ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಸ್ವಾಮೀಜಿಗೆ ಗುರುವಂದನಾ ಕಾರ್ಯಕ್ರಮ
ತುಮಕೂರು: ಇಂದು ಸಿದ್ಧಗಂಗಾ ಮಠದ ಡಾ. ಶ್ರೀ. ಶಿವ ಕುಮಾರ ಸ್ವಾಮೀಜಿಯವರಿಗೆ ೧೦೫ ವರ್ಷ ತುಂಬಿದ ಹಿನ್ನಲೆಯಲ್ಲಿ ಶ್ರೀಗಳಿಗೆ ಗುರುವಂದನಾ ಕಾರ್ಯಕ್ರಮವು ಭಾರಿ ಜನಸ್ತೋಮದ ನಡುವೆ ಜರುಗುತ್ತಿದೆ. ಈ ಕಾರ್ಯಕ್ರಮಕ್ಕೆ ಯುಪಿಎ ಅಧ್ಯಕ್ಷೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆಗಮಿಸಿದ್ದರು, ಅವರು ಗುರುವಂದನಾ ಕಾರ್ಯಕ್ರಮವನ್ನು ಉದ್ದೇಶಿಸಿ ಆರಂಭದಲ್ಲಿ ಕನ್ನಡದಲ್ಲಿ ”ಎಲ್ಲರಿಗೂ ನಮಸ್ಕಾರ” ಅಂತ ಹೇಳಿ ಮಾತನಾಡಿದ ಸೋನಿಯಾ ಶ್ರೀಗಳ ಬಡವರ ಶಿಕ್ಷಣದ ಕಾಳಜಿ ಬಗ್ಗೆ ಮೆಚ್ಚುಗೆ ವ್ಯೆಕ್ತಪಡಿಸಿದರು. ಶ್ರೀಗಳ ಮಹತ್ವಪೂರ್ಣ ಹೆಜ್ಜೆಯ ಗುರುತನ್ನು ಅಳಿಸಲು ಸಾದ್ಯವಿಲ್ಲ ನೈತಿಕತೆಯನ್ನು ಭೋಧಿಸುವ ಶಿಕ್ಷಣದ ಅಗತ್ಯವಿದೆ ಮಠದ ಶಿಕ್ಷಣದ ಕೊಡುಗೆಗೆ ಪ್ರಶಂಸೆ ನುಡಿ, ಶ್ರಿಗಳದ್ದು ನಿಸ್ವಾರ್ಥ ಸೇವೆಯಾ ಗುಣಗಾನ ಶ್ರೀಗಳಿಗೆ ಎಲ್ಲಾ ಕಡೆ ತುಂಬಾ ಗೌರವವಿದೆ. ನಂತರ ಡಾ. ಶ್ರೀ.ಶಿವ ಕುಮಾರ ಸ್ವಾಮೀಜಿಯವರು ಮಾತನಾಡುತ್ತ ಭಾರತ ಖಂಡದಲ್ಲಿ ಶಾಂತಿ ವೃದ್ದಿಯಾಗಲಿ, ಅಸಮಾನತೆ ತೊಲಗಬೇಕು ಅದಕ್ಕೆ ಜವಾಬ್ದಾರಿಯಿಂದ ಸೇವೆ ಅಗತ್ಯತೆ ಬಗ್ಗೆ ಹೇಳಿದರು.
ಬಳಿಕ ಮಾತನಾಡಿದ ಬಾಲಗಂಗದರನಾಥ ಸ್ವಾಮೀಜಿ ಸಿದ್ಧ ಗಂಗಾ ಶ್ರೀಗಳ ಆದರ್ಶ ಹಾಗೂ ಸಿದ್ದಾಂತಗಳನ್ನು ಪಾಲಿಸಬೇಕು ಎಂದರಲ್ಲದೆ, ಭವ್ಯ ಭಾರತ ನಿರ್ಮಾಣ ಮಾಡಲು ಸೋನಿಯಾ ಗಾಂಧಿ ಸಮರ್ಥರು ಮತ್ತು ದೇಶ ಕಟ್ಟುವುದನ್ನು ತೋರಿಸಿದ್ದಾರೆ, ಮಹಿಳೆಯರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದಾರೆ. ಶ್ರೀಗಳ ಸರಳತೆಯನ್ನು ಇಷ್ಟ ಪಡುವ ಅನೇಕ ಮಂದಿ, ಸ್ವಾಮೀಜಿಯವರನ್ನು ನಡೆದಾಡುವ ದೇವರು ಅಂತ ಗೌರವಿಸುತ್ತಾರೆ. ಸೋನಿಯಾ ಭಾಷಣದ ನಡುವೆ ಮಹಿಳೆಯೊಬ್ಬಳು ಒಳ ಮೀಸಲಾತಿಗೆ ಆಗ್ರಹಿಸಿ ಕಪ್ಪು ಪಟ್ಟಿ ಪ್ರದರ್ಶನ ನಡೆಸಿದಾಗ ಪೊಲೀಸರು ವಶಕ್ಕೆ ತೆಗೆದುಕೊಂಡರು. ವೇದಿಕೆಯಲ್ಲಿ ಕೇಂದ್ರ ಸಚಿವರಾದ ಎಸ್.ಎಂ ಕೃಷ್ಣ, ವೀರಪ್ಪ ಮೊಯ್ಲಿ, ಮಲ್ಲಿಕಾರ್ಜುನ ಖರ್ಗೆ, ಆಸ್ಕರ್ ಫೆರ್ನಂಡಿಸ್ ಉಪಸ್ಥಿತರಿದ್ದರು.





