕ್ಷ ಬದಲಿಸಲು ಅವರೇನು ನೀತಿ ಸಿದ್ದಾಂತವಿಲ್ಲದೆ ರಾಜಕೀಯ ಮಾಡಿದವರಲ್ಲ,ಪಕ್ಷ ತೇಜಿಸುತ್ತಾರೆಂಬ ಹೇಳಿಕೆಗಳು ನಮ್ಮ ವಿರೋಧಿಗಳದ್ದಾಗಿದ್ದು ಯಡಿಯೂರಪ್ಪ ಪಕ್ಷ ಬಿಟ್ಟರೆ ಬಿ.ಜೆ.ಪಿಯನ್ನು ದುರ್ಭಲಗೊಳಿಸುವುದು ಸುಲಭ ಎಂಬ ಜಾಣ್ಮೆ ಇಲ್ಲಿ ಅಡಗಿದೆ ಆದರೆ ಇವರ ಪಿತೂರಿ ಎಂದು ಫಲಿಸುವುದಿಲ್ಲ ಪಕ್ಷದಲ್ಲಿ ಬಿನ್ನಮತವಿಲ್ಲ ಅಭಿಪ್ರಾಯ ಭೇದವಿದೆ ಮುಂದಿನ ವಿದಾನಸಭಾ ಚುನಾವಣೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಎಸ್ಸಿಎಸ್ಟಿ ಮೋರ್ಚ ಅದ್ಯಕ್ಷ ಡಾ.ನಾರಾಯಣಸ್ವಾಮಿ,ಪುರಸಭ ನಾಮಿನಿ ಸದಸ್ಯ ಬನ್ನೇರಿ ಉಪಸ್ಥಿತರಿದ್ದರು.
- ಅಕ್ಬರ್ ಜುನೈದ್ . ವರದಿಗಾರರು .ವಿಕೆ ನ್ಯೂಸ್
Filed under: Hassana, State Newz | Leave a Comment »
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಸುಳ್ಯ : ಬೆಳ್ಳಾರೆ ಜುಮ್ಮಾಮಸೀದಿಯ ನೂತನ ವ್ಯಾಪಾರ ಮಳಿಗೆ ಕಟ್ಟಡದ ಉದ್ಘಾಟನಾ ಕಾರ್ಯಕ್ರಮವು ಇಂದು (ಮೇ.25) ನಡೆಯಿತು.
ಮಸೀದಿಯ ಆಡಳಿತಾಧಿಕಾರಿ ನೂತನ ಕಟ್ಟಡವನ್ನು ಉದ್ಘಾಟಿಸಿ ಶುಭಹಾರೈಸಿದರು. ಮಸೀದಿಯ ಧರ್ಮಗುರು ಅಬ್ದುಲ್ ಜಲೀಲ್ ಪೈಝಿ ದುವಾಶಿರ್ವಚನಗೈದರು. ಆಡಳಿತ ಸಹಾಯಕರಾದ ಅಬೂಬಕ್ಕರ್, ಮಹಮ್ಮದ್ ಸೇರಿದಂತೆ ಮಹಮ್ಮದ್ ಇಂಜಿನಿಯರ್, ಹಾಜಿ ಕೆ ಮಮ್ಮಾಲಿ, ರಹೀಂ ಎಂ.ಆರ್ ಬೆಳ್ಳಾರೆ, ಝಕರಿಯಾ ನಿಡ್ಮಾರ್, ಹಾಜಿ ಮೂಸಾ ಬೆಳ್ಳಾರೆ, ಬಶೀರ್ ಟಿ.ಎ ಮುಂತಾದವರು ಉಪಸ್ಥಿತರಿದ್ದರು.
ಚಿತ್ರ, ವರದಿ: ಉಮೇಶ್, ಮಣಿಕ್ಕಾರ.
Filed under: Dakshina Kannada, State Newz | Leave a Comment »
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ಬಂಟ್ವಾಳ : ಬಾಂಬಿಲ ಕ್ರಿಯಾ ಸಮಿತಿ ಹಾಗೂ ವಗ್ಗ ಇತ್ತಿಫಾಕುಲ್ ಮುಸ್ಲಿಮೀನ್ ಸೇವಾ ಸಂಘದ ಆಶ್ರಯದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಕಾರದೊಂದಿಗೆ ಸರಕಾರಿ ಸವಲತ್ತು, ವಿದ್ಯಾರ್ಥಿ ವೇತನ ಹಾಗೂ ಸಮಾಜ ಸೇವೆಯ ಕುರಿತು ಮಾಹಿತಿ ಕಾರ್ಯಾಗಾರವು ಮೇ. 27 ರಂದು ಭಾನುವಾರ ಅಪರಾಹ್ನ 2 ಗಂಟೆಗೆ ವಗ್ಗ ಕಾರಿಂಜೆ ಕ್ರಾಸ್ ಪಚ್ಚಾಜೆ ಸಭಾಂಗಣದಲ್ಲಿ ನಡೆಯಲಿದೆ.
ಬಾಂಬಿಲ ಜುಮಾ ಮಸೀದಿ ಖತೀಬ್ ಎ.ಯು. ನಝೀರ್ ಅಝ್‌ಹರಿ ಬೊಳ್ಮಿನಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಟಿ.ಆರ್.ಎಫ್.ನ ರಫೀಕ್ ಮಾಸ್ಟರ್ ಹಾಗೂ ರಿಯಾಝ್ ಅಹ್ಮದ್ ವಿಷಯ ಮಂಡನೆಗೈಯುವರು. ಮುಖ್ಯ ಅತಿಥಿಗಳಾಗಿ ವಗ್ಗ ಮಸೀದಿಯ ಖತೀಬ್ ಮುಹಮ್ಮದ್ ಅನ್ಸಾರುದ್ದೀನ್, ಶ್ರೀ ಕ್ಷೇತ್ರ ಕಾರಿಂಜದ ಮಾಜಿ ಆಡಳಿತ ಧರ್ಮದರ್ಶಿ ಪಿ. ಜಿನರಾಜ ಆರಿಗ, ಶಿಕ್ಷಕರಾದ ಬಿ. ಮುಹಮ್ಮದ್, ಅಬ್ದುರ್ರಝಾಕ್, ಬಾಂಬಿಲ ಜುಮಾ ಮಸೀದಿಯ ಅಧ್ಯಕ್ಷ ಅಬ್ದುರ್ರಹ್ಮಾನ್, ವಗ್ಗ ಜುಮಾ ಮಸೀದಿ ಅಧ್ಯಕ್ಷ ಪಿ.ಬಿ. ಅಬ್ದುಲ್ಲ, ಬಾಂಬಿಲ ಕ್ರಿಯಾ ಸಮಿತಿಯ ಗೌರವಾಧ್ಯಕ್ಷ ಅಬ್ದುಲ್ ಖಾದಿರ್ ಸ್ವಾಲಿಹ್ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
- ಪಿ.ಎಂ.ಎ ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಅಳಿಕೆ : ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ (SSF) ಅಳಿಕೆ ಇದರ ಎಂಟನೇ ವಾರ್ಷಿಕ ಮಹಾ ಸಮಾರಂಭ ಪ್ರಯುಕ್ತ ಸೌಹಾರ್ದ ಸಂಗಮ, ಸುನ್ನೀ ಸಂಗಮ ಹಾಗೂ ಉಚಿತ ಶಾಲಾ ಪುಸ್ತಕ ವಿತರಣೆ ಕಾರ್ಯಕ್ರಮವು ಇತ್ತೀಚಿಗೆ ಬಹಳ ವಿಜ್ರಂಭಣೆಯಿಂದ ಜರುಗಿತು.
ಸೌಹಾರ್ಧ ಸಭೆಯ ಅದ್ಯಕ್ಷತೆಯನ್ನು ವಹಿಸಿದ್ದ ಅಳಿಕೆ ಗ್ರಾಮ ಪಂಚಾಯತ್ ಅಧ್ಯಕ್ಷ ಕಾನ ಈಶ್ವರ ಭಟ್ ರವರು, SSF ಅಳಿಕೆ ವರ್ಷಂಪ್ರತಿ ಹಮ್ಮಿಕೊಳ್ಳುತ್ತಿರುವ ಈ ಒಂದು ಮಹತ್ಕಾರ್ಯವನ್ನು ಶ್ಲಾಘಿಸಿದರು. ಸುಮಾರು 90 ಬಡ ವಿಧ್ಯಾರ್ಥಿಗಳಿಗೆ ಉಚಿತ ಶಾಲಾ ಪುಸ್ತಕಗಳನ್ನು ವಿತರಿಸುತ್ತಾ ಮಾತನಾಡಿದ ಅವರು ಒಂದು ಕುಗ್ರಾಮವನ್ನು ಕೇಂದ್ರವಾಗಿಟ್ಟುಕೊಂಡು ಸುನ್ನೀ ವಿದ್ಯಾರ್ಥಿ ಸಂಘಟನೆ ನಡೆಸುತ್ತಿರುವ ಜೀವಕಾರುಣ್ಯ ಪ್ರಕ್ರಿಯೆ ನಿಜವಾಗಿಯೂ ರಾಷ್ಟ್ರಕ್ಕೇ ಮಾದರಿ ಎಂದರು. “ಹಳ್ಳಿಗಳ ಉದ್ದಾರವೇ ದೇಶದ ಉದ್ದಾರ” ಎಂಬ ಗಾಂದೀಜಿಯವರ ತತ್ವವನ್ನು ಅಕ್ಷರ ಸಹ ಪಾಲಿಸಿ ಅಭಿವ್ರಿದ್ದಿಯತ್ತ ಮುನ್ನುಗ್ಗುತ್ತಿರುವ SSF ಅಳಿಕೆಗೆ ಅವರು ಅಭಿನಂದನೆಗಳನ್ನು ಸಲ್ಲಿಸಿದರು.
This slideshow requires JavaScript.
ನಂತರ ಸತ್ಯ ಸಾಯಿ ಟ್ರಸ್ಟ್ ಅದ್ಯಾಪಕ ಯಶೋಧರ ಬಂಗೇರ, ತುಂಬೆ ಬಿ.ಎ ಕಾಲೇಜ್ ಉಪನ್ಯಾಸಕ ದಿನೇಶ ಶೆಟ್ಟಿ, ದೈಹಿಕ ಶಿಕ್ಷಕ ಚಂದ್ರಹಾಸ ಶೆಟ್ಟಿ, ನ್ಯಾಯವಾದಿ ಪದ್ಮನಾಭ ಪೂಜಾರಿ, ಗೋಪಾಲಕೃಷ್ಣ ದೇವಸ್ಥಾನದ ಮೊಕ್ತೇಸರ ಮಡಿಯಾಳ ಶಾಮ್ ಭಟ್, ಹರಿದಾಸ ಭಟ್ ಮೊದಲಾದವರು ಮಾತನಾಡಿ ಸಂಘಟನೆಯ ಈ ಮಹತ್ಕಾರ್ಯವನ್ನು ಶ್ಲಾಘಿಸಿದರು.
ನಂತರ ಸುನ್ನೀ ಸಂಗಮದಲ್ಲಿ ಮುಖ್ಯ ಭಾಷಣ ನಿರ್ವಹಿಸಿದ ಬಹು ರಫೀಕ್ ಸಹದಿ ದೇಲಂಪಾಡಿಯವರು, ಅಳಿಕೆ SSF ವರ್ಷಂಪ್ರತಿ ಹಮ್ಮಿಕೊಂಡು ಯಶಸ್ಸನ್ನು ಕಾಣುತ್ತಿರುವ ಪ್ರಸ್ತುತ ಕಾರ್ಯಕ್ರಮವನ್ನು ಕೊಂಡಾಡಿದರು. ಸಂಘಟನೆಯಿಂದ ನಮಗೆ ಲಭಿಸುವ ಬೌತಿಕ ಹಾಗೂ ಪಾರತ್ರಿಕ ವಿಜಯವನ್ನು ವಿವರಿಸಿದ ಅವರು ಪ್ರತಿರೋಧಗಳಿದ್ದರೆ ಸಂಘಟನೆಗೆ ಉತ್ತುಂಗಕ್ಕೇರಲು ಸಾಧ್ಯ ಎಂದರು. ಪ್ರತಿರೋಧದ ತೀಕ್ಷ್ಣತೆಗೆ ತಕ್ಕಂತೆ ಸಂಘಟನೆಯು ಅಬಿವ್ರದ್ದಿಯತ್ತ ಮುನ್ನುಗ್ಗಲು ಸಾಧ್ಯವೆಂದು ಅವರು ನುಡಿದರು. ಗಲ್ಫ್ ರಾಷ್ಟ್ರಗಳಲ್ಲಿ ಬಿಸಿಲಿನ ಬೇಗೆಯನ್ನು ಲೆಕ್ಕಿಸದೆ ಕಷ್ಟಪಟ್ಟು ದುಡಿದು ಸಂಘಟನೆಯ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವ ಪ್ರವಾಸೀ ಸುನ್ನೀ ಕಾರ್ಯಕರ್ತರನ್ನು ಅಭಿನಂದಿಸಿದ ಅವರು ಅತ್ಮೀಯತೆಯು ಶೋಷಿಸಲ್ಪಡುತ್ತಿರುವ ಅಧುನಿಕ ಕಾಲದಲ್ಲಿ ನಾವು ನಮ್ಮ ವಿಶ್ವಾಸವನ್ನು ಕಾಪಾಡಬೇಕಾಗಿದೆ ಎಂದರು. ನೂತನವಾದಿಗಳಿಂದಲೂ, ತೀವ್ರವಾದಿ ಸಂಘಟನೆಗಳಿಂದಲೂ ದೂರ ಉಳಿದು ಅಹ್ಲುಸ್ಸುನ್ನತಿಗೆ ಬೇಕಾಗಿ ಅಹರ್ನಿಶಿ ದುಡಿಯಬೇಕಾದ ಕಾಲ ಸನ್ನಿಹಿತವಾಗಿದೆ ಎಂದು ಅವರು ನುಡಿದರು. ಕಾಂತಪುರಂ ಉಸ್ತಾದರ ಕೇರಳ ಯಾತ್ರೆಯ ವಿಜಯೋತ್ಸವವನ್ನು ವಿವರಿಸಿದ ಅವರು ಸಂಘಟನೆಗೆ ಸರ್ವ ರೀತಿಯ ಅಬಿನಂದನೆಗಳನ್ನು ಸಲ್ಲಿಸಿದರು.
ವೇದಿಕೆಯಲ್ಲಿ ಅಳಿಕೆ ಜುಮಾ ಮಸೀದಿ ಗೌರವಾಧ್ಯಕ್ಷ ಸಯ್ಯದ್ ಪೂಕುಂಞಿ ತಂಙಲ್ ಉದ್ಯಾವರ, ಅಲ್ ಹಾಜ್ ಇಬ್ರಾಹಿಂ ಮುಸ್ಲಿಯಾರ್ ಅಳಿಕೆ, ಖಾಸಿಂ ಸಖಾಫಿ ಮುಕ್ವೆ, ಯೂಸುಫ್ ಮುಸ್ಲಿಯಾರ್ N.K ಅಳಿಕೆ, ಎಸ್ ಎಸ್ ಅಳಿಕೆ, ಸಲೀಂ ಮದನಿ ಬೈರಿಕ್ಕಟ್ಟೆ ಮೊದಲಾದ ಉಲಮಾ ಉಮರಾ ನೇತಾರರು ಪಾಲ್ಗೊಂಡಿದ್ದರು ಎಸ್ ಎಸ್ ಎಫ್ ಅಳಿಕೆ ಅಧ್ಯಕ್ಷ ಹೈದರ್ ಸಖಾಫಿ ಸ್ವಾಗತಿಸಿ, ಸಲಾಂ ಮೌಲವಿ ವಂದಿಸಿದರು.
Filed under: Dakshina Kannada, State Newz | Leave a Comment »
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ಬಂಟ್ವಾಳ ಹಿರಿಯ ಸಿವಿಲ್ ನ್ಯಾಯಾಲಯ ಹಾಗೂ ಜೆಎಂಎಫ್‌ಸಿ ನ್ಯಾಯಾಲಯಗಳಿಗೆ ನೂತನವಾಗಿ ನಿಯುಕ್ತಿಗೊಂಡ ನ್ಯಾಯಾಧೀಶರುಗಳನ್ನು ಬಂಟ್ವಾಳ ತಾಲೂಕು ವಕೀಲರ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ, ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸ್ವಾಗತಿಸಿದರು.
ಈ ಪ್ರಯುಕ್ತ ಬಂಟ್ವಾಳ ವಕೀಲರ ಸಂಘದ ಭವನದಲ್ಲಿ ಬುಧವಾರ ಏರ್ಪಡಿಸಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಸುರೇಶ್ ಪೂಜಾರಿ ಅವರು ಜನತೆಗೆ ಸಾಮಾಜಿಕ ನ್ಯಾಯ ಒದಗಿಸಿಕೊಡುವಲ್ಲಿ ನ್ಯಾಯಾಧೀಶರ ಪಾತ್ರ ಗಮನಾರ್ಹ. ಜನ ಸಾಮಾನ್ಯರ ನ್ಯಾಯದ ಹಕ್ಕುಗಳನ್ನು ಎತ್ತಿ ಹಿಡಿಯುವಲ್ಲಿ ವಕೀಲರು ಶ್ರಮಿಸುತ್ತಿದ್ದಾರೆ ಎಂದರು.
ನೂತನವಾಗಿ ಅಧಿಕಾರ ವಹಿಸಿಕೊಂಡ ಸಿವಿಲ್ ನ್ಯಾಯಾಧೀಶೆ ನವೀನ ಕುಮಾರಿ, ಜೆಎಂಎಫ್‌ಸಿ ನ್ಯಾಯಾಧೀಶ ಜಯಪ್ರಕಾಶ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಿವಿಲ್ ಕಿರಿಯ ವಿಭಾಗದ ನ್ಯಾಯಾಧೀಶ ಶ್ರೀನಿವಾಸ್ ಮುಖ್ಯ ಅತಿಥಿಯಾಗಿ ಮಾತನಾಡಿದರು. ಸಂಘದ ಉಪಾಧ್ಯಕ್ಷ ಪಿ. ವಿಶ್ವನಾಥ ಗೌಡ ಸ್ವಾಗತಿಸಿದರು. ಕಾರ್ಯದರ್ಶಿ ಬಿ. ಗಣೇಶ್ ಪೈ ವಂದಿಸಿದರು. ಸುರೇಶ್ ಕುಮಾರ್ ನಾವೂರು ಕಾರ್ಯಕ್ರಮ ನಿರೂಪಿಸಿದರು.
- ಪಿ.ಎಂ.ಎ ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.
ಹೊಲಸು ರಾಜ್ಯಕೀಯದ ಬದಲಾವಣೆಗೆ ಎಸ್.ಡಿ.ಪಿ.ಐ ಯೇ ಪರಿಹಾರ: ಹನೀಫ್ ಖಾನ್

ಬಂಟ್ವಾಳ: ಇಷ್ಟರವರೆಗೆ ದೇಶವನ್ನಾಳಿದ ಎಲ್ಲಾ ರಾಜ್ಯಕೀಯ ಪಕ್ಷಗಳು ಅಲ್ಪಸಂಖ್ಯಾತರು, ದಲಿತರನ್ನು ವಂಚಿಸುತ್ತಲೇ ಬಂದಿದೆ. ಬಿಜೆಪಿ, ಕಾಂಗ್ರೆಸ್ ಇಂದು ಕೋಟಿ ಕೋಟಿ ನುಂಗುವುದರಲ್ಲೇ ಕಾರ್ಯನ್ಮೋಕವಾಗಿದೆ. ಈ ಎಲ್ಲಾ ರಾಜ್ಯಕೀಯ ಪಕ್ಷಗಳ ಮೂಲೋತ್ಪಾಟೆನೆಯೇ ಕಾಲದ ಬೇಡಿಕೆಯಾಗಿದೆ. ಅದನ್ನು ಶೀಘ್ರದಲ್ಲೇ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಾಡಲಿದೆ ಎಂದು ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಹನೀಫ್ ಖಾನ್ ಕೋಡಾಜೆ ಹೆಳಿದರು.
ಅವರು ಬಂಟ್ವಾಳದ ಕೆಳಗಿನ ಪೇಟೆಯಲ್ಲಿ ಎಸ್.ಡಿ.ಪಿ.ಐ ಬಂಟ್ವಾಳ ಪುರಸಭಾ ಸಮಿತಿ ವತಿಯಿಂದ ನಡೆದ ವಾರ್ಡ್ ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಕ್ಬರ್ ಆಲಿ, ಜಿಲ್ಲಾ ಸಮಿತಿ ಸದಸ್ಯ ರಿಯಾಝ್, ಶಾಹುಲ್ ಎಸ್.ಎಚ್, ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಎಸ್.ಪಿ ಶಾಹುಲ್, ಪುರಸಭಾ ಸಮಿತಿ ಅಧ್ಯಕ್ಷರಾದ ಯೂಸುಫ್ ಆಲಡ್ಕ ಮುಂತಾದವರು ಈ ಸಂದರ್ಭದಲ್ಲಿ ಮಾತನಾಡಿದರು.
ಘಟಕದ ಅಧ್ಯಕ್ಷ ಮೂನಿಶ್ ಆಲಿ ಸಮ್ಮಿಲನದ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸದಸ್ಯ ಇರ್ಶಾದ್ ಸ್ವಾಗತಿಸಿ, ರಿಲ್ವಾನ್ ವಂದಿಸಿದರು. ಆಬೀದ್ ಕಾರ್ಯಕ್ರಮ ನಿರೂಪಿಸಿದರು. ಎಸ್.ಡಿ.ಪಿ.ಐ ಬಂಟ್ವಾಳ ಪುರಸಭಾ ಸಮಿತಿಗೆ ಒಳಪಡುವ ಹಲವಾರು ಪ್ರದೇಶಗಳಲ್ಲಿ “ನಮ್ಮ ವಾರ್ಡ್ ನಮ್ಮಿಂದ ಅಭಿವೃಧ್ದಿ, ಮೂಲಭೂತ ಸೌಲಭ್ಯ ನಮ್ಮ ಹಕ್ಕು” ಎಂಬ ಘೋಷಣೆಯಡಿ ವಾರ್ಡ್ ಸಮ್ಮಿಲನವನ್ನು ಹಮ್ಮಿಕೊಳ್ಳಲಿದೆ.
ವರದಿ : ಸಿದ್ದೀಕ್ ನಂದರಬೆಟ್ಟು, ಮಾಧ್ಯಮ ವಕ್ತಾರ, ಎಸ್.ಡಿ.ಪಿ.ಐ ಬಂಟ್ವಾಳ ಪುರಸಭಾ ಸಮಿತಿ.
Filed under: Dakshina Kannada, State Newz | Leave a Comment »
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಕೇಂದ್ರ ಸಮಿತಿಯ ವತಿಯಿಂದ ಇತ್ತೀಚೆಗೆ ನಿಧನರಾದ ಶೈನ್ ಇಲೆಕ್ಟ್ರಿಕಲ್ಸ್ ಮಾಲಕ ಅಹಮದ್ ಅವರಿಗೆ ಮರಣ ನಿಧಿ ರೂ. 20,000/- ಹಾಗೂ ಬಂಟ್ವಾಳ ಸಮಿತಿ ವತಿಯಿಂದ ಅಕ್ಕಿಯನ್ನು ಅವರ ಕುಟುಂಬದ ಸದಸ್ಯರಿಗೆ ವಿತರಿಸಲಾಯಿತು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ಲಕ್ಷ್ಮಿ ನಾರಾಯಣ, ಉಪಾಧ್ಯಕ್ಷ ಜೋಕಿಂ ವಿಲಿಯಂ ಮಿನೇಜಸ್, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಾಲಕೃಷ್ಣ ಸೆರ್ಕಳ, ಕೊಶಾಧಿಕಾರಿ ಬ್ರಿಜೇಶ್ ಹೆಗ್ಡೆ, ಸದಸ್ಯರಾದ ದಿವಾಕರ ಪೂಜಾರಿ, ಕೇವಿನ್ ಲೋಬೋ ಮೊದಲಾದವರು ಉಪಸ್ಥಿತರಿದ್ದರು.
- ಪಿ.ಎಂ.ಎ ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ನಾಗರಿಕ ಸಮಿತಿ ಬಂಟ್ವಾಳ ಇದರ ವತಿಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ ತಾಲೂಕಿನ ವಿದ್ಯಾರ್ಥಿನಿ ಕು. ನವ್ಯಾ ಆರ್. ಶೆಟ್ಟಿ ಹಾಗೂ ಅತೀ ಹೆಚ್ಚು ಅಂಕ ಗಳಿಸಿದ ತಾಲೂಕಿನ ಹತ್ತು ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಮೇ. 26 ರಂದು ಶನಿವಾರ ಅಪರಾಹ್ನ 3 ಗಂಟೆಗೆ ಬಿ.ಸಿ.ರೋಡಿನ ರೋರಿ ಬಾಲಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಾಹಿತಿ ಏರ್ಯ ಲಕ್ಷ್ಮೀ ನಾರಾಯಣ ಆಳ್ವ, ತುಂಬೆ ಮುಹಿಯುದ್ದೀನ್ ಎಜ್ಯುಕೇಶನಲ್ ಟ್ರಸ್ಟ್ ಅಧ್ಯಕ್ಷ ಅಹ್ಮದ್ ಹಾಜಿ ಮುಹಿಯುದ್ದೀನ್, ಮೊಡಂಕಾಪು ಚರ್ಚ್ ಧರ್ಮಗುರು ರೊಕಿ ಡಿ’ಸೋಜ, ಅಳಿಕೆ ಸತ್ಯಸಾಯಿ ವಿದ್ಯಾಸಂಸ್ಥೆಯ ಅಧ್ಯಕ್ಷ ಗಂಗಾಧರ್ ಭಟ್, ಬಂಟ್ವಾಳ ವಿದ್ಯಾಗಿರಿ ವೆಂಕಟ್ರಮಣ ಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯ ಸಂಚಾಲಕ ಭಾಮಿ ವಿಠಲದಾಸ ಶೆಣೈ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ನಾಗರಿಕ ಸಮಿತಿ ಸಂಚಾಲಕ ಬಿ. ರಮಾನಾಥ ರೈ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
- ಪಿ.ಎಂ.ಎ ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಉಡುಪಿ : ಥಿಯೇಟರ್ ಆವರಣದಲ್ಲಿ ಬಿಗಿ ಬಂದೋಬಸ್ತ್, ಒಳಗಡೆ ಮ್ಯಾಟನಿ ಷೋ ಪ್ರದಶನ, ಹೊರಗಡೆ ಹಿಂದೂ ಸಂಘಟನೆಯ ಕಾವು.. ಒಟ್ಟಾರೆ ಮದ್ಯಾಹ್ನದ ಉರಿ ಬಿಸಿಲಿನಲ್ಲಿ ಈ ಚಿತ್ರಣ ಕಂಡು ಬಂದಿದ್ದು ನಿನ್ನೆ ಉಡುಪಿ (ಮೇ 23) ಗೀತಾಂಜಲಿ ಚಿತ್ರಮಂದಿರದ ಕ್ಯಾ೦ಪಾಸ್ ನಲ್ಲಿ. ಎಲ್ಲಾ ಸಂಘರ್ಷ, ಸಂಕಷ್ಟ ಗಳು ದೂರಾಗಿ ನೀರಳವಾಗಿದ್ದ ಕಠಾರಿವೀರ ಸುರಸುಂದರಾಂಗಿ ಚಿತ್ರ ತಂಡಕ್ಕೆ ಉಡುಪಿ ಚಿತ್ರಮಂದಿರದಲ್ಲಿ ಬಿಡುಗಡೆಗೊಂಡ ಈ ಚಿತ್ರ ಎರಡು ವಾರದ ತರುವಾಯ ಇನ್ನೊಮ್ಮೆ ವಿವಾದ ಮುಗಿಲೆದ್ದಿತ್ತು. ಸರಿ ಸುಮಾರು ಮಧ್ಯಾಹ್ನ 12 ಗಂಟೆ ನಂತರ ಉರಿಬಿಸಿಲಿನಲ್ಲಿ ಚಿತ್ರ ಪ್ರದರ್ಶನಕ್ಕೆ ತಮ್ಮ ಪ್ರತಿಭಟನೆಯ ಮೂಲಕ ಅಡ್ಡಿಪಡಿಸಲು ನಿರ್ಧರಿಸಿದರು. ಮುನ್ಸೂಚನೆಯನ್ನು ಮನಗೊಂಡ ಉಡುಪಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರತಿಭಟನೆಯ ಕಾವು ಹೆಚ್ಚಾಗದ ರೀತಿಯಲ್ಲಿ, ಚಿತ್ರ ಪ್ರದರ್ಶನ ಸ್ಥಗಿತಗೊಳ್ಳದ ರೀತಿಯಲ್ಲಿ ಅನವು ಮಾಡಿಕೊಟ್ಟರು.


ಉಡುಪಿಗೆ ಚಿತ್ರ ನಿರ್ಮಾಪಕ ಮುನಿರತ್ನ, ನಟ ಉಪೇಂದ್ರ ಒಳಗೊಂಡಂತೆ ಇತರ ಚಿತ್ರತಂಡ ಬಂದು ಚಿತ್ರದಲ್ಲಿ ಅಡಕವಾಗಿರುವ ಅವಹೇಳನಕಾರಿ ಸನ್ನಿವೇಶವನ್ನು ತೆಗೆಯಲಾಗುವುದು ಮತ್ತು ಅದರಂತೆ ಹೆಚ್ಚಿನ ಪ್ರಮಾಣದಲ್ಲಿರುವ ಸುಮಾರು 8 ಸನ್ನಿವೇಶಗಳಿಗೆ ಕತ್ತರಿ ಹಾಕಲಾಗುವುದು ಎಂದು ಆ ಸಮಯದಲ್ಲಿ ನುಡಿದಿದ್ದ ಇವರುಗಳು ಇಂದು ಕೇವಲ ಒಂದೆರಡು ಸನಿವೆಶವನ್ನು ತೆರವುಗೊಳಿಸಿ, ಚಿತ್ರ ಪ್ರದರ್ಶನಕ್ಕೆ ಅನವು ಮಾಡಿಕೊಟ್ಟಿರುವುದು ಸರಿಯಲ್ಲ, ಇದು ಖಂಡನೀಯ. ಇದರಲ್ಲಿ ಬಹಳಷ್ಟು ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಅಂಶಗಳನ್ನೂ ಹೊಂದಿದ್ದೂ ಸಮಾಜಕ್ಕೆ, ಹಿಂದೂ ಸಂಸ್ಕೃತಿಗೆ ಇದು ಕಪ್ಪು ಚುಕ್ಕೆ ಯಾಗಿದೆ. ಸಮಾಜಕ್ಕೆ ತಪ್ಪು ಕಲ್ಪನೆಯನ್ನು ರವಾನೆ ಮಾಡಲಾಗುತಿದೆ ಎಂಬುದು ಅವರ ಕೂಗಾಗಿತ್ತು. ಭೂ ಲೋಕದಲ್ಲಿ ಸತ್ತ ಒಬ್ಬ ವೇಶ್ಯಯನ್ನು ಯಮಲೋಕದಲ್ಲಿ ಚಿತ್ರಗುಪ್ತ ಚುಂಬಿಸುವುದು, ದೇವಲೋಕದಲ್ಲಿ ಇಂದ್ರನ ಮಗಳಾದ ದೇವಕನ್ಯ ಇಂದ್ರೆಜೆಯನ್ನು ನಾಯಕ ವಿವಿದ ಸರಸ ಸಲ್ಲಾಪದಲ್ಲಿ ಬಳಸಿಕೊಳ್ಳುವುದು, ದೇವಲೋಕದಲ್ಲಿ ಗ್ಲಾಮರ್, ಕ್ಯಾಬರೆ ನ್ರತ್ಯ, ದೇವತೆಗಳಿಗೆ ಅಸಂಬದ್ದ ರೀತಿಯಲ್ಲಿ ಬಯ್ಯುವುದು, ಯಮನನ್ನು ಆತನ ಆಸ್ಥಾನದಿಂದ ಕೆಳಗಿಳಿಸಿ ಆತನ ಆಸನಕ್ಕೆ ಪದಜ್ಯುತಿ ತರುವ ಈ ಕೆಲವು ದ್ರಶ್ಯಗಳು ಹಿಂದೂ ಧಾರ್ಮಿಕ ಸಂಸೃತಿಗೆ ಘಾಸಿ ಪಡಿಸುವಂತಹ ಒಂದು ಅನಿಷ್ಟ, ಇಲ್ಲ ಸಲ್ಲದ ಚಿತ್ರ ಕಥೆಯನ್ನು ಸೃಷ್ಟಿಸಲಾಗಿದೆ. ಹಿಂದೂ ಭಾಂದವರು, ಅಭಿಮಾನಿಗಳು, ಪ್ರಜ್ಞಾವಂತರು ಇದಕ್ಕೆ ಯಾವುದೇ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡಬಾರದೆಂದು ಪ್ರತಿಭಟನೆ ನಿರತ ಕಾರ್ಯಕರ್ತರು ಉದ್ದೆಶಿಸಿದರು. ಚಿತ್ರ ತಂಡಕ್ಕೆ, ಕರ್ನಾಟಕ ವಾಣಿಜ್ಯ ಮಂಡಳಿ, ಸೆನ್ಸರ್ ಮಂಡಳಿಗಳಿಗೆ ದಿಕ್ಕಾರವನ್ನು ಅರ್ಪಿಸಿದರು.
ಪ್ರತಿಭಟನೆಯಲ್ಲಿ ವಿಜಯ್ ಕುಮಾರ್, ರಾಘವೇಂದ್ರ ಆಚಾರ್ಯ, ಶೇಖರ ಪೂಜಾರಿ ಮೊದಲಾದವರು ಭಾಗವಹಿಸಿದರೆ, ಪ್ರತಿಭಟನಾಕಾರರಿಗಿಂತ ಪೊಲೀಸರು, ಮಾಧ್ಯಮದವರು ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದು ಅಚ್ಚರಿಪಡುವಂತಿತ್ತು.
ವರದಿ : ಶಿವಕುಮಾರ್, ಹೊಸಂಗಡಿ.
Filed under: State Newz, Udupi | Leave a Comment »
Posted on May 25, 2012 by ವಿಶ್ವ ಕನ್ನಡಿಗ ನ್ಯೂಸ್
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಮಂಗಳೂರು: ನಗರದ ಪಾದುವಾ ಪದವಿಪೂರ್ವ ಕಾಲೇಜು ಈ ಬಾರಿಯ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ. 97 ಫಲಿತಾಂಶವನ್ನು ದಾಖಲಿಸಿದೆ. ವಿಜ್ಞಾನ, ವಾಣಿಜ್ಯ ಹಾಗೂ ಕಲಾ ವಿಭಾಗಗಳ ಸಂಯೋಜನೆಯನ್ನು ಹೊಂದಿರುವ ಪಾದುವ ಕಾಲೇಜಿನಲ್ಲಿ 276 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 17 ಮಂದಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. 186 ಮಂದಿ ಪ್ರಥಮ ದರ್ಜೆ, 65 ಮಂದಿ ದ್ವಿತೀಯ ಹಾಗೂ 8 ಮಂದಿ ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪಾದುವಾ ಪದವಿಪೂರ್ವ ಕಾಲೇಜು ಪ್ರತೀ ವರ್ಷ ಶೇ. 96ಕ್ಕಿಂತ ಅಧಿಕ ಫಲಿತಾಂಶವನ್ನು ದಾಖಲಿಸುತ್ತಾ ಬಂದಿದೆ. ವಿಜ್ಞಾನ ವಿಭಾಗದ ಪ್ರಜ್ಞಾ (553) ಅಂಕ ಗಳಿಸುವುದರೊಂದಿಗೆ ಕಾಲೇಜಿನಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು:
ವಿಜ್ಞಾನವಿಭಾಗ:ಪ್ರಜ್ಞಾ (553), ಚೈತ್ರ ಎಂ. (515), ಸ್ಟಾಲೆನ್(513)
ವಾಣಿಜ್ಯ ವಿಭಾಗ:ಕಾವ್ಯಾ (552), ಕೆನೆತ್ ವೇಗಸ್ (550), ಹರ್ಷಿತಾ ಎಂ. (541), ನಿಶ್ಮಿತಾ (534), ಶೈಲಶ್ರೀ (534), ಮೆಲ್ವಿನ್ (527), ಜೋಯ್ಲೆಟ್ (523), ಪೂಜಾ (523), ಡೆನ್ಝಿಲ್ (520), ಜಾನ್ಸನ್ (519), ಜೆನೆವಿಯಾ (518), ಲಕ್ಷಿತ್ (515), ಡ್ಯಾರೆನ್ (514), ಸುಶ್ಮಿತಾ (512).
ವರದಿ : ಪ್ರವೀಣ್ ರೈ, ಕುಕ್ಕುವಳ್ಳಿ.
Filed under: Dakshina Kannada, State Newz | Leave a Comment »
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಸುಳ್ಯ : ಪಿಯುಸಿ ಖಾಸಗಿಯಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ತರಗತಿಗಳನ್ನು ನೀಡುತ್ತಿರುವ ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆಯು ಶೇ.95 ಫಲಿತಾಂಶ ದಾಖಲಿಸಿದೆ. ಸಂಸ್ಥೆಯಿಂದ ತರಗತಿಗಳನ್ನು ಪಡೆದು ಖಾಸಗಿ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆದಿದ್ದ ಒಟ್ಟು 40 ವಿದ್ಯಾರ್ಥಿಗಳ ಪೈಕಿ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸಂಸ್ಥೆಯು ಪಿಯುಸಿ ಕಲಾ ವಿಭಾಗ ಮತ್ತು ವಾಣಿಜ್ಯ ವಿಭಾಗಗಳನ್ನು ಹೋದಿದ್ದು ವಾಣಿಜ್ಯ ವಿಭಾಗದಿಂದ ಪರೀಕ್ಷೆ ಬರೆದಿದ್ದ 20 ಮಂದಿ ವಿದ್ಯಾರ್ಥಿಗಳ ಪೈಕಿ 19 ಮಂದಿ ಉತ್ತೀರ್ಣರಾಗಿದ್ದಾರೆ. 8 ಮಂದಿ ಪ್ರಥಮ ದರ್ಜೆಯಲ್ಲಿ, 5 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಮಹಮ್ಮದ್ ಶಾಕಿರ್ (451), ಕಲಂದರ್ ನೌಫಾಲ್(441), ಸೈಫುದ್ದೀನ್(438) ಅತೀ ಹೆಚ್ಚು ಅಂಕಗಳಿಸಿದ್ದಾರೆ. ಕಲಾ ವಿಭಾಗದಿಂದ ಪರೀಕ್ಷೆ ಬರೆದಿದ್ದ 20 ಮಂದಿ ವಿದ್ಯಾರ್ಥಿಗಳ ಪೈಕಿ 19 ಮಂದಿ ಉತ್ತೀರ್ಣರಾಗಿದ್ದಾರೆ. 10 ಮಂದಿ ಪ್ರಥಮ ದರ್ಜೆಯಲ್ಲಿ, 8 ಮಂದಿ ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಜನೀಶ್ (442), ಗೋಪಾಲಕೃಷ್ಣ (410)ಅತೀ ಹೆಚ್ಚು ಅಂಕ ಗಳಿಸಿದ್ದಾರೆ. ವಾಣಿಜ್ಯಶಾಸ್ತ್ರ ವಿಷಯಗಳಿಗೆ ತರಗತಿಗಳನ್ನು ಪಡೆದ ೩೦ಮಂದಿ ರೆಗ್ಯುಲರ್ ವಿದ್ಯಾರ್ಥಿಗಳ ಪೈಕಿ ಎಲ್ಲಾ 30 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವರದಿ : ಉಮೇಶ್, ಮಣಿಕ್ಕಾರ.
Filed under: Dakshina Kannada, State Newz | Leave a Comment »
Posted on May 25, 2012 by ರಫೀಕ್ ದಲ್ಕಾಜೆ,ಕೋಲ್ಪೆ

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮಂಗಳೂರು, ಕಾನೂನು ಸೇವಾ ಸಮಿತಿ ಪುತ್ತೂರು, ಪುತ್ತೂರಿನ ವಕೀಲರ ಸಂಘ, ಪೊಲೀಸ್ ಇಲಾಖೆ, ಕಾರ್ಮಿಕ ಇಲಾಖೆ, ಪ್ರಾದೇಶಿಕ ಸಾರಿಗೆ ಇಲಾಖೆ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಶಿಶು ಅಭಿವೃದ್ದಿ ಇಲಾಖೆ, ಪುರಸಭೆ, ತಾಲೂಕು ಪಂಚಾಯತ್ ಮತ್ತು ಬಿಂದು ಫ್ಯಾಕ್ಟರಿ ಇವುಗಳ ಆಶ್ರಯದಲ್ಲಿ ಮೂರು ದಿವಸಗಳ ಕಾಲ ಜರುಗುವ ಸಂಚಾರಿ ಲೋಕ ಅದಾಲತ್ ಮತ್ತು ಸಾಕ್ಷರತಾ ರಥ ಅಭಿಯಾನ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಮೇ 24ರಂದು ಸಂಪ್ಯ ಪೊಲೀಸ್ ಠಾಣಾ ವಠಾರದಲ್ಲಿ ಜರುಗಿತು.
ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ತ್ವರಿತಗತಿ ನ್ಯಾಯಾಲಯದ ನ್ಯಾಯಾಧೀಶ ಟಿ.ಜಿ.ಶಿವಶಂಕರೇಗೌಡರು ಮಾತನಾಡಿ ಕಾನೂನಿನ ರೀತಿ ಸದೃಢವಾಗಬೇಕು, ಕಾನೂನಿನ ಅರಿವು ಗ್ರಾಮಮಟ್ಟಕ್ಕೆ ಕೊಂಡುಹೋಗಬೇಕೆನ್ನುವುದೇ ರಥ ಅಭಿಯಾನದ ಆಶಯ ಎಂದು ನುಡಿದರು. ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಸೋಮಶೇಖರ ಸಿ. ಬಾದಾಮಿ ಮಾತನಾಡಿ ಸಂವಿಧಾನದ ಮೂರು ಅಂಗಗಳ ಸಂಗಮ ಇಂದಿನ ಕಾರ್ಯಕ್ರಮದಲ್ಲಿ ಆಗಿದೆ ಜೊತೆಗೆ ಪ್ರಜೆಗಳು ಸೇರಿ ಈ ಕಾರ್ಯಕ್ರಮ ಔಚಿತ್ಯಪೂರ್ಣವಾಗಿ ಮೂಡಿಬಂದಿದೆ. ಕಾನೂನಿನ ಅರಿವು ಇದ್ದಲ್ಲಿ ಬದುಕು ಸುಂದರವಾಗುತ್ತದೆ ಹಾಗೂ ಸುಸ್ಥಿರವಾಗುತ್ತದೆ ಎಂದರು. ವಕೀಲರ ಸಂಘದ ಅಧ್ಯಕ್ಷ ಮಹೇಶ್ ಕಜೆ ಮಾತನಾಡಿ ಜನಸಾಮಾನ್ಯರಿಗೆ ಕಾನೂನಿನ ಅರಿವು ಇದ್ದಾಗ ಕಾನೂನಿನ ಉಲ್ಲಂಘನೆ ಮಾಡದೇ ಇದ್ದಾಗ ಮತ್ತು ಪೊಲೀಸ್ ಠಾಣೆಗೆ ಹೋಗಲು ಅಂಜಿಕೆ ಇರುವುದಿಲ್ಲ ಎಂದರು.
ಮುಖ್ಯಅತಿಥಿಗಳಾಗಿ ಉಪಸ್ಥಿತರಿದ್ದ ತಾಲೂಕು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಪ್ರಧಾನ ವ್ಯವಹಾರಿಕ ನ್ಯಾಯಾಧೀಶರಾದ ಶ್ರೀಮತಿ ಪ್ರೀತ್ ಜೆ., ಜೆ.ಎಂ.ಎಫ್.ಸಿ. ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ವೆಂಕಟೇಶ್ ನಾಕ್ ವಿ., ತಾಲೂಕು ಹಿರಿಯ ಕಾರ್ಮಿಕ ನಿರೀಕ್ಷಕ ಕುಮಾರ್ ಬಿ.ಆರ್, ಎ.ಎಸ್ಪಿ ಅನುಚೇತ್ ಐ.ಪಿ.ಸ್. ಅವರು ಸಮಯೋಚಿತವಾಗಿ ಮಾತನಾಡಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ವಕೀಲ ಎ.ಮಜೀದ್ ಖಾನ್ ಎಫ್ಐಆರ್ ಮತ್ತು ಕ್ರಿಮಿನಲ್ ಕಾನೂನು ಎಂಬ ವಿಷಯಲ್ಲಿ ಮಾಹಿತಿ ನೀಡಿದರು. ಸೇಸಪ್ಪ ಪರ್ಪುಂಜ ಪ್ರಾರ್ಥಿಸಿದರು. ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣಾ ಉಪನಿರೀಕ್ಷಕ ನಂದ ಕುಮಾರ್ ಸ್ವಾಗತಿಸಿದರು. ಸರ್ಕಲ್ ಇನ್ಸ್ಪೆಕ್ಟರ್ ಗಳಾದ ಜಗದೀಶ್, ಸುದರ್ಶನ್, ತಾ.ಪಂ. ಸದಸ್ಯರಾದ ಮಹಮ್ಮದ್ ಬಡಗನ್ನೂರು, ಶಶಿಪ್ರಭಾ, ಮುಕುಂದ ಹಾಗೂ ಎಪಿಎಂಸಿ ಉಪಾಧ್ಯಕ್ಷ ಕರುಣಾಕರ ಗೌಡ, ಗ್ರಾ.ಪಂ. ಅಧ್ಯಕ್ಷ ವಸಂತ ಎಸ್.ಡಿ., ವಕೀಲರ ಸಂಘದ ಮಾಜಿ ಅಧ್ಯಕ್ಷ ಉದಯ ಶಂಕರ ಶೆಟ್ಟಿ, ಕಡಮಜಲು ಸುಭಾಶ್ ರೈ, ವಿಘ್ನೇಶ್ವರ ಭಟ್, ರಾಧಾಕೃಷ್ಣ ಬುಡಿಯಾರ್ ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ವಕೀಲ ಸಂಘದ ಕಾರ್ಯದರ್ಶಿ ಜಿ. ಜಗನ್ನಾಥ ರೈ ವಂದಿಸಿದರು. ಕಾರ್ಮಿಕ ಇಲಾಖೆಯ ಚಿದಾನಂದ ಕಾಮತ್ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು. ನ್ಯಾಯಾಂಗ ಇಲಾಖೆಯ ಬೊಮ್ಮೇಗೌಡ ಸಹಕರಿಸಿದರು.
ಕೃಪೆ: ಸುದ್ದಿ, ಪುತ್ತೂರು.
Filed under: Dakshina Kannada, State Newz | Leave a Comment »
Posted on May 25, 2012 by ರಫೀಕ್ ದಲ್ಕಾಜೆ,ಕೋಲ್ಪೆ

ಪುತ್ತೂರು: ಕಳೆದ ಎಪ್ರಿಲ್ ತಿಂಗಳಿನಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪುತ್ತೂರು ಸಂತ ಫಿಲೋಮಿನಾ ಪ್ರೌಢ ಶಾಲೆಯಿಂದ 310 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 297 ಮಂದಿ ಉತ್ತೀರ್ಣರಾಗಿರುತ್ತಾರೆ. 22 ಮಂದಿ ವಿಶಿಷ್ಟ ಶ್ರೇಣಿ ಹಾಗೂ 142 ಮಂದಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿಧ್ಯಾರ್ಥಿಗಳ ವಿವರಗಳು, ಹಸ್ತಾ ಆರ್ ಐತಾಳ್(603), ವಷರ್ಕಾಆಮತ್(603), ಭಾಗ್ಯಶ್ರೀ ಹೇರಳೆ (594), ಜೋಯಿಸನ್ ಡಿಕೋಸ್ಟ್(589), ಶಮೀಮ್ ಅರ್ಫತ್(583), ರೂಥರ್ ಲೂಯಿಸ್(582), ದೀಪಾಶ್ರೀ(581), ಅಲಕಾ(574), ಲೋಕೇಂಧರ್ ಸಿಂಗ್(574), ಪ್ರತೀಕ್ ರೈ(572), ಸ್ವಾತಿಕ್(569), ಮುಸಬ್ ಮುಹಮ್ಮದ್ (569), ಸುಶ್ಮಿತಾ ಕೆ.ವಿ(568), ಲಿಯೋನ್ ಡಿಸೋಜ(568), ಚಂದನ್ ಸಿ.ಎಸ್.(564), ಅಕ್ಷತಾ(561), ಆದಿತ್ಯಾ ನಾರಾಯಣಶರ್ಮ(559), ಅಹಮ್ಮದ್ ಎಫ್.ಎಚ್(558), ಲೆನಿನ್ ಡಿಕ್ರೂಜ್(548), ಮುಹಮ್ಮದ್ ಮುರ್ಷಿದ್ (539),ಕ್ಯಾನ್ಯೂಟ್ ಫೆರ್ನಾಂಡೀಸ್ (533), ಶ್ವೇತಾ (532) ಪಾಸಾಗಿದ್ದಾರೆ ಎಂದು ಓಸ್ವಾಲ್ಡ್ ರೋಡ್ರಿಗಸ್ ತಿಳಿಸಿದ್ದಾರೆ.
ಕೃಪೆ: ಸುದ್ದಿ, ಪುತ್ತೂರು.
Filed under: Dakshina Kannada, State Newz | Leave a Comment »
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ಬಂಟ್ವಾಳ : ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿ ಬಂಟ್ವಾಳ ಬಿಜೆಪಿ ವಿಧಾನಸಭಾ ಕ್ಷೇತ್ರದ ವತಿಯಿಂದ ಗುರುವಾರ ಸಂಜೆ ಬಿ.ಸಿ. ರೋಡ್ ಸರ್ಕಲ್‌ನಿಂದ ಕೈಕಂಬದವರೆಗೆ ಸೈಕಲ್ ಜಾಥಾ ನಡೆಸಿ ತಾಲೂಕು ಕಛೇರಿ ಮುಂಭಾಗದಲ್ಲಿ ಪ್ರತಿಭಟನಾ ಸಭೆ ನಡೆಸಲಾಯಿತು.
ಪ್ರತಿಭಟನಾಕಾರರನ್ನುದ್ದೇಶಿಸಿ ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಬಾಲಭವನ ಸೊಸೈಟಿ ಅಧ್ಯಕ್ಷೆ ಸುಲೋಚನಾ ಜಿ.ಕೆ. ಭಟ್ ಮಾತನಾಡಿದರು. ಹಿಂದುಳಿದ ವರ್ಗದ ಆಯೋಗದ ಸದಸ್ಯ ಎಂ. ತುಂಗಪ್ಪ ಬಂಗೇರ, ಪುರಸಭಾಧ್ಯಕ್ಷ ದಿನೇಶ್ ಭಂಡಾರಿ, ಎ.ಪಿ.ಎಂ.ಸಿ ಅಧ್ಯಕ್ಷ ರೊನಾಲ್ಡ್ ಡಿ’ಸೋಜಾ, ಪ್ರಮುಖರಾದ ರಾಮದಾಸ್ ಬಂಟ್ವಾಳ, ದೇವದಾಸ ಶೆಟ್ಟಿ, ಅಶೋಕ್ ಶೆಟ್ಟಿ ಸರಪಾಡಿ, ಆನಂದ ಶಂಭೂರು, ಎ.ಕೆ. ಹಾರಿಸ್ ಮೊದಲಾದವರು ಭಾಗವಹಿಸಿದ್ದರು. ಬಳಿಕ ತಹಶಿಲ್ದಾರರ ಮುಖಾಂತರ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆ ನೀರಸ : ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿಯವರೇ ಸೈಕಲೇರಿ ಪ್ರತಿಭಟನೆಯ ನೇತೃತ್ವ ವಹಿಸಿದ್ದರೂ ಬಿಜೆಪಿಯ ಬೆರಳೆಣಿಕೆಯ ಮುಖಂಡರನ್ನು ಹೊರತುಪಡಿಸಿದರೆ ಒಬ್ಬನೇ ಒಬ್ಬ ಕಾರ್ಯಕರ್ತನೂ ಪ್ರತಿಭಟನೆಯಲ್ಲಿ ಪಾಲ್ಗೊಳ್ಳದೇ ಇರುವುದು ತಾಲೂಕು ಬಿಜೆಪಿಯಲ್ಲೂ ಎಲ್ಲವೂ ಸರಿ ಇಲ್ಲ ಎಂಬುದನ್ನು ಪರೋಕ್ಷವಾಗಿ ಸ್ಪಷ್ಟಪಡಿಸಿದಂತಿತ್ತು.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »
Posted on May 25, 2012 by ಅಬ್ದುಲ್ ಹಮೀದ್ ಸಿ.ಹೆಚ್, ಕಾವು, ಪುತ್ತೂರು.

ವಿಟ್ಲ : ಒಂದು ಕೋಟಿಗೂ ಅಧಿಕ ಸದಸ್ಯರನ್ನು ಹೊಂದಿರುವ ಭಾರತೀಯ ಮಜ್ದೂರ್ ಸಂಘವು ದೇಶದಲ್ಲೇ ಅತೀ ದೊಡ್ಡ ಸಂಘಟನೆಯಾಗಿದೆ ಎಂದು ಬಿ.ಎಂ.ಎಸ್. ಜಿಲ್ಲಾಧ್ಯಕ್ಷ ವಿಶ್ವನಾಥ ಶೆಟ್ಟಿ ಹೇಳಿದರು. ಅವರು ಬಿ.ಎಂ.ಎಸ್. ಮಾಣೀ ವಲಯ ಅಟೋ ರಿಕ್ಷಾ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಬಿ.ಎಂ.ಎಸ್. ಸಂಘಟನೆಯು ಯಾವುದೇ ಯಾವುದೇ ರಾಜಕೀಯ ಪಕ್ಷದ ಅಂಗ ಸಂಸ್ಥೆಯಲ್ಲ. ಇದು ರಾಜಕೀಯ ರಹಿತ ಸ್ವತಂತ್ರ ಸಂಘಟನೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಮಾಣಿ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಕೃಷ್ಣಮ್ಮ ಅಧ್ಯಕ್ಷತೆ ವಹಿಸಿದ್ದರು. ಬಂಟ್ವಾಳ ಕಾರ್ಮಿಕ ಇಲಾಖೆ ಅಧಿಕಾರಿ ಎಂ. ಪ್ರಸನ್ನ ಕುಮಾರ್ ಪಿಂಚಣಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ನ್ಯಾಯವಾದಿ ಉಮೇಶ್ ಕುಮಾರ್ ವೈ, ಮಾಣಿ ಗ್ರಾ.ಪಂ. ಸದಸ್ಯ ಬಾಲಕೃಷ್ಣ ಆಳ್ವ, ಬಿ.ಎಂ.ಎಸ್. ಪುತ್ತೂರು ಅಧ್ಯಕ್ಷ ಈಶ್ವರ ಸಪಲ್ಯ, ಬಂಟ್ವಾಳ ಅಧ್ಯಕ್ಷ ಸದಾನಂದ ಗೌಡ, ಪತ್ರಕರ್ತ ಲತೀಫ್ ನೇರಳಕಟ್ಟೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
This slideshow requires JavaScript.
ಸಂಘದ ಪೂರ್ವಾಧ್ಯಕ್ಷ ಜಯಾನಂದ, ಗ್ಯಾರೇಜ್ ಮಾಲಕ ಗೋಪಾಲಕೃಷ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಇದೇ ವೇಳೆ ಸಂಘದ ಇಬ್ಬರು ಸದಸ್ಯರಿಗೆ ಚಿಕಿತ್ಸಾ ವೆಚ್ಚದ ಬಾಬ್ತು ತಲಾ ೩,೦೦೦/- ದಂತೆ ವಿತರಿಸಲಾಯಿತು. ೨೦೧೨-೧೩ನೇ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆರಿಸಲಾಯಿತು. ಚಂದಪ್ಪ ಸುವರ್ಣ ಸ್ವಾಗತಿಸಿ, ಎಸ್. ಉಮ್ಮರ್ ವಂದಿಸಿದರು. ಗಣೇಶ್ ಪೂಜಾರಿ ಅನಂತಾಡಿ ವಂದಿಸಿದರು.
- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)
Filed under: Dakshina Kannada, State Newz | Leave a Comment »