Home » April 18th, 2012
Entries posted on “April 18th, 2012”
ಸಕಲೇಶಪುರ:-ವೈದ್ಯರ ನಿರ್ಲಕ್ಷದಿಂದಾಗಿ ಮಗುವೊಂದು ಶಾಶ್ವತ ಅಂಗವಿಕಲವಾಗುವ ಹಂತವನ್ನು ತಲುಪಿದೆ ಎಂದು ಆರೋಪಿಸಿ ಪಟ್ಟಣದ ಕುಡುಗರಹಳ್ಳಿ ಬಡಾವಣೆ ನಿವಾಸಿಗಳು ವೈದ್ಯರ ಕೊಠಡಿಯಲ್ಲಿ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು.ಕುಡುಗರ ಹಳ್ಳಿ ಬಡಾವಣೆಯ ಆಟೋಚಾಲಕ ರಾಜು ಹಾಗೂ ತೇಜ ದಂಪತಿಯ ಮಗು ಶ್ರೀನಿಧಿ (೬)ಗೆ ಏ ೮ ರಂದು ಜ್ವರದ ಕಾರಣ ಕ್ರಾಫರ್ಡ್ ಆಸ್ಪತ್ರೆ ಮಕ್ಕಳ ವೈದ್ಯರಿಂದ ಚಿಕಿತ್ಸೆ ಕೊಡಿಸಲಾಗಿತ್ತು ಈ ಸಂದರ್ಭದಲ್ಲಿ ಎರಡು ಚುಚ್ಚುಮದ್ದು ನೀಡಲಾಗಿತ್ತು. ನಂತರ ಮಗು ನಡೆದಾಡಲು ಕಷ್ಟಪಡುತ್ತಿದ್ದು ಕುಳಿತುಕೊಳ್ಳಲು, ನಡೆದಾಡಲು ಪರದಾಡುತ್ತಿದೆ ನಡೆದಾಡಿದರೆ ಕಾಲು [...]
April 18th, 2012 | Posted in ಹಾಸನ | Read More »
ಮುಂಬೈ : ಬಾಲಿವುಡ್ ನಟ ನವಾಬ್ ಸೈಫ್ ಅಲೀ ಖಾನ್ ಮತ್ತು ಕರೀನಾ ಕಪೂರ್ ಜೋಡಿ ಬಿಂದಾಸ್ ಆಗಿ ತಿರುಗುತ್ತಾ ಮಾಧ್ಯಮಗಳ ಗಾಸಿಪ್ ಗಳಿಗೆ ಆಹಾರವಾಗುತ್ತಿದ್ದರೆ ಅತ್ತ ಸೈಫ್ ಅಲೀ ಖಾನ್ ಅವರ ಪುತ್ರಿ ಸಾರಾ ಅಲೀ ಖಾನ್ ಅವರಿಗೆ ಬಾಲಿವುಡ್ ಚಿತ್ರದಲ್ಲಿ ಹಿರೋಯಿನ್ ಆಗಿ ನಟಿಸಲು ಆಹ್ವಾನ ಬಂದಿದೆ. ಸೈಫ್ ಅಲೀ ಖಾನ್ ಅವರ ಮೊದಲ ಪತ್ನಿ ಆಗಿನ ಜನಪ್ರಿಯ ನಾಯಕಿ ಅಮೃತಾ ಸಿಂಗ್ ಅವರ ಪುತ್ರಿಯಾಗಿರುವ ಸಾರಾ ಅಲೀಖಾನ್ ಅವರು ತನ್ನ ತಾಯಿಯ ಜೊತೆ ನಿಂತು ನೀಡಿರುವ ಫೋಸ್ ಒಂದನ್ನು ಪ್ರಮುಖ ಮ್ಯಾಗಜಿನ್ ಒಂದು ಮುಖಪುಟದಲ್ಲಿ ಪ್ರಕಟಿಸಿತ್ತು. ಈ ಫೋಟೋ ಪ್ರಸಾರವಾದ ನಂತರ ಸಾರಾ ಅಲೀ ಖಾನ್ ಅವರಿಗೆ ಬಾಲಿವುಡ್ ನಿಂದ ಆಹ್ವಾನಗಳು ಬರತೊಡಗಿದೆ. ಈ ವಿಷಯವನ್ನು ಈಕೆಯ ತಾಯಿ ಅಮೃತಾ ಸಿಂಗ್ ಧೃಡೀಕರಿಸಿದ್ದು ಪ್ರಮುಖ ಐದು ನಿರ್ಮಾಪಕರು ಚಿತ್ರದಲ್ಲಿ [...]
April 18th, 2012 | Posted in ಚಿತ್ರ ಜಗತ್ತು | Read More »
ಮಂಗಳೂರು : ಇಂದು ಸಂಜೆಯ ನಂತರ ಮಂಗಳೂರಿನ ಜನತೆಗೆ ಭಾರೀ ಮಳೆಯ ಅನುಭವವಾಯಿತು . ಇದಕ್ಕಿದ್ದಂತೆ ಮಳೆ ಸುರಿದ ಕಾರಣ ಜನರು ಮಳೆಯಲ್ಲಿ ನೆನೆಯಬೇಕಾಯಿತು . ಕೆಲವರು ತಮ್ಮಲ್ಲಿದ್ದ ಛತ್ರಿಗಳನ್ನು ಬಳಸಿ ಮಳೆಯಿಂದ ರಕ್ಷಣೆ ಪಡೆದರೆ ಇನ್ನು ಕೆಲವರು ಆಟೋಗಳಿಗೆ ಮೊರೆ ಹೋದರು . ಭಾರೀ ಮಳೆಯಿಂದ ವ್ಯಾಪಾರ ವಹಿವಾಟುಗಳಿಗೆ ಸ್ವಲ್ಪ ಮಟ್ಟಿಗಿನ ತೊಂದರೆಯಾದರೆ ಆಟೋಗಳು ಬ್ಯುಸಿಯಾಗಿದ್ದವು . ಮಂಗಳೂರು ನಗರ ಸೇರಿದಂತೆ ತೊಕ್ಕೊಟ್ಟು , ಉಳ್ಳಾಲ ಹಾಗೂ ವಿವಿಧ ಕಡೆ ಸಿಡಿಲು ಸಹಿತ ಭಾರೀ ಮಳೆಯಾದ ಬಗ್ಗೆ ವರದಿ ಬಂದಿದೆ.
April 18th, 2012 | Posted in ದಕ್ಷಿಣ ಕನ್ನಡ | Read More »
ಮುಂಬೈ : ಭಾರತದಲ್ಲಿ ದೇಹ ಮಾರುವ ಅಂದರೆ ವೇಶ್ಯಾವೃತ್ತಿಯಲ್ಲಿರುವ ಮಹಿಳೆಗೆ ಆಕೆಯ ಸಂಪಾದನೆಯಲ್ಲಿ ಕೇವಲ ಕಾಲು ಭಾಗ ಮಾತ್ರ ದೊರೆಯುತ್ತಿದ್ದು ಉಳಿದ ಹಣ ಇತರ ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ವೇಶ್ಯೆಯರ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಿದ ಭಾರತೀಯ ಪತಿತ ಉದ್ಧಾರ ಸಭಾ ಎಂಬ ಎನ್.ಜಿ.ಓ ಸಂಘಟನೆಯ ವರದಿ ತಿಳಿಸಿದೆ. ಭಾರತದಲ್ಲಿ ಅಂದಾಜು ಒಟ್ಟು ಸಾವಿರದ ನೂರಕ್ಕೂ ಹೆಚ್ಚು ಕೆಂಪು ದೀಪ ಪ್ರದೇಶಗಳಿದ್ದು ಇಲ್ಲಿ ಒಂದು ಕಾಲು ಲಕ್ಷ ವೇಶ್ಯೆಯರಿದ್ದಾರೆ . ಇವರಲ್ಲಿ ಹೆಚ್ಚಿನ ಜನ ಬಡತನ ಹಾಗೂ ಇತರೆ ಕಾರಣಗಳಿಂದ ಈ ವೃತ್ತಿಗೆ ಬಂದಿದ್ದರೆ ಇನ್ನು ಕೆಲವರನ್ನು ಬಲವಂತವಾಗಿ ಈ ಜಾಲಕ್ಕೆ ತಳ್ಳಲಾಗಿದೆ ಎಂದೂ ವರದಿ ಹೇಳಿದೆ. ಮಧ್ಯವರ್ತಿಗಳ ಹಣದಾಹದಿಂದ ಈ ಮಹಿಳೆಯರಿಗೆ ಸಿಗುವ ಸಂಪಾದನೆಯ ಮೊತ್ತ ಅಲ್ಪವಾದ ಕಾರಣ ಇವರ ಆರ್ಥಿಕ ಸಮಸ್ಯೆ ಪರಿಹಾರವಾಗುವುದಿಲ್ಲ. ಈ ಕಾರಣಕ್ಕಾಗಿ ಇವರು [...]
April 18th, 2012 | Posted in ರಾಷ್ಟ್ರೀಯ ಸುದ್ದಿಗಳು | Read More »
ಮಂಗಳೂರು : ಇಂದು ಬೆಳಿಗ್ಗೆ ನಡೆದ ಬೈಕ್ ಮತ್ತು ಪಿಕ್ ಅಪ್ ನಡುವಿನ ಡಿಕ್ಕಿಯಲ್ಲಿ ಮಂಗಳೂರು ಸಮೀಪದ ಜೋಕಟ್ಟೆ ನಿವಾಸಿಗಳಾದ ದಂಪತಿಗಳು ಮೃತಪಟ್ಟ ಘಟನೆ ನಡೆದಿದೆ. ಮೃತಪಟ್ಟವರು ಸಿರಾಜ್ ಹಾಗೂ ಅವರ ಪತ್ನಿ ಖತೀಜಮ್ಮ ಎಂಬುವವರಾಗಿದ್ದಾರೆ . ಇವರು ಬೈಕಿನಲ್ಲಿ ಜೋಕಟ್ಟೆಯಿಂದ ಸುರತ್ಕಲ್ ಕಡೆಗೆ ತೆರಳುತ್ತಿದ್ದರು . ಅಪಘಾತದ ತೀವ್ರತೆಗೆ ಸಿರಾಜ್ ಸ್ಥಳದಲ್ಲೇ ಮೃತಪಟ್ಟರೆ ಅವರ ಪತ್ನಿ ಖತೀಜಮ್ಮ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು . ಪಿಕ್ ಅಪ್ ಚಾಲಕ ಪರಾರಿಯಾಗಿದ್ದು ಪಣಂಬೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ .
April 18th, 2012 | Posted in ದಕ್ಷಿಣ ಕನ್ನಡ | Read More »
ಮಂಗಳೂರು : ನಕ್ಸಲರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದಾನೆ ಎಂಬ ಆರೋಪದಡಿ ಕಳೆದ ಮಾರ್ಚ್ 3ರಂದು ಬಂಧಿತನಾಗಿರುವ ಪತ್ರಿಕೋದ್ಯಮ ವಿದ್ಯಾರ್ಥಿ ಬೆಳ್ತಂಗಡಿ ತಾಲ್ಲೂಕು ಕುತ್ಲೂರಿನ ವಿಠಲ ಮಲೆಕುಡಿಯನಿಗೆ ಪರೀಕ್ಷೆ ಬರೆಯಲು ನ್ಯಾಯಾಲಯ ಅವಕಾಶ ನೀಡಿದ್ದು, ಮಂಗಳವಾರ ಬೆಳಿಗ್ಗೆ 9.15ರ ಸುಮಾರಿಗೆ ಪೊಲೀಸ್ ಬೆಂಗಾವಲಿನೊಂದಿಗೆ ಕೊಣಾಜೆಯ ಮಂಗಳೂರು ವಿ.ವಿ.ಗೆ ಬಂದು ಪರೀಕ್ಷೆ ಬರೆದಿದ್ದಾನೆ. ವಿಠಲನನ್ನು ಕಂಡ ಸಹಪಾಠಿಗಳು ಪ್ರೀತಿಯಿಂದ ಸ್ವಾಗತಿಸಿ ಪರೀಕ್ಷೆಯ ಪೂರಕ ಮಾಹಿತಿಗಳನ್ನು ಹಾಗೂ ನೋಟ್ಸ್‌ಗಳನ್ನು ನೀಡಿ ಸಹಕರಿಸಿದರು. ಎಡಗೈಯ್ಯಲ್ಲಿ ಕೋಳ ಇದ್ದರೂ ಪರೀಕ್ಷೆಗೆ ತಯಾರಿ ನಡೆಸಿ ಆತ್ಮ ವಿಶ್ವಾಸದಿಂದಲೇ [...]
April 18th, 2012 | Posted in ದಕ್ಷಿಣ ಕನ್ನಡ | Read More »
ದೆಹಲಿ: ಭಾರತೀಯರಿಸರ್ವ್ಬ್ಯಾಂಕ್ (ಆರ್‌ಬಿಐ), ಮೂರುವರ್ಷಗಳಲ್ಲಿಇದೇಮೊದಲಬಾರಿಗೆಅಲ್ಪಾವಧಿಬಡ್ಡಿದರವನ್ನು (ರೆಪೊ) ಶೇ 0.50ರಷ್ಟುತಗ್ಗಿಸಿಅಚ್ಚರಿಮೂಡಿಸಿದ್ದು, ಇದರಿಂದಾಗಿಬ್ಯಾಂಕ್ಬಡ್ಡಿದರಗಳಹೊರೆಕಡಿಮೆಯಾಗಿಕುಂಟುತ್ತಸಾಗಿರುವಆರ್ಥಿಕಬೆಳವಣಿಗೆಗೆಚೇತರಿಕೆಯೂದೊರೆಯಲಿದೆ. ವಾಣಿಜ್ಯಬ್ಯಾಂಕ್‌ಗಳಿಗೆ `ಆರ್‌ಬಿಐ` ನೀಡುವಅಲ್ಪಾವಧಿಸಾಲಗಳಮೇಲೆವಿಧಿಸುವಬಡ್ಡಿದರ (ರೆಪೊದರ) ಶೇ 8.50ರಿಂದಶೇ 8ಕ್ಕೆಇಳಿದಿರುವುದರಿಂದಗೃಹಸಾಲಕ್ಕೆಸಂಬಂಧಿಸಿದಬದಲಾಗುವಬಡ್ಡಿದರಗಳುಅಗ್ಗವಾಗಲಿವೆ. ಜತೆಗೆಮಾಸಿಕಸಮಾನಕಂತುಗಳು (ಇಎಂಐ) ಕೂಡಕಡಿಮೆಆಗಲಿವೆ. ಗೃಹ, ವಾಹನ, ವೈಯಕ್ತಿಕಮತ್ತುಕಾರ್ಪೊರೇಟ್ಸಾಲಗಳುಗಮನಾರ್ಹವಾಗಿಕಡಿಮೆಯಾಗುವನಿರೀಕ್ಷೆಇದೆ. ಆದರೆ, ಠೇವಣಿದಾರರಪಾಲಿಗೆಮಾತ್ರಇದೊಂದುಕಹಿಸುದ್ದಿ. ಬ್ಯಾಂಕ್‌ಗಳುಸ್ಥಿರಠೇವಣಿಗಳಮೇಲಿನಬಡ್ಡಿದರಗಳನ್ನೂಇಳಿಸುವಸಾಧ್ಯತೆಇದೆ. ದಂಡಬೇಡ: ಬದಲಾಗುವಬಡ್ಡಿದರವ್ಯವಸ್ಥೆಯಲ್ಲಿತೆಗೆದುಕೊಂಡಗೃಹನಿರ್ಮಾಣಸಾಲದಪೂರ್ವಪಾವತಿಯಮೇಲೆಯಾವುದೇದಂಡವಿಧಿಸಬಾರದು. ಉಳಿತಾಯಖಾತೆಗಳಲ್ಲಿಕನಿಷ್ಠಮೊತ್ತಇರಬೇಕೆಂದುಗ್ರಾಹಕರಿಗೆಒತ್ತಾಯಿಸಬಾರದುಎಂದೂ `ಆರ್‌ಬಿಐ` ಎಲ್ಲಬ್ಯಾಂಕುಗಳಿಗೆಸೂಚನೆನೀಡಿದೆ. ಭಾರತೀಯಸ್ಟೇಟ್ಬ್ಯಾಂಕ್ (ಎಸ್‌ಬಿಐ) ಮತ್ತುಐಸಿಐಸಿಐಬ್ಯಾಂಕ್ಬಡ್ಡಿದರಇಳಿಸುವಬಗ್ಗೆತಕ್ಷಣಇಂಗಿತವ್ಯಕ್ತಪಡಿಸಿದ್ದು, ಇತರಬ್ಯಾಂಕ್‌ಗಳೂಈನೀತಿಅನುಸರಿಸುವಸಾಧ್ಯತೆಗಳಿವೆ. ಬೆಲೆಹೆಚ್ಚಳಕ್ಕೆಸಲಹೆ: ವಿತ್ತೀಯಕೊರತೆತಗ್ಗಿಸಲುಪೆಟ್ರೋಲಿಯಂಉತ್ಪನ್ನಗಳಬೆಲೆಹೆಚ್ಚಿಸುವುದುಅನಿವಾರ್ಯ. ತೈಲಸಬ್ಸಿಡಿಗಾಗಿಗರಿಷ್ಠಮೊತ್ತದಹಣವ್ಯಯಿಸಲಾಗುತ್ತಿದೆ. ಇದರಿಂದಸರ್ಕಾರಡೀಸೆಲ್, ಸೀಮೆಎಣ್ಣೆಮತ್ತುಅಡುಗೆಅನಿಲದಬೆಲೆಹೆಚ್ಚಿಸಲುಮುಂದಾಗಬೇಕುಎಂದು `ಆರ್‌ಬಿಐ` ಸಲಹೆಮಾಡಿದೆ. ವಾರ್ಷಿಕಉದರಿನೀತಿ: `ಆರ್‌ಬಿಐ` ಗವರ್ನರ್ಡಿ. ಸುಬ್ಬರಾವ್ಅವರುಮಂಗಳವಾರಇಲ್ಲಿಪ್ರಕಟಿಸಿದ 2012-13ನೇಹಣಕಾಸುವರ್ಷದವಾರ್ಷಿಕಸಾಲನೀತಿಯಲ್ಲಿ, ಶೇ 4.75ರಷ್ಟಿದ್ದನಗದುಮೀಸಲುಅನುಪಾತದಲ್ಲಿ (ಸಿಆರ್‌ಆರ್) ಯಥಾಸ್ಥಿತಿಕಾಯ್ದುಕೊಂಡಿದ್ದಾರೆ. ಬ್ಯಾಂಕ್ದರಶೇ 9.5ರಿಂದಶೇ 9ಕ್ಕೆಇಳಿಕೆಯಾಗಲಿದೆ. ದೇಶದಆರ್ಥಿಕವೃದ್ಧಿದರವು 2012-13ನೇಸಾಲಿನಹಣಕಾಸುವರ್ಷದಲ್ಲಿಶೇ 7.3ರಷ್ಟುಇರಲಿದೆಎಂದುಅಂದಾಜಿಸಿದ್ದಾರೆ.
April 18th, 2012 | Posted in ರಾಷ್ಟ್ರೀಯ ಸುದ್ದಿಗಳು | Read More »
ದುಬೈ: ಸಯ್ಯಿದ್ ಅಲವಿ ಜಲಾಲುದ್ದೀನ್ ಮದನಿ ಅಲ್ ಹಾದಿ ಉಜಿರೆ ತಂಙಳ್ ರವರ ಸಾರಥ್ಯದ ಬಡ ವರ್ಗದ ಅಭಯ ಕೇಂದ್ರ ಮಲ್ಜಹ್ ಸಂಸ್ಥೆಯ ದುಬೈ ಸಮಿತಿ ವತಿಯಿಂದ ನಡೆಯುತ್ತಿರುವ ಮಾಸಿಕ ದಿಕ್ರ್, ಸ್ವಲಾತ್ ಮಜ್ಲಿಸ್ ನಾಳೆ(ಗುರುವಾರ ಅಸ್ತಮಿಸಿದ ಶುಕ್ರವಾರ)ರಾತ್ರಿ 9:00 ಕ್ಕೆ ದುಬೈ ಮಲ್ಜಹ್ ಸೆಂಟರಿನಲ್ಲಿ ಸಂಸ್ಥೆಯ ದುಬೈ ಸಮಿತಿ ಗೌರವಾಧ್ಯಕ್ಷ ಅಬ್ದುಸ್ಸತ್ತಾರ್ ಸಖಾಫಿ ಅಲ್ ಕಾಮಿಲ್ ಅಡ್ಯಾರ್ ಪದವುರವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಎಸ್.ಎಸ್.ಎಫ್ ಬಂಟ್ವಾಳ ಘಟಕದ ಅಧ್ಯಕ್ಷ ಎನ್ಮೂರು ಅಬೂಬಕರ್ ಲತೀಫಿ ಮುಖ್ಯ ಭಾಷಣ ಮಾಡಲಿದ್ದಾರೆ. [...]
April 18th, 2012 | Posted in ಗಲ್ಫ್ ಸುದ್ದಿಗಳು | Read More »
ದುಬೈ : ಒಂದು ಕಿಲೋ ಮೀಟರ್ ಉದ್ದದ ವಿಶ್ವದ ಅತ್ಯಂತ ಎತ್ತರದ ಗೋಪುರ ಸುಮಾರು 6,330 ಕೋಟಿ ರೂಪಾಯಿ ವೆಚ್ಚದಲ್ಲಿ ಸೌದಿ ಅರೇಬಿಯಾದ ಜೆದ್ದಾ ನಗರದಲ್ಲಿ ನಿರ್ಮಾಣವಾಗಲಿದೆ ಎಂದು ಕಿಂಗ್‌ಡಂ ಹೋಲ್ಡಿಂಗ್ ಕಂಪೆನಿ ಅಧ್ಯಕ್ಷ ಅಬ್ದುಲ್ ಅಜೀಜ್ ಅಲ್ಸೌದ್ ಅವರು ಪ್ರಕಟಿಸಿದರು. 63 ತಿಂಗಳಲ್ಲಿ ಕಟ್ಟಡ ಪೂರ್ಣಗೊಳಿಸಲು ಉದ್ದೇಶಿಸಲಾಗಿದ್ದು, ಸೌದಿ ಅರೇಬಿಯಾ ಮೂಲದ ಕಿಂಗ್‌ಡಂ ಹೋಲ್ಡಿಂಗ್ ಕಂಪೆನಿ ನಿರ್ಮಿಸುತ್ತಿರುವ ವಿಶ್ವದ ಎತ್ತರದ ಮೊದಲ ಗೋಪುರ ಇದಾಗಿದೆ. ಕಟ್ಟಡ ನಿರ್ಮಾಣಕ್ಕಾಗಿ ಜೆದ್ದಾ ನಗರಸಭೆಯಿಂದ ಫೆಬ್ರುವರಿಯಲ್ಲಿಯೇ ಪರವಾನಗಿಯನ್ನು ಪಡೆಯಲಾಗಿದೆ ಎಂದು ಅವರು ತಿಳಿಸಿದರು. ಈಗ [...]
April 18th, 2012 | Posted in ಗಲ್ಫ್ ಸುದ್ದಿಗಳು | Read More »
ಮುಂಬೈ : ಕರ್ನಾಟಕದ ಬರ ಪೀಡಿತ ಜಿಲ್ಲೆಗಳಿಗೆ ನೀರು ಬಿಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರಕ್ಕೆ ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಗರಂ ಆಗಿದ್ದಾರೆ. ಕರ್ನಾಟಕಕ್ಕೆ ನೀರು ಬಿಡುವ ಮೂಲಕ ಮಹಾರಾಷ್ಟ್ರ ಸರ್ಕಾರ ಮರಾಠಿಗರ ಬೆನ್ನಿಗೆ ಚೂರಿ ಹಾಕಿದೆ ಎಂದು ಅವರು ಸಾಮ್ನಾದ ಸಂಪಾದಕೀಯದಲ್ಲಿ ಹರಿಹಾಯ್ದಿದ್ದಾರೆ. ಮರಾಠಿಗರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವ ಕನ್ನಡಿಗರಿಗೆ ಒಂದು ಹನಿ ನೀರನ್ನೂ ಕೊಡಬಾರದು. ಅವರಿಗೆ ನೀರು ಕೊಡುವುದು ಹಾವಿಗೆ ಹಾಲೆರೆದಂತೆ ಎಂದು ಕಿಡಿ ಕಾರಿದ್ದಾರೆ. ದೂಧ್‌ಗಂಗಾ ಮತ್ತು ವರ್ನಾ ನದಿಗಳಿಂದ ಕರ್ನಾಟಕದ ಬರ ಪೀಡಿತ [...]
April 18th, 2012 | Posted in ರಾಜ್ಯ ಸುದ್ದಿಗಳು,ರಾಷ್ಟ್ರೀಯ ಸುದ್ದಿಗಳು | Read More »