ಬಂಟ್ವಾಳ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಂಶೋಧನೆ : ರಿಮೋಟ್ ಕಂಟ್ರೋಲ್ ಏರ್ ಬೋಟ್

ಬಂಟ್ವಾಳ : ದೇಶವನ್ನು ಮುಂದಿನ ದಿನಗಳಲ್ಲಿ ಅಭಿವೃದ್ದಿ ಪಥಕ್ಕೆ ಕೊಂಡೊಯ್ಯುವ ನಿರೀಕ್ಷೆ ಹುಟ್ಟಿಸಿದ ಒಂದು ಸಂಶೋಧನೆಯನ್ನು ಬಂಟ್ವಾಳ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ನಡೆಸಿದ್ದಾರೆ. ಅದುವೇ ರಿಮೋಟ್ ಕಂಟ್ರೋಲ್ ಏರ್ ಬೋಟ್.

ಉಪನ್ಯಾಸಕರ ಮಾರ್ಗದರ್ಶನದೊಂದಿಗೆ ಇಲ್ಲಿನ ಪಾಲಿಟೆಕ್ನಿಕ್ ವಿದ್ಯಾರ್ಥಿಗಳು ತಯಾರಿಸಿರುವ ಈ ಬೋಟ್ ನೀರಿನಲ್ಲಿ ಚಲಿಸುವಂತೆ ನಿರ್ಮಾಣಗೊಂಡಿದ್ದು, 60% ಮೆಥನಾಲ್ ಆಯಿಲ್, 40% ಗಾಳಿ ಇಂಧನವಾಗಿ ಬಳಕೆಯಾಗುವ ಈ ಬೋಟ್ 18,000 ಆರ್‌ಪಿಎಂ ವೇಗದೊಂದಿಗೆ 10 ಸಿಸಿ ಇಂಜಿನ್ ಹೊಂದಿದೆ. ಇದರ ಇಂಜಿನ್‌ನ್ನು ವಿದೇಶದಿಂದ ಆಮದು ಮಾಡಲಾಗಿದ್ದು, ಕೇವಲ 600 ಗ್ರಾಂ ತೂಕವನ್ನು ಹೊಂದಿದೆ. ಗ್ಲೋಪ್ಲಗ್ ಬಳಸಿ ತಯಾರಿಸಿರುವುದರಿಂದ ಇದು ಸ್ಟಾರ್ಟಿಂಗ್ ಸಮಸ್ಯೆಯಿಲ್ಲದೆ ಕಾರ್ಯ ನಿರ್ವಹಿಸುತ್ತದೆ.

ಪಾಲಿಟೆಕ್ನಿಕ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳ ಕೈಚಳಕದಿಂದ ನಿರ್ಮಾಣವಾಗಿರುವ ಈ ಬೋಟ್ ಮರಿನ್ ಫ್ಲೈವುಡ್‌ನಿಂದ ನಿರ್ಮಿತವಾಗಿದೆ. ಈ ಬೋಟ್ ನಿರ್ಮಾಣದ ಖರ್ಚು ಸುಮಾರು ನಲ್ವತ್ತು ಸಾವಿರ ರೂಪಾಯಿಗಳು ಎಂದು ಬೋಟ್ ನಿರ್ಮಿಸಿದ ವಿದ್ಯಾರ್ಥಿ ತಂಡ ಅಂದಾಜಿಸಿದೆ.

ಈ ಬೊಟ್‌ನಲ್ಲಿ ಶತ್ರು ಸಂಹಾರದ ಆಯುಧಗಳನ್ನು ಹೊತ್ತೊಯ್ಯುವ ಸಾಮರ್ಥ್ಯವಿದ್ದು, ಕ್ಯಾಮರಾವನ್ನೂ ಅಳವಡಿಸಲು ಅವಕಾಶವಿರುವುದರಿಂದ ಇದನ್ನು ಮುಂದಿನ ದಿನಗಳಲ್ಲಿ ಯುದ್ದ ನೌಕೆಯಾಗಿಯೂ ಬಳಸಬಹುದಾಗಿದೆ ಎಂದು ನಿರ್ಮಾಣ ವಿದ್ಯಾರ್ಥಿ ತಂಡ ಅಭಿಪ್ರಾಯಪಟ್ಟಿದೆ. ಈ ಬೋಟಿನ ಇನ್ನೊಂದು ವಿಶೇಷತೆಯೆಂದರೆ ಇದು ಸುಮಾರು ಐದು ಕಿಲೋ ಮೀಟರ್ ದೂರಕ್ಕೆ ಮಾನವ ರಹಿತವಾಗಿ ಆಯುಧಗಳನ್ನು ರಿಮೋಟ್ ಕಂಟ್ರೋಲ್ ಮೂಲಕ ಬಳಸಬಹುದಾದ ಸಾಮರ್ಥ್ಯವನ್ನೂ ಹೊಂದಿದೆ.

ಕಾಲೇಜು ಪ್ರಾಂಶುಪಾಲ ಡಾ. ಎಚ್.ಸಿ. ಚಿನ್ನಗಿರಿ ಗೌಡ ನಿರ್ದೇಶನದಲ್ಲಿ ಉಪನ್ಯಾಸಕರಾದ ವೆಂಕಟೇಶ್ ಹಾಗೂ ಬಿ.ಪಿ. ಗಿರೀಶ್ ಬಾಬು ಅವರ ಮಾರ್ಗದರ್ಶನದಲ್ಲಿ ಪುಷ್ಪರಾಜ್ ಅವರ ಗ್ರಾಫಿಕ್ ಮತ್ತು ಮಾಡೆಲ್ ವಿನ್ಯಾಸದಲ್ಲಿ ವಿದ್ಯಾರ್ಥಿಗಳಾದ ಸುಮಂತ್ ಶೆಟ್ಟಿ, ಪ್ರಸನ್ನ ಕುಮಾರ್, ಮಹೇಶ್ ಕುಮಾರ್, ಯತೀನ್ ರಾಜ್, ಸುಧೀರ್ ನಾಯಕ್, ಲೋಹಿತಾಶ್ವ, ಹೇಮಂತ್, ಸುನಿಲ್ ಕುಮಾರ್, ಮೆಲ್ವಿನ್ ಡಿ’ಕುನ್ಹಾ, ಉದಯ, ಮುಹಮ್ಮದ್ ಅಶ್ರಫ್, ಮುಹಮ್ಮದ್ ಅಕೀಬ್, ರಜತ್ ಕುಮಾರ್, ಇಬ್ರಾಹಿಂ, ಅಲ್ ಫಹದ್, ಪ್ರಭಾತ್ ಗೌಡ, ರವೀಂದ್ರ ಇವರನ್ನೊಳಗೊಂಡ ತಂಡ ಬೋಟ್ ನಿರ್ಮಾಣದಲ್ಲಿ ಸಹಕರಿಸಿದೆ.

ವಿದ್ಯಾರ್ಥಿಗಳ ಈ ಸಾಧನೆಯಿಂದಾಗಿ ಬಂಟ್ವಾಳ ಸರಕಾರಿ ಪಾಲಿಟೆಕ್ನಿಕ್ ಭವಿಷ್ಯದಲ್ಲಿ ಮಹತ್ವದ ನಿರೀಕ್ಷೆಯನ್ನು ಹುಟ್ಟಿಸಿದ್ದು, ಇನ್ನಷ್ಟು ಸಂಶೋಧನೆಗಳಿಗೆ ವಿದ್ಯಾರ್ಥಿ ತಂಡ ಸಜ್ಜಾಗಿದೆ ಎಂದು ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ತಿಳಿಸಿದ್ದಾರೆ.

- ಪಿ.ಎಂ.ಎ. ಪಾಣೆಮಂಗಳೂರು. (ವರದಿಗಾರರು, ವಿಕೆ ನ್ಯೂಸ್)

————– ವಿಶ್ವ ಕನ್ನಡಿಗ ನ್ಯೂಸ್ ಈಗ www.vknews.in ನಲ್ಲೂ ಲಭ್ಯ ————–

Posted by on Apr 27 2012. Filed under ದಕ್ಷಿಣ ಕನ್ನಡ. You can follow any responses to this entry through the RSS 2.0. Both comments and pings are currently closed.

Comments are closed

ಇತ್ತೀಚಿನ ಹೆಡ್ ಲೈನ್ಸ್

ಬೆಂಗಳೂರು ಲೈವ್ ನ್ಯೂಸ್

ಬೆಂಗಳೂರು ಲೈವ್ ನ್ಯೂಸ್

=================

ಗಮನಿಸಿರಿ

ಯಾವುದೇ ರೀತಿಯ ವೈಯುಕ್ತಿಕ ಹಾಗೂ ಧಾರ್ಮಿಕ ನಿಂದನಾತ್ಮಕ ಮತ್ತು ಹಿಯಾಳಿಕೆಯ ಪ್ರತಿಕ್ರಿಯೆಗಳಿಗೆ ಇಲ್ಲಿ ಅವಕಾಶವಿಲ್ಲ . ದಯವಿಟ್ಟು ಅಂತಹ ಪ್ರತಿಕ್ರಿಯೆಗಳನ್ನು ಬರೆಯಬೇಡಿ .ನೀವು ಬರೆಯುವ ಕಮೆಂಟುಗಳಿಗೆ ನೀವೇ ಜವಾಬ್ಧಾರರಾಗಿದ್ದು ವಿಶ್ವ ಕನ್ನಡಿಗ ನ್ಯೂಸ್ ಜವಾಬ್ಧಾರರಾಗಿರುವುದಿಲ್ಲ .

ಮಾಹಿತಿ ತಂತ್ರಜ್ಞಾನ ಕಾಯ್ದೆ 66 A ಪ್ರಕಾರ ಅಸಭ್ಯ , ನಿಂದನಾತ್ಮಕ ಮತ್ತು ಪ್ರಚೋದನಾಕಾರಿ ಕಾಮೆಂಟ್ಸ್ ಬರೆಯುವುದು ಶಿಕ್ಷಾರ್ಹ ಅಪರಾಧವಾಗಿದ್ದು ನೀವು ಬರೆಯುವ ಪ್ರತಿಕ್ರಿಯೆಗಳಿಗೆ ನೀವೇ ಸಂಪೂರ್ಣ ಜವಾಬ್ಧಾರರಾಗಿರುತ್ತೀರಿ . ಇಂತಹ ಕಾಮೆಂಟುಗಳ ಬಗ್ಗೆ ಸರ್ಕಾರ ಅಥವಾ ಸಂಬಂಧ ಪಟ್ಟ ಇಲಾಖೆ ಮಾಹಿತಿ ಕೇಳಿದರೆ ಕಾಮೆಂಟ್ ಬರೆದವರ ಇ ಮೇಲ್ ಅಡ್ರೆಸ್ ಮತ್ತು ಅವರ ಐಪಿ ಅಡ್ರೆಸ್ ಕೊಡಲು ವಿಶ್ವ ಕನ್ನಡಿಗ ನ್ಯೂಸ್ ಬದ್ಧವಾಗಿರುತ್ತದೆ .

ಯಾವುದೇ ಕಾಮೆಂಟ್ ಅನ್ನು ಪ್ರಕಟಿಸುವ ಇಲ್ಲವೇ ಪ್ರಕಟಿಸದಿರುವ ಅಥವಾ ಅದರಲ್ಲಿರುವ ಕೆಲ ಆಕ್ಷೇಪಾರ್ಹ ಪದಗಳನ್ನು ತೆಗೆದು ಹಾಕುವ ಸಂಪೂರ್ಣ ಅಧಿಕಾರ ಸಂಪಾದಕೀಯ ಮಂಡಳಿಗಿದೆ. ವಿಶ್ವ ಕನ್ನಡಿಗ ನ್ಯೂಸಿನಲ್ಲಿ ಪ್ರಕಟವಾದ ಸುದ್ದಿ ಅಥವಾ ಪ್ರತಿಕ್ರಿಯೆಗಳ ಬಗ್ಗೆ ತಮ್ಮ ಆಕ್ಷೇಪಣೆಗಳಿದ್ದಲ್ಲಿ ಪ್ರಧಾನ ಸಂಪಾದಕರನ್ನು ಸಂಪರ್ಕಿಸಿ .

E Mail : ashrafmanzarabad@gmail.com

ಅಶ್ರಫ್ ಮಂಜ್ರಾಬಾದ್
ಪ್ರಧಾನ ಸಂಪಾದಕರು
ವಿಕೆ ನ್ಯೂಸ್.

***********************************************************

ಶುಭಹಾರೈಕೆ….

ಶುಭಹಾರೈಕೆ….

ವಿಶ್ವಕನ್ನಡಿಗ ನ್ಯೂಸ್ ಪ್ರಧಾನ ವರದಿಗಾರರಾದ ನಿತಿನ್ ರೈ ಕುಕ್ಕುವಳ್ಳಿ ಅವರ ದ್ವಿತೀಯ ವಿವಾಹ ವಾರ್ಷಿಕಕ್ಕೆ ಶುಭ ಹಾರೈಸುವ .....

ಸಂಪಾದಕೀಯ ಮಂಡಳಿ,
ವಿಶ್ವಕನ್ನಡಿಗ ನ್ಯೂಸ್.

***********************************************************

ದಿನವಹಿ ಸುದ್ದಿಗಳು

Gulf Asian

Recently Commented

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

ವಿಶ್ವಕನ್ನಡಿಗ ನ್ಯೂಸ್ ಉದ್ಯೋಗ ತಾಣ…

***********************************************************