Home » April 17th, 2012 Entries posted on “April 17th, 2012”

ಐಪಿಎಲ್ ಸರಣಿಯಲ್ಲಿ ನಿರಾಸೆ ಮೂಡಿಸಿರುವ ಬಿಗ್ ಹಿಟ್ಟರ್ ಯೂಸುಫ್ ಪಠಾಣ್

  ಕೊಲ್ಕತ್ತಾ : ಶಾರುಖ್ ಖಾನ್ ಮಾಲಿಕತ್ವದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಸ್ಪೋಟಕ ಬ್ಯಾಟ್ಸ್ ಮ್ಯಾನ್ ಯೂಸುಫ್ ಪಠಾಣ್ ಈ ಬಾರಿಯ ಐಪಿಎಲ್ ಪಂದ್ಯಾವಳಿಯಲ್ಲಿ ಸ್ಪೋಟಿಸದೇ ಠುಸ್ ಆಗಿದ್ದಾರೆ . ಬಾರೀ ಹೊಡೆತಗಳ ಆಟಗಾರ ಎಂದೇ ಶಾರುಖ್ ಖಾನ್ ಇವರನ್ನು ಅತೀ ದೊಡ್ಡ ಮೊತ್ತ ಪಾವತಿಸಿ ತಮ್ಮ ತಂಡಕ್ಕೆ ಸೇರಿಸಿಕೊಂಡಿದ್ದರು . ಮೊದಲ ಐಪಿಎಲ್ ಪಂದ್ಯಾವಳಿಯಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಯೂಸುಫ್ ಪಠಾಣ್  ಅವರ ಅಬ್ಬರದ ಆಟ ಆ ಬಾರಿಯ ಐಪಿಎಲ್ ಟ್ರೋಫಿಯ ಜೊತೆಗೆ ಯೂಸುಫ್ ಪಠಾಣ್ ಅವರಿಗೆ ಹೆಸರನ್ನೂ ತಂದು ಕೊಟ್ಟಿತ್ತು . ಆದರೆ ಆನಂತರದ [...]

April 17th, 2012 | Posted in ಕ್ರೀಡಾ ಸುದ್ದಿಗಳು | Read More »

SSLC ಪರೀಕ್ಷೆ ಬರೆದ IBEF ವಿಧ್ಯಾರ್ಥಿಗಳಿಗೆ SVS ವತಿಯಿ೦ದ ವಿದಾಯ ಕೂಟ

ಉಳ್ಳಾಲ : ಸುನ್ನೀ ವಿದ್ಯಾರ್ಥಿ ಸ೦ಘ (ಎಸ್.ವಿ.ಎಸ್) ಇದರ ಅಧೀನದಲ್ಲಿರುವ ಇಬ್ರಾಹಿಮ್ ಬಾತಿಷಾ ಎಜುಕೇಶನ್ ಪೌ೦ಡೇಶನ್ ವತಿಯಿ೦ದ (ಐ.ಬಿ.ಇ.ಎಫ್) ದಿನಾ೦ಕ 16-04-2012 ರ೦ದು 2011-2012 ನೇ ಸಾಲಿನಲ್ಲಿ SSLC ಕಲಿತ ವಿಧ್ಯಾರ್ಥಿಗಳಿಗೆ ವಿದಾಯಕೂಟ ಕಾರ್ಯಕ್ರಮ ಅಳೇಕಲದ ಅ೦ಗನವಾಡಿಯಲ್ಲಿ ನಡೆಯಿತು. SSLC ಪೂರ್ತಿಗೊಳಿಸದ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಎಸ್.ಎಸ್.ಎಲ್.ಸಿ ಕಲಿಸುವ ಯೋಜನೆಯನ್ನು ಎರಡು ವರ್ಷಗಳ ಹಿ೦ದೆ ಸುನ್ನೀ ವಿಧ್ಯಾರ್ಥಿ ಸ೦ಘ ಅಳೇಕಲ ತೀರ್ಮಾನಿಸಿತು, ಇದಕ್ಕೆ ಇಬ್ರಾಹಿ೦ ಬಾತಿಷಾ ಎಜುಕೇಶನ್ ಪೌ೦ಡೇಶನ್ (ಐ.ಬಿ.ಇ.ಎಫ್) ಎ೦ಬ ಅ೦ಗ ಸ೦ಸ್ಥೆಯನ್ನು ಸ್ಥಾಪಿಸಿತು. ಈಗ [...]

April 17th, 2012 | Posted in ದಕ್ಷಿಣ ಕನ್ನಡ | Read More »

ಝರೀನ್ ಖಾನ್ ಬಾಲಿವುಡ್ ಹಾಟ್ ಬೆಡಗಿ

  ಮುಂಬೈ :  ಬಾಲಿವುಡ್ ನಟಿ ಝರೀನ್ ಖಾನ್ ಈ ಬಾರಿಯ ಹಾಟ್ ಬಾಲಿವುಡ್ ಬೆಡಗಿಯಾಗಿ ಆಯ್ಕೆಯಾಗಿದ್ದಾರೆ. ಸಾಮಾಜಿಕ  ತಾಣವೊಂದು ನಡೆಸಿದ ಹಾಟ್ ಬೆಡಗಿಯರ ಆಯ್ಕೆಯಲ್ಲಿ ಜನ ಇವರನ್ನು ಹೆಚ್ಚು ಮತ ನೀಡಿ ಆಯ್ಕೆ ಮಾಡಿದ್ದಾರೆ .   ಸಲ್ಮಾನ್ ಖಾನ್ ಜೊತೆ ಎರಡು ಚಿತ್ರಗಳಲ್ಲಿ ನಟಿಸುವ ಮೂಲಕ ಬಾಲಿವುಡ್ ನಲ್ಲಿ ಜನಪ್ರಿಯತೆಯನ್ನು ಪಡೆದ ಝರೀನ್  ಖಾನ್   ಬಾಲಿವುಡ್ ಹಾಟ್ ಬೆಡಗಿಯಾಗಿ ಆಯ್ಕೆಯಾಗಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದ್ದು ಈಗಾಗಲೇ ಈ ಕುರಿತು ಅಭಿನಂದನೆಗಳ ಕರೆಗಳು ಮತ್ತು ಮೆಸೇಜ್ ಗಳು ಬರುತ್ತಿರುವುದಾಗಿ ಹೇಳಿಕೊಂಡಿದ್ದಾರೆ .

April 17th, 2012 | Posted in ಚಿತ್ರ ಜಗತ್ತು | Read More »

ಮಂಗಳೂರು : ಮೇಯರ್ ಆಯ್ಕೆ ಬಗ್ಗೆ ಹೈಕೋರ್ಟ್ ತೀರ್ಪು ಪ್ರಕಟ

 ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಆಗಿ ಆಯ್ಕೆಯಾದ  ಕಾಂಗ್ರೆಸ್ ಪಕ್ಷದ ಗುಲ್ಜಾರ್  ಬಾನು   ಅವರ ಆಯ್ಕೆಯನ್ನು ಪ್ರಶ್ನಿಸಿ ಬಿಜೆಪಿಯ ರೂಪಾ ಡಿ ಬಂಗೇರಾ ಅವರು ಸಲ್ಲಿಸಿದ್ದ ಅರ್ಜಿಯ ಬಗ್ಗೆ ತೀರ್ಪು  ನೀಡಿರುವ  ಹೈಕೋರ್ಟ್  ಅವರ ಅರ್ಜಿಯನ್ನು ತಿರಸ್ಕರಿಸಿದ್ದು  ಈ ಬಗ್ಗೆ ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ  ಸೂಚಿಸಿದೆ. ಈ ಮೂಲಕ ಗುಲ್ಜಾರ್ ಬಾನು ಅವರ ಮೇಯರ್ ಅವಧಿಯ ಬಗೆಗೆ ಇದ್ದ ಗೊಂದಲಗಳಿಗೆ  ಸದ್ಯಕ್ಕೆ  ತೆರೆಬಿದ್ದಿದ್ದು ಮೇಯರ್  ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.  

April 17th, 2012 | Posted in ದಕ್ಷಿಣ ಕನ್ನಡ | Read More »

ಮಂಗಳೂರು: ನೆಹರೂ ಮೈದಾನದಲ್ಲಿ ಏ.18.04.2012ರಂದು SKSSF ವಿಮೋಚನ ಸಂಗಮ

ಮಂಗಳೂರು:  ಅಧ್ಯಾತ್ಮಿಕ ಶೋಷಣೆಯ ವಿರುದ್ಧ ಜನಜಾಗೃತಿ ಮೂಡಿಸಲು SKSSFನಿಂದ ವಿಮೋಚನ ಸಂಗಮವು ನಾಳೆ ದಿನಾಂಕ 18.04.2012 ಬುಧವಾರ ಸಂಜೆ 4.00ಕ್ಕೆ ಮಂಗಳೂರಿನ ನೆಹರು ಮೈದಾನದಲ್ಲಿ ಮಹಾಸಮ್ಮಳನ ನಡೆಯಲಿದೆಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

April 17th, 2012 | Posted in ದಕ್ಷಿಣ ಕನ್ನಡ | Read More »

ಉಳ್ಳಾಲ ನಗರ ಕಾ೦ಗ್ರೇಸ್ ಅಧ್ಯಕ್ಷರಾಗಿ ಯು.ಎ ಇಸ್ಮಾಯಿಲ್ ಆಯ್ಕೆ

ಉಳ್ಳಾಲ ಪುರಸಭಾ ವ್ಯಾಪ್ತಿಯಲ್ಲಿ ಕಾ೦ಗ್ರೇಸ್ ಪಕ್ಷವನ್ನು ಸ೦ಘಟಿಸಿ ಪಕ್ಷವನ್ನು ಬಲಗೊಳಿಸಲು ಉಳ್ಳಾಲ ಪುರಸಭೆಯ ಮಾಜಿ ಅಧ್ಯಕ್ಷರಾದ ಯು.ಎ ಇಸ್ಮಾಯಿಲ್ ರವರನ್ನು ನಗರ ಕಾ೦ಗ್ರೇಸ್ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ. ಕೇ೦ದ್ರದ ಮಾಜಿ ಸಚಿವರಾದ ಶ್ರೀ ಜನಾರ್ಧನ ಪೂಜಾರಿಯವರ ಸೂಚನೆ ಮೇರೆಗೆ ಶಾಸಕರಾದ ಶ್ರೀ ಯು.ಟಿ ಖಾದರ್ ರವರ ಅನುಮೋದನೆಯೊಂದಿಗೆ ಉಳ್ಳಾಲ ಬ್ಲಾಕ್ ಕಾ೦ಗ್ರೇಸ್ ಅಧ್ಯಕ್ಷರಾದ ಶ್ರೀ ಈಶ್ವರ್ ಉಳ್ಳಾಲ್ ರವರು ಈ ನೇಮಕ ಮಾಡಿದ್ದಾರೆ ಎ೦ದು ಪತ್ರಿಕಾ ಪ್ರಕಟನೆಗೆ ತಿಳಿಸಿದ್ದಾರೆ. ವರದಿ : ಶಿಹಾ, ಉಳ್ಳಾಲ್.

April 17th, 2012 | Posted in ದಕ್ಷಿಣ ಕನ್ನಡ | Read More »

ಇಂದು ಹತ್ತೂರು ನೋಡುತಿದೆ ಪುತ್ತೂರು ಕಡೆಗೆ

ಪುತ್ತೂರಿನ ಲೋಕಪ್ರಸಿದ್ದ ಮಹೋತೊಭಾರ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಉತ್ಸವದ ಬ್ರಹ್ಮ ರಥೋತ್ಸವ ಹಾಗು ಜನ ಮನ ಸೆಳೆಯುವ “ಪುತ್ತೂರು ಬೆಡಿ” ಇಂದು ನಡೆಯಲಿದೆ. ಈ ಸುವರ್ಣ ಕಾರ್ಯಕ್ರಮಕ್ಕೆ ದೇಶ ವಿದೇಶದ ಲಕ್ಷಾಂತರ ಮಂದಿ ಸಾಕ್ಷಿಯಾಗಲಿದ್ದಾರೆ. ಎಪ್ರಿಲ್ 10 ರಂದು ದ್ವಜಾರೋಹಣದ ಮೂಲಕ ಪುತ್ತೂರು ಜಾತ್ರೆ ಆರಂಭಗೊಂಡು ತದ ನಂತರದ ದಿನಗಳಲ್ಲಿ ದೇವರ ಕಟ್ಟೆ ಪೂಜೆ ಹಾಗು ದೇವರ ಸವಾರಿ ನಡೆದಿದೆ. ಇಂದು ಬೆಳಗ್ಗೆ ವಸಂತ ಕಟ್ಟೆ ಪೂಜೆ ನಡೆದು ನಂತರ ದರ್ಶನ ಬಲಿ ಹಾಗು ರಾತ್ರಿ [...]

April 17th, 2012 | Posted in ದಕ್ಷಿಣ ಕನ್ನಡ | Read More »

ನಾಲ್ಕು ದಿನದಲ್ಲಿ ಒಂದೇ ಕುಟುಂಬದ ನಾಲ್ವರು ಮೃತ್ಯು

  ದುಬೈ : ಇಲ್ಲಿಗೆ ಸಮೀಪದ ಅಲ್ ಐನ್ ನಗರದ ಕುಟುಂಬವೊಂದರ  ನಾಲ್ವರು ಸದಸ್ಯರು ನಾಲ್ಕು ದಿನದಲ್ಲಿ ಒಬ್ಬೊಬ್ಬರಾಗಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನಡೆದಿದೆ. ಈ ದುರಂತಮಯ ಸಾವಿನ ಆರಂಭವಾಗಿದ್ದು ಸ್ಪೇನ್ ನಿಂದ . ಅಲ್ ಐನ್ ನಿವಾಸಿ ಆಯಿಷಾ ಸಯೀದ್ ಚಿಕಿತ್ಸೆಗೆಂದು ಸ್ಪೇನ್ ನಗರಕ್ಕೆ ಹೋಗಿದ್ದಾಗ ಅಲ್ಲಿ ಅನಾರೋಗ್ಯದ ಕಾರಣ ಮೃತಪಟ್ಟರು . ಈ ಸುದ್ದಿ ತಿಳಿದ ಈಕೆಯ ಸಹೋದರ ಸೈಫ್ ಸಯೀದ್ ಮುಬಾರಕ್ ಅನಾರೋಗ್ಯಪೀಡಿತರಾದರು. ಆಯಿಷಾ ಸಯೀದ್ ಮೃತದೇಹ ತವರಿಗೆ ಬಂದ ಮಾರನೇ ದಿನವೇ ಅಂದರೆ ಶುಕ್ರವಾರ ಸೈಫ್ ಸಯೀದ್ ಮುಬಾರಕ್ ಸಹ ಇಹಲೋಕ ತ್ಯಜಿಸಿದರು . [...]

April 17th, 2012 | Posted in ಗಲ್ಫ್ ಸುದ್ದಿಗಳು | Read More »

ಮಂಗಳೂರಿನಲ್ಲಿ ವಿ.ಹೆಚ್.ಪಿ , ಭಜರಂಗದಳದ ವತಿಯಿಂದ ಗೋವುಗಳಿಗೆ ಶ್ರದ್ದಾಂಜಲಿ

ಮಂಗಳೂರು : ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳದ ವತಿಯಿಂದ ಮಂಗಳೂರಿನಲ್ಲಿ ಗೋವುಗಳಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು . ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಮೇಯರ್ ಮತ್ತು ಉಪ ಮೇಯರ್ ಅವರಿಗೆ ಮನವಿ ಪತ್ರಗಳನ್ನು ಸಲ್ಲಿಸಿದ ಕಾರ್ಯಕರ್ತರು ಮಂಗಳೂರಿನ ಕುದ್ರೋಳಿಯಲ್ಲಿರುವ ಕಸಾಯಿ ಖಾನೆಯನ್ನು ಬಂದ್ ಮಾಡುವಂತೆ ಒತ್ತಾಯಿಸಿದರು . ಅಕ್ರಮವಾಗಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ವಾಹನ ಅಪಘಾತದಲ್ಲಿ ಮೃತಪಟ್ಟ ಗೋವು ಮತ್ತು ಇತ್ತೀಚೆಗೆ ಬೈಂದೂರಿನಲ್ಲಿ ವಿಷಾಹಾರ ಸೇವಿಸಿ ಮೃತಪಟ್ಟ ಗೋವುಗಳಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು .

April 17th, 2012 | Posted in ದಕ್ಷಿಣ ಕನ್ನಡ | Read More »

ಬಂಟ್ವಾಳ : ಅಂಬೇಡ್ಕರ್ ಭಾವಚಿತ್ರ ಹೊತ್ತೊಯ್ದ ದಲಿತರು

ಬಂಟ್ವಾಳ : ಇಲ್ಲಿನ ತಾಲೂಕಾಡಳಿತ ವತಿಯಿಂದ ಶನಿವಾರ ಬಿ ಸಿ ರೋಡಿನಲ್ಲಿ ನಡೆದ ಡಾ ಬಿ ಆರ್ ಅಂಬೇಡ್ಕರ್ ಜನ್ಮ ದಿನಾಚರಣೆ ಸಂದರ್ಭ ದಲಿತರು ನಡೆಸಿದ ಪ್ರತಿಭಟನೆ ಇದೀಗ ಹಲವು ಕೋನಗಳಿಂದ ವಿಮರ್ಶೆಗೆ ಒಳಗಾಗುತ್ತಿದೆ. ರಾಜ್ಯ ಸರಕಾರ ಭೂ ಮಂಜೂರಾತಿ ಕಾಯ್ದೆಯಡಿ ದಲಿತರಿಗೆ ಭೂ ಮಂಜೂರು ಮಾಡದೆ ವಂಚಿಸುತ್ತಿದೆ ಎಂದು ಆರೋಪಿಸಿ ಕಳೆದ ಕೆಲವು ಸಮಯಗಳಿಂದ ಇಲ್ಲಿನ ತಾಲೂಕಾಡಳಿತದೊಂದಿಗೆ ಜಂಘೀ ಕುಸ್ತಿಗೆ ಇಳಿದಿರುವ ವಿವಿಧ ದಲಿತ ಸಂಘಟನೆಗಳ ಸದಸ್ಯರು ಹಲವು ಸುತ್ತಿನ ಪ್ರತಿಭಟನೆಗಳನ್ನು ನಡೆಸುತ್ತಾ ಬಂದಿದ್ದಾರೆ. ಇದೀಗ [...]

April 17th, 2012 | Posted in ದಕ್ಷಿಣ ಕನ್ನಡ | Read More »

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಗಮನಿಸಿರಿ

ಯಾವುದೇ ರೀತಿಯ ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳಿಗೆ ಇಲ್ಲಿ ಅವಕಾಶವಿಲ್ಲ . ದಯವಿಟ್ಟು ಅಂತಹ ಪ್ರತಿಕ್ರಿಯೆಗಳನ್ನು ಬರೆಯಬೇಡಿ .ನೀವು ಬರೆಯುವ ಕಮೆಂಟುಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ .

ಮಾಹಿತಿ ತಂತ್ರಜ್ಞಾನ ಕಾಯ್ದೆ 66 A ಪ್ರಕಾರ ಅಸಭ್ಯ , ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಕಾಮೆಂಟ್ಸ್ ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ . ಇಂತಹ ಕಾಮೆಂಟುಗಳ ಬಗ್ಗೆ ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಮಾಹಿತಿ ಕೇಳಿದರೆ ಕಾಮೆಂಟ್ ಬರೆದವರ ಇ ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ .

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಪ್ರಕಟವಾದ ಸುದ್ದಿ ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಸಂಪಾದಕರನ್ನು ಸಂಪರ್ಕಿಸಿ .

E Mail : ashrafmanzarabad@gmail.com

ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಕೆ ನ್ಯೂಸ್.

***********************************************************

ದಿನವಹಿ ಸುದ್ದಿಗಳು

Gulf Asian

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************