|

ರಾಜ್ಯ ರಾಜಕಾರಣದಲ್ಲಿ ‘ಬಿರುಗಾಳಿ’


-ಶಂಶೀರ್, ಬುಡೋಳಿ
ಪತ್ರಕರ್ತ
Courtesy: jolige blog

ನಿಜಕ್ಕೂ ರಾಜ್ಯ ರಾಜಕಾರಣದಲ್ಲಿ ‘ಬಿರುಗಾಳಿ’.
ಗಣಿ ವರದಿಯಲ್ಲಿ ಆರೋಪ ಸ್ಥಾನ…ನೊಂದ ಶ್ರೀರಾಮುಲುರಿಂದ ಬಿಜೆಪಿ ಸಚಿವ ಸ್ಥಾನಕ್ಕೆ ರಾಜೀನಾಮೆ…ನಿರೀಕ್ಷೆಯಂತೆ ಬಳ್ಳಾರಿ ಗ್ರಾಮಾಂತರ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು..ಇವೆಲ್ಲಾ ರಾಮುಲುರ ಇತ್ತೀಚಿನ ಪ್ಲಾಶ್‌ಬ್ಯಾಕ್. ಉಪಚುನಾವಣೆಯಲ್ಲಿ ಬಿಜೆಪಿಗೆ ಪ್ರಬಲ ವಿರೋಧಿಯಾಗಿ ಪಕ್ಷೇತರರಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದವರು ಶ್ರೀರಾಮುಲು.ಇವರಿಗೆ ಪರೋಕ್ಷ ಬೆಂಬಲ ನೀಡಿದ್ದ ಜೆಡಿ‌ಎಸ್‌ನೊಂದಿಗೆ ಚುನಾವಣೆಯಲ್ಲಿ ಗೆದ್ದ ನಂತರ ಶ್ರೀರಾಮುಲು ಜೆಡಿ‌ಎಸ್ ಸೇರುತ್ತಾರೆಂದು ಭಾವಿಸಲಾಗಿತ್ತು..ಆದರೆ ಆ ನಿರೀಕ್ಷೆ ಸುಳ್ಳಾಗಿದ್ದು, ಶ್ರೀರಾಮುಲು ಬಡವರ, ಶ್ರಮಿಕರ ಹಾಗೂ ರೈತರ ಪರವಾಗಿರುವ ಬಿ‌ಎಸ್‌ಆರ್ ಪಕ್ಷವನ್ನು ಸ್ಥಾಪಿಸಿದ್ದಾರೆ..ನಿಜಕ್ಕೂ ಈ ಮೂಲಕ ಶ್ರೀರಾಮುಲು ಪರ್ಯಾಯ ರಾಜಕಾರಣವನ್ನು ಆರಂಭಿಸಿದ್ದಾರೆಯೇ ಎಂಬುದು ಎಲ್ಲರ ಪ್ರಶ್ನೆ.
ಇದು ಪರ್ಯಾಯ ಅಲ್ಲ..ವ್ಯಕ್ತಿ ಕೇಂದ್ರಿತ ಪಕ್ಷ..!
ನಿರೀಕ್ಷೆಯಂತೆ ಉಪಚುನಾವಣೆಯಲ್ಲಿ ಗೆದ್ದ ರೆಡ್ಡಿ ಬಂಟ ಶ್ರೀರಾಮುಲು ತಮ್ಮ ಪ್ರತಿಷ್ಠೆಗಾಗಿ, ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ‘ಬಿ‌ಎಸ್‌ಆರ್’ ಎಂಬ ರಾಜಕೀಯ ಪಕ್ಷವನ್ನು ರಾಜ್ಯದಲ್ಲಿ ಸ್ಥಾಪಿಸಿದ್ದಾರೆ. ಶ್ರೀರಾಮುಲು ತಮ್ಮ ಹೊಸ ಪಕ್ಷದ ಜೊತೆಗೆ ಕಾಂಗ್ರೆಸ್, ಜೆಡಿ‌ಎಸ್‌ನೊಂದಿಗೆ ಬಿಜೆಪಿ ಪ್ರಭುತ್ವ ಅಲ್ಲಾಡಿಸಲು ಮುಂದಾಗಿದ್ದಾರೆ. ರಾಮುಲು ಹೇಳಿದಂತೆ ಹೊಸ ಪಕ್ಷವೆಂಬುದು ಕೇವಲ ಶ್ರಮಿಕರ, ರೈತರ ಬಡವರ ಪಾರ್ಟಿ ಕೇವಲ ಹೆಸರಿಗೆ ಮಾತ್ರ ಇರುತ್ತೆ ಹೊರತು ನಿಜಾರ್ಥದಲ್ಲಿ ಇದು ಇವರ ಪರವಾಗಿರುವುದಿಲ್ಲ, ಇವರ ಪರವಾಗಿ ಧ್ವನಿಯೆತ್ತುವುದೂ ಕೂಡಾ ಇಲ್ಲ.ಬದಲಾಗಿ ಇದು ವೈಯಕ್ತಿಕ ಕೇಂದ್ರಿತ ಪಕ್ಷವಾಗಿರುತ್ತದೆ. ಯಾಕೆಂದರೆ ದುಡ್ಡಿನ ಮೂಲಕ ಆದರ್ಶ, ಸಿದ್ದಾಂತವನ್ನು ರೂಪಿಸಲು ಹೊರಟ ಹಾಗೂ ದುಡ್ಡಿನಿಂದಲೇ ಸ್ವಾಭಿಮಾನ ಗಳಿಸಲು ಹೊರಟ ರೆಡ್ಡಿ ಬೆಂಬಲಿತ ಶ್ರೀರಾಮುಲು ಪಕ್ಷ ನಿಜವಾಗಿಯೂ ರಾಜ್ಯದ ಜನತೆಯ ಆಶೋತ್ತರಗಳನ್ನು ಈಡೇರಿಸಲ್ಲ.ಇದೊಂದು ಬಿಜೆಪಿಗೆ ಪರ್ಯಾಯ ವಿರೋಧಿ ಪಕ್ಷವಾಗಿರುತ್ತದೆಯೇ ಹೊರತು ಪರ್ಯಾಯ ರಾಜಕಾರಣವನ್ನು ಹುಟ್ಟುಹಾಕಿದೆ ಎಂಬ ಮಾತು ನಿಜಕ್ಕೂ ಸುಳ್ಳು. ಬಿಜೆಪಿ ನೇತೃತ್ವದ ಸರ್ಕಾರವನ್ನು ಉರುಳಿಸಲು ಹಾಗೂ ತಮ್ಮ ಸೇಡನ್ನು ತೀರಿಸಿಕೊಳ್ಳಲು ಶ್ರೀರಾಮುಲು, ಜನಾರ್ಧನ ರೆಡಿ ಜೊತೆಗೆ ತಮ್ಮ ಕುಟುಂಬದ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪಕ್ಷ ಸ್ಥಾಪಿಸಿದ್ದರೆಯೇ ಹೊರತು ರಾಜ್ಯದ ಹಿತಕ್ಕಲ್ಲ. ಯಾಕೆಂದರೆ ಈಗಾಗಲೇ ರಾಜ್ಯದ ಜನತೆ ರಾಜಕೀಯ ಪಕ್ಷಗಳ ಅಧಿಕಾರಕ್ಕಾಗೀನ ಜಂಜಾಟದಿಂದ ಬೇಸತ್ತಿದ್ದು, ಈ ಎಡೆಯಲ್ಲಿ ಗಣಿ ಹಗರಣದಿಂದ ಜೈಲು ಸೇರಿರೋ ಹಾಗೂ ಈ ಆರೋಪವನ್ನು ಎದುರಿಸುತ್ತಿರೋ ಶ್ರೀರಾಮುಲುರಿಂದ ರಾಜ್ಯದ ಜನತೆ ಹೊಸ ರಾಜಕೀಯ ಪಕ್ಷದ ಮೂಲಕ ಹೊಸ ನಿರೀಕ್ಷೆಯನ್ನು ನಿರೀಕ್ಷಿಸಿಯೇ ಇಲ್ಲ. ಅಷ್ಟೇ ಅಲ್ಲ, ಈಗಾಗಲೇ ಕಾಂಗ್ರೆಸ್, ಬಿಜೆಪಿ ಜೊತೆಗೆ ಜೆಡಿ‌ಎಸ್‌ಗೆ ಜೋತು ಬಿದ್ದಿರುವ ಜನತೆ ಹೊಸ ಪಕ್ಷವನ್ನು ಸ್ವಾಗತಿಸುವುದು ಕೂಡಾ ಅಷ್ಟಕ್ಕಷ್ಟೇ. ಹೀಗಾಗಿ ಶ್ರೀರಾಮುಲು ತಮ್ಮ ಹೊಸ ಪಕ್ಷದ ಮೂಲಕ ಹಾಗೂ ತಮ್ಮ ಹಣ ಬಲದ ಮೂಲಕ ಇತರ ಪಕ್ಷದಿಂದ ಶಾಸಕರನ್ನು ಖರೀದಿಸಬಹುದೇ ಹೊರತು ಜನಮನ್ನಣೆಯನ್ನಲ್ಲ..


ಯಾಕೆಂದರೆ, ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿ‌ಎಸ್ ನಂತ್ರ ಎಡಪಕ್ಷಗಳು ಮೂರನೇಯ ಪರ್ಯಾಯ ರಾಜಕಾರಣವನ್ನು ಆರಂಭಿಸುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಇದು ಇವರೆಗೆ ಈಡೇರಿಲ್ಲ.. ಬಿಜೆಪಿ ಸರ್ಕಾರವನ್ನು ಉರುಳಿಸಲು ಮೊದಲೇ ಪ್ರಯತ್ನ ಮಾಡುತ್ತಿದ್ದ ಕೈ ಪಾಳಯದ ಜೊತೆಗೆ ಜೆಡಿ‌ಎಸ್ ಪಕ್ಷಕ್ಕೆ ಈಗ ಶ್ರೀರಾಮುಲು ಪಕ್ಷೇತರ ರೂಪದಲ್ಲಿ ಸಾಥ್ ನೀಡಿದಂತಾಗಿದೆ. ಹೀಗಾಗಿ ತಮ್ಮ ಪಕ್ಷದಿಂದಲೇ ಗುರುತಿಸಿಕೊಂಡ ಸಚಿವರೇ ಈಗ ತಮಗೆ ಮುಳುವಾಗಿದ್ದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಜೊತೆಗೆ ಬಳ್ಳಾರಿ ಚುನಾವಣಾ ಕದನದಲ್ಲಿ ರಾಮುಲುರಿಂದ ಮುಖಭಂಗಕ್ಕೊಳಗಾಗಿದ್ದ ಬಿಜೆಪಿಗೆ ಕನಿಷ್ಠ ಪಕ್ಷ ತನ್ನ ಠೇವಣಿಯನ್ನು ಕಾಯ್ದುಕೊಳ್ಳಲು ಸಾಧ್ಯವಾಗಲಿಲ್ಲ..ಇತ್ತ ಯಡಿಯೂರಪ್ಪ ಸಿ‌ಎಂ ಪಟ್ಟವನ್ನು ಮರಳಿ ಪಡೆಯಲು ರಾಜಕೀಯ ಕುತಂತ್ರವಾಡುತ್ತಿದ್ರೆ, ಇತ್ತ ಶ್ರೀರಾಮುಲು ಬಿಜೆಪಿ ಸರ್ಕಾರವನ್ನು ಉರುಳಿಸಲು ಪ್ರಯತ್ನ ಪಡುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ರಾಜಕೀಯದಲ್ಲಿ ಧೂಳೆಬ್ಬಿಸುವ ಆಟ ಅಂತಾನೇ ಹೇಳಬಹುದು..
ಹೀಗೆ ಇನ್ನೊಂದೆಡೆ ಹೊಸ ಪಕ್ಷ ಕಟ್ಟುವ ಮೂಲಕ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿರುವ ಶ್ರೀರಾಮುಲು ವಿಧಾನಪರಿಷತ್ ಚುನಾವಣೆಯನ್ನೇ ಅಸ್ತ್ರವಾಗಿ ಬಳಸಿಕೊಳ್ಳುವ ಮೂಲಕ ಸರ್ಕಾರವನ್ನೇ ಉರುಳಿಸಲು ಪ್ರಯತ್ನ ಮಾಡಿದ್ದಾರೆ. ಇದರ ಜೊತೆಗೆ ತನ್ನ ಬಳಿ ೨೨ ಶಾಸಕರಿದ್ದಾರೆ ಅನ್ನೋ ವಿಷಯವನ್ನು ಕೂಡಾ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಇಲ್ಲ.ನಮ್ಮೆಲ್ಲಾ ಶಾಸಕರು ಒಗ್ಗಟ್ಟಿನಲ್ಲಿದ್ದಾರೆ ಅಂತಾ ಹೇಳಿದ್ದಾರೆ. ನಿಜಕ್ಕೂ ರಾಜ್ಯ ರಾಜಕೀಯದಲ್ಲಿ ಗೊಂದಲದ ಗೂಡು ಮನೆ ಮಾಡಿದ್ದು, ತಮ್ಮ ಬೆಂಬಲಿತ ಶಾಸಕರನ್ನು ಒಗ್ಗೂಡಿಸುತ್ತಿರುವ ಶ್ರೀರಾಮುಲು, ಡಿಸೆಂಬರ್ ೨೨ರಂದು ನಡೆಯೋ ವಿಧಾನಪರಿಷತ್ ಚುನಾವಣೆಯಲ್ಲಿ ಹೊಸ ಅಸ್ತ್ರ ಪ್ರಯೋಗಿಸ್ತಾರ ಎನ್ನುವುದು ಕುತೂಹಲ ಮೂಡಿಸಿದೆ. ಮೊದಲೇ ಹೇಳಿದಂತೆ ತಮ್ಮ ಹೊಸ ಪಕ್ಷವನ್ನು ತಮ್ಮ ವೈಯಕ್ತಿಕ ಉದ್ದೇಶಕ್ಕೆ ಬಳಸಿಕೊಳ್ಳುವ ಅಜೆಂಡಾ ಇಟ್ಟುಕೊಂಡಿರೋ ಶ್ರೀರಾಮುಲು ತಮ್ಮ ಹೊಸ ಪಕ್ಷದ ರಚನೆಯ ವೇಳೆ ಕಾಂಗ್ರೆಸ್-ಜೆಡಿ‌ಎಸ್ ಒಂದಾಗಿ ಒಮ್ಮತದ ಅಭ್ಯರ್ಥಿಯನ್ನು ನಿಲ್ಲಿಸಿದರೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ..ನಿಜಕ್ಕೂ ಇವೆಲ್ಲಾ ಜನಹಿತ ಪಕ್ಷದ ಗುಣಗಳೇ? ರಾಜ್ಯದ ಜನತೆಯೇ ನಿರ್ಧರಿಸಬೇಕು…
ಇವೆಲ್ಲಾ ರಾಮುಲು ಬಿಜೆಪಿ ವಿರುದ್ಧ ಉರುಳಿಸಿದ ದಾಳವಾದ್ರೆ..ಇತ್ತ ಯಡಿಯೂರಪ್ಪ ಸಹ ಸಿ‌ಎಂ ಸದಾನಂದ ಗೌಡರನ್ನು ಪಟ್ಟದಿಂದ ಉರುಳಿಸುವ ಪ್ರಯತ್ನ ಮಾಡಿದ್ದಾರೆ. ಸದಾನಂದ ಗೌಡ ವಿಧಾನಮಂಡಲ ಸದಸ್ಯರಲ್ಲ. ಇದನ್ನೇ ದಾಳವಾಗಿ ಉಪಯೋಗಿಸಿರೋ ಯಡಿಯೂರಪ್ಪ, ಶ್ರೀರಾಮುಲು ಜೊತೆಗೆ ಬಿಜೆಪಿ ಸರ್ಕಾರಕ್ಕೆ ಕುಂದುಂಟು ತರುವ ರಣತಂತ್ರ ರೂಪಿಸಿದ್ದಾರೆ. ಸದ್ಯ ವಿಧಾನಮಂಡಲದ ಸದಸ್ಯರಾಗದೇ ಸದಾನಂದ ಗೌಡ, ಸಿ‌ಎಂ ಗಾದಿಗೇರಿದ್ದಾರೆ. ಈಗಾಗಲೇ ಸದಾನಂದ ಗೌಡ ಸಿ‌ಎಂ ಆಗಿ ಮೂರು ತಿಂಗಳಾಗಿದ್ದು, ಕೂಡಲೇ ಶಾಸಕ ಅಥವಾ ಪರಿಷತ್ ಸದಸ್ಯರಾಗಿ ಆಯ್ಕೆಯಾಗಬೇಕು. ಹೀಗಾಗಿ ಶಂಕರಪ್ಪರಿಂದ ರಾಜೀನಾಮೆ ಪಡೆದು ಶಾಸಕರ ಮತಗಳಿಂದ ವಿಧಾನ ಪರಿಷತ್‌ಗೆ ಆಯ್ಕೆಯಾಗಲು ಸದಾನಂದಗೌಡರು ಪ್ಲಾನ್ ಮಾಡಿದ್ದಾರೆ. ಈಗಾಗಲೇ ಸದಾನಂದಗೌಡರ ಆಡಳಿತಾವಧಿ ಮೂರೂವರೆ ತಿಂಗಳು ಮುಗಿದಿರೋದ್ರಿಂದ ಈ ಚುನಾವಣೆಯಲ್ಲಿ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಇದರೆಡೆಯಲ್ಲಿ ಶ್ರೀರಾಮುಲು ಬೆಂಬಲತ ಶಾಸಕರು ಉಲ್ಟಾ ಹೊಡೆದ್ರೆ ಸದಾನಂದಗೌಡರಿಗೆ ಸೋಲು ಖಚಿತವಾಗಲಿದೆ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿಯ ೧೧೯ ಶಾಸಕರಿದ್ದಾರೆ. ಪಕ್ಷೇತರ ವರ್ತೂರ್ ಪ್ರಕಾಶ್ ಜೊತೆಗೆ ಬಿಜೆಪಿ ಸಂಖ್ಯಾ ಬಲ ೧೨೦. ಇನ್ನು ಕಾಂಗ್ರೆಸ್ ಪಕ್ಷದಲ್ಲಿ ೭೧ ಹಾಗೂ ಜೆಡಿ‌ಎಸ್ ಪಕ್ಷದಲ್ಲಿ ೨೬ ಶಾಸಕರಿದ್ದಾರೆ. ಇನ್ನೂ ಈ ಹಿಂದೆ ಇದ್ದ ಐವರ ಜೊತೆ ಶ್ರೀರಾಮುಲು ಸೇರಿದ್ರೆ ಪಕ್ಷೇತರ ಶಾಸಕರು ೬ ಮಂದಿಯಾಗುತ್ತಾರೆ. ಜೊತೆಗೆ ಸ್ಪೀಕರ್ ಸೇರಿದ್ರೆ ವಿಧಾನಸಭೆಯ ಒಟ್ಟು ಬಲ ೨೨೪ ಆಗುತ್ತದೆ.
ಒಂದು ವೇಳೆ ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್-ಜೆಡಿ‌ಎಸ್ ಒಂದಾಗಿ ಒಮ್ಮತದ ಅಭ್ಯರ್ಥಿಯನ್ನು ನಿಲ್ಲಿಸಿದರೆ ಸದಾನಂದಗೌಡರಿಗೆ ಸೋಲು ಗ್ಯಾರಂಟಿ. ಯಾಕಂದರೆ ಕಾಂಗ್ರೆಸ್‌ನ ೭೧ ಶಾಸಕರು, ಜೆಡಿ‌ಎಸ್‌ನ ೨೬ ಶಾಸಕರು ಹಾಗೂ ಶ್ರೀರಾಮುಲು ಬೆಂಬಲಿತ ೨೨ ಶಾಸಕರು ಒಂದಾದರೆ ಒಟ್ಟು ೧೧೯ ಸದಸ್ಯ ಬಲವಾಗುತ್ತೆ. ಇನ್ನು ಪಕ್ಷೇತರರ ಬೆಂಬಲವೂ ಸಿಕ್ಕಿದರೆ ಸದಾನಂದಗೌಡರು ಸೋಲುವುದು ಖಚಿತ. ಇದರೆಡೆಯಲ್ಲಿ ಒಂದು ವೇಳೆ ಶ್ರೀರಾಮುಲು ಬೆಂಬಲಿಗರು ಸದಾನಂದಗೌಡರ ವಿರುದ್ಧ ನಿಂತರೆ, ಬಿಜೆಪಿ ವಿಪ್ ಅಸ್ತ್ರ ಉಪಯೋಗಿಸಿದರೆ, ಪ್ರಥಮ ಪ್ರಾಶಸ್ತ್ಯ ಮತವನ್ನು ಅವರ ಪಕ್ಷಕ್ಕೇ ನೀಡಬೇಕಾಗುತ್ತೆ. ವಿಪ್ ಉಲ್ಲಂಘಿಸಿದರೆ ಶಾಸಕತ್ವ ಅನರ್ಹವಾಗುವ ಅಪಾಯವಿದೆ.
ಹೀಗೆ ರಾಜ್ಯ ರಾಜಕಾರಣದಲ್ಲಿ ಶ್ರೀರಾಮುಲು, ಯಡಿಯೂರಪ್ಪರು ಸುದ್ದಿಯಲ್ಲಿದ್ದಾರೆ.ಮುಂದಿನ ಒಂದೂವರೆ ವರ್ಷದ ಅಧಿಕಾರದೆಡೆಯಲ್ಲಿ ಬಿಜೆಪಿ-ಶ್ರೀರಾಮುಲು ನಡುವಿನ ರಾಜಕೀಯ ಕೆಸರೆರಾಚಾಟ ನಿಜಕ್ಕೂ ಹೇಸಿಗೆ ಮುಟ್ಟಿಸುವಂತಾಗಿದೆ.ಇದಕ್ಕೆ ಕಾಂಗ್ರೆಸ್, ಜೆಡಿ‌ಎಸ್ ಕೂಡಾ ಸಾಥ್ ನೀಡುತ್ತಿರುವುದು ಸಹ ವಿಪರ್ಯಾಸವಾಗಿದೆ..
Courtesy: jolige blog

————– ವಿಶ್ವ ಕನ್ನಡಿಗ ನ್ಯೂಸ್ ಈಗ www.vknews.in ನಲ್ಲೂ ಲಭ್ಯ ————–

Posted by on Dec 16 2011. Filed under ಲೇಖನಗಳು. You can follow any responses to this entry through the RSS 2.0. Both comments and pings are currently closed.

Comments are closed

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಗಮನಿಸಿರಿ

ಯಾವುದೇ ರೀತಿಯ ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳಿಗೆ ಇಲ್ಲಿ ಅವಕಾಶವಿಲ್ಲ . ದಯವಿಟ್ಟು ಅಂತಹ ಪ್ರತಿಕ್ರಿಯೆಗಳನ್ನು ಬರೆಯಬೇಡಿ .ನೀವು ಬರೆಯುವ ಕಮೆಂಟುಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ .

ಮಾಹಿತಿ ತಂತ್ರಜ್ಞಾನ ಕಾಯ್ದೆ 66 A ಪ್ರಕಾರ ಅಸಭ್ಯ , ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಕಾಮೆಂಟ್ಸ್ ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ . ಇಂತಹ ಕಾಮೆಂಟುಗಳ ಬಗ್ಗೆ ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಮಾಹಿತಿ ಕೇಳಿದರೆ ಕಾಮೆಂಟ್ ಬರೆದವರ ಇ ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ .

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಪ್ರಕಟವಾದ ಸುದ್ದಿ ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಸಂಪಾದಕರನ್ನು ಸಂಪರ್ಕಿಸಿ .

E Mail : ashrafmanzarabad@gmail.com

ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಕೆ ನ್ಯೂಸ್.

***********************************************************

ದಿನವಹಿ ಸುದ್ದಿಗಳು

Gulf Asian

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************