“Author Archive”
Stories written by ( ರಫೀಕ್ ದಲ್ಕಾಜೆ, ಕೋಲ್ಪೆ )
ತುಮಕೂರು: ಪಾವಗಡದ ಶ್ರೀ ಶಾರದಾದೇವಿ ಕಣ್ಣಿನ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ಬುದ್ಧ ಪೂರ್ಣಿಮೆ ಅಂಗವಾಗಿ ಮೇ.25 ರಂದು ಬೆಳಗ್ಗೆ 9:30 ರಿಂದ ಮಧ್ಯಾಹ್ನ 3:30 ರವರೆಗೂ ವಿಶೇಷ ನೇತ್ರ ಚಿಕಿತ್ಸಾ ಶಿಬಿರವನ್ನು ಏರ್ಪಡಿಸಲಾಗಿದೆ. ಬೆಂಗಳೂರಿನ ನಾರಾಯಣ ನೇತ್ರಾಲಯ, ತುಮಕೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಹಯೋಗದೊಂದಿಗೆ ನಡೆಯುವ ಈ ಶಿಬಿರದಲ್ಲಿ ಗ್ಲಾಕುಮಾ, ರೆಟಿನಾ, ಲೇಸರ್ ಚಿಕಿತ್ಸೆ, ಮಕ್ಕಳ ಕಣ್ಣಿನ ತಜ್ಞರು, ನೇತ್ರ ತಜ್ಞರು ಸೇರಿದಂತೆ ಬೆಂಗಳೂರಿನ ನಾರಾಯಣ ನೇತ್ರಾಲಯದ ಹಾಗೂ ತುಮಕೂರು [...]
May 21st, 2013 | Posted in ತುಮಕೂರು,ರಾಜ್ಯ ಸುದ್ದಿಗಳು | Read More »

ತುಮಕೂರು ನಗರದ ಕ್ಯಾತಸಂದ್ರದ ಶ್ರೀ ಚಂದ್ರಮೌಳೀಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀ ನರಸಿಂಹ ಜಯಂತಿ ಅಂಗವಾಗಿ ಮೇ.23 ರಂದು ಬೆಳಗ್ಗೆ 10 ಗಂಟೆಗೆ ಪಂಚಾಮೃತ ಅಭಿಷೇಕ, ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ, ಸಂಜೆ 7 ಕ್ಕೆ ವಿಷ್ಣುಸಹಸ್ರನಾಮ ಅರ್ಚನೆ, ಮಹಾಮಂಗಳಾರತಿ ಹಾಗೂ ವಿಶೇಷ ಪೂಜಾದಿಗಳು ನಡೆಯುತ್ತವೆ. ಹೆಚ್ಚಿನ ಮಾಹಿತಿಗೆ ಕೆ.ವೈ.ಚಂದ್ರಶೇಖರ್ (ಮೊ: 9845274090) ಅವರನ್ನು ಸಂಪರ್ಕಿಸಬಹುದಾಗಿದೆ. – ಆರ್ ವಿಶ್ವನಾಥ್ ತುಮಕೂರು(ವರದಿಗಾರರು ವಿಕೆ ನ್ಯೂಸ್)
May 21st, 2013 | Posted in ತುಮಕೂರು,ರಾಜ್ಯ ಸುದ್ದಿಗಳು | Read More »

ದುಬೈ: ಹೃಸ್ವ ಸಂದರ್ಶನಾರ್ಥ ಯುಎಇ ಗೆ ಬೇಟಿ ನೀಡಿದ ಎಸ್ಸೆಸ್ಸೆಫ್ ಕರ್ನಾಟಕ ರಾಜ್ಯ ಸಮಿತಿಯ ಮಾಜಿ ಅಧ್ಯಕ್ಷ ಹಾಗೂ ಹಲವಾರು ಸುನ್ನೀ ಸಂಘ ಸಂಸ್ಥೆಗಳ ಮುಂಚೂಣಿ ನಾಯಕರೂ ಆದ ಡಾ|ಮುಹಮ್ಮದ್ ಫಾಝಿಲ್ ರಝ್ವಿ (ಕಾವಲ್ ಕಟ್ಟೆ ಹಝ್ರತ್)ರವರನ್ನು ದುಬೈ ಮಲ್ಜಹ್ ಸೆಂಟರಿನಲ್ಲಿ ಮಲ್ಜಹ್ ದುಬೈ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಮಲ್ಜಹ್ ದುಬೈ ಸಮಿತಿಯ ಮಾಸಿಕ ದಿಕ್ರ್ ಸ್ವಲಾತ್ ಮಜ್ಲಿಸ್ ನಲ್ಲಿ ಮುಖ್ಯ ಅಥಿತಿ ಯಾಗಿ ಭಾಗವಹಿಸಿದ್ದ ಹಝ್ರತ್ ರನ್ನು ಮಲ್ಜಹ್ ದುಬೈ ಸಮಿತಿ ಸಲಹೆಗಾರರಾದ ಕೆ. ಎಚ್.ಅಹ್ಮದ್ [...]
May 20th, 2013 | Posted in ಗಲ್ಫ್ ಸುದ್ದಿಗಳು | Read More »

ತುಮಕೂರಿನ ಭಾರತೀಯ ಜೀವ ವಿಮಾ ನಿಗಮದ ಶಾಖೆ 1ರಲ್ಲಿ ಮುಖ್ಯ ಪ್ರಬಂಧಕರಾಗಿ ಕಾರ್ಯನಿರ್ವಹಿಸಿ ವರ್ಗಾವಣೆಗೊಂಡಿರುವ ಎಚ್.ಕೆ.ರವಿಕಿರಣ್ ಅವರನ್ನು ಆತ್ಮೀಯವಾಗಿ ಗೌರವಿಸಿ ಬೀಳ್ಕೊಡಲಾಯಿತು. ಚಿತ್ರದಲ್ಲಿ ಅಖಿಲ ಭಾರತ ಜೀವವಿಮಾ ಪ್ರತಿನಿಧಿಗಳ ಒಕ್ಕೂಟದ ತುಮಕೂರು ಶಾಖೆ 1ರ ಅಧ್ಯಕ್ಷ ಭರತ್‌ಕುಮಾರ್ ಜೈನ್, ಮುಖಂಡರಾದ ಲಿಂಗಪ್ಪ, ಬಿ. ಲಕ್ಷ್ಮಣ್ ಮತ್ತು ಹಿರಿಯ ವಿಮಾ ಪ್ರತಿನಿಧಿ ಜಿ.ಎಸ್.ಎಸ್.ಮೂರ್ತಿ ಅವರು ಇದ್ದಾರೆ. – ಆರ್ ವಿಶ್ವನಾಥ್ ತುಮಕೂರು(ವರದಿಗಾರರು ವಿಕೆ ನ್ಯೂಸ್)
May 20th, 2013 | Posted in ತುಮಕೂರು,ರಾಜ್ಯ ಸುದ್ದಿಗಳು | Read More »

ತುಮಕೂರಿನ ಮಾರುತಿ ಇಂಟರ್ ನ್ಯಾಷನಲ್ ಹೈಸ್ಕೂಲ್‌ನ ವಿದ್ಯಾರ್ಥಿ ಯು.ಎ.ಪವನ್ ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.93 ರಷ್ಟು ಅಂಕಗಳಿಸಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. – ಆರ್ ವಿಶ್ವನಾಥ್ ತುಮಕೂರು(ವರದಿಗಾರರು ವಿಕೆ ನ್ಯೂಸ್)
May 20th, 2013 | Posted in ತುಮಕೂರು,ರಾಜ್ಯ ಸುದ್ದಿಗಳು | Read More »

ಬಿಜೆಪಿ ಸರಕಾರದ ದುರಾಡಳಿತವೋ,ತೀರದ ಭ್ರಷ್ಟಾಚಾರಕ್ಕೆ ಜನ ಬೇಸತ್ತೋ, ಅನುಕಂಪದ ಅಲೆಗೋ, ಯಡ್ದೀಜಿಯ ಸೇಡಿಗೋ ಅಥವಾ ಬದಲಾವಣೆಯ ಗಾಳಿಗೋ ಏಕೋ ಅವರವರ ಭಾವಕ್ಕೆ ತಕ್ಕಂತೆ ಹೇಳುವ ಕಾರಣಗಳಿಗೆ ಅತೀತವಾಗಿ ಕಾಂಗ್ರೆಸ್ ಗೆದ್ದಿದ್ದು,ಸರಕಾರದ ಗದ್ದುಗೆಯನ್ನು ಸಿದ್ದು ಸಾಹೇಬರು ಹಿಡಿದಿದ್ದು ಈಗ ಹಳೇ ಮಾತು. ಇದೀಗ ಅದೆಲ್ಲಾ ಮುಗಿದು ಎಲ್ಲರಲ್ಲೂ ಕುತೂಹಲ ಮೂಡಿಸಿದ್ದ ಪ್ರಥಮ ಹಂತದ ಕ್ಯಾಬಿನೆಟ್ ರಚನೆಯ ಭಾಗ್ಯವೂ ತೆಪ್ಪಗೆ ನಡೆದೋಯ್ತು.ಅಷ್ಟಕ್ಕೂ ವಿಶೇಷ ಏನೆಂದರೆ ಸಂಪುಟದಲ್ಲಿ 82 ಪ್ರಾಯದ ಮುದಿಜೀವ ಶ್ಯಾಮನೂರು ಶಿವಪ್ಪನವರೂ ಇದ್ದಾರೆ, 40ರ ಹರೆಯದ ಯುವ ನಾಯಕ [...]
May 20th, 2013 | Posted in Editor Only,ಲೇಖನಗಳು | Read More »

ಶಾರ್ಜಾ ಕರ್ನಾಟಕ ಸಂಘದ 11ನೇ ಸಾಲಿನ ಪ್ರತಿಷ್ಠಿತ ಮಯೂರ ಪ್ರಶಸ್ತಿ ಉದ್ಯಮ ಕ್ಷೇತ್ರದ ಸಾಧನೆಗೆ ಶ್ರೀ ಸುಧೀರ್ ಕುಮಾರ್ ಶೆಟ್ಟಿಯವರು ಪಡೆಯಲಿದ್ದಾರೆ. ಕೊಲ್ಲಿ ನಾಡಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕನ್ನಡಿಗರಿಗೆ ಶಾರ್ಜಾ ಕರ್ನಾಟಕ ಸಂಘ ಕಳೆದ ಹತ್ತು ವರ್ಷಗಳಿಂದ ಪ್ರತಿಷ್ಟಿತ ಮಯೂರ ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ. ಶಾರ್ಜಾ ಕರ್ನಾಟಕ ಸಂಘದ 11ನೇ ವಾರ್ಷೀಕೋತ್ಸವ ಮತ್ತು ಮಯೂರ ಪ್ರಶಸ್ತಿ ಸಮಾರಂಭ 2013 ಮೇ.31ರಂದು ಶಾರ್ಜಾ ಕಾರ್ನಿಶ್ ನಲ್ಲಿರುವ ‘ಇವಾನ್’ ಹೋಟೆಲಿನ ಭವ್ಯ ಸಭಾಂಗಣದಲ್ಲಿ ನಡೆಯಲಿದೆ. ಯು.ಎಇ.ಯಲ್ಲಿರುವ [...]
May 19th, 2013 | Posted in Editor Only,ಗಲ್ಫ್ ಸುದ್ದಿಗಳು | Read More »

ಹಾವೇರಿ: ರಾಜಿ ಪಂಚಾಯತಿ ಒಂದರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಖಾಸಗಿ ವಾಹಿನಿಗಳಪತ್ರಕರ್ತರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಕ್ಯಾಮಾರ ಜಖಂ ಗೊಳಿಸಿ, ವಾಹಿನಿಗಳ ಕ್ಯಾಮರಾಮನ್‌ಗಳಾದ ಶಾಂತಕುಮಾರ ಹಾಗೂ ಚಂದ್ರು ಎಂಬವರನ್ನು ಥಳಿಸಿ, ಅಂದಾಜು 1.5 ಲಕ್ಷ ರೂ ಗಳ ಕ್ಯಾಮರಾಗಳನ್ನು ಜಜ್ಜಿ ಹಾನಿ ಮಾಡಿದ ಘಟನೆ ಶುಕ್ರವಾರ ಸವಣೂರು ಪಟ್ಟಣದಲ್ಲಿನಡೆದಿದೆ. ಕಳೆದ ಎರಡು ದಿನಗಳ ಹಿಂದೆ ವಿವಾಹ ಒಂದು ಜರುಗಿತ್ತು, ವಿವಾಹದ ನಂತರ ಪತ್ನಿ ಗರ್ಭಿಣಿಯಾಗಿರುವುದು ಪತಿಗೆ ಗೊತ್ತಾಗಿ. ಈ ಹಿನ್ನೆಲೆಯಲ್ಲಿ ಸವಣೂರು ಪೊಲೀಸರ ಮೋರೆಹೋದ ಪತಿ [...]
May 18th, 2013 | Posted in Editor Only,ರಾಜ್ಯ ಸುದ್ದಿಗಳು,ಹಾವೇರಿ | Read More »

ಮಂಗಳೂರು: ಹೈದರಾಬಾದಿನ ಎಸ್‌ಎನ್‌ವಿ ಕ್ರ್ಯೂ ತಂಡ ಪ್ರತಿಷ್ಠಿತ ಸೆವೆನ್ ಅಪ್ ಡಾನ್ಸ್ ಆನ್ ಸ್ಪರ್ಧೆಯನ್ನು ಗೆದ್ದುಕೊಂಡಿದೆ. ಮಂಗಳೂರಿನ ಸಿಝ್ಲಿಂಗ್ ಗಯ್ಸ್ 1ನೇ ರನ್ನರ್ ಅಪ್ ಎನಿಸಿಕೊಂಡಿದೆ. ಚೆನ್ನೈಯಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ವಿಜಯಿ ತಂಡ ಆರು ಪ್ರತಿಸ್ಪರ್ಧಿಗಳನ್ನು ಹಿಂದಿಕ್ಕಿ 21 ಲಕ್ಷ ರೂಪಾಯಿ ಮೌಲ್ಯದ ವಿವಿಧ ಬಹುಮಾನಗಳನ್ನು ಗೆದ್ದುಕೊಂಡಿತು. ಕನ್ನಡದ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜಕುಮಾರ್, ತೆಲುಗು ನಟರಾದ ಎಸ್‌ಟಿಆರ್, ಅಲ್ಲು ಮತ್ತು ವೇಧಿಕಾ ಅವರನ್ನೊಳಗೊಂಡ ತೀರ್ಪುಗಾರರ ತಂಡ ವಿಜೇತರನ್ನು ಆಯ್ಕೆ ಮಾಡಿತು. [...]
May 18th, 2013 | Posted in Editor Only,ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು | Read More »

ಕಳಂಕಿತರಿಗೆ ಗೂಟದ ಕಾರು ಅಲಭ್ಯ ಬೆಂಗಳೂರು: ಇಂದು ಅಂದರೆ 2013ರ ಮೇ.18ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ 28 ಸಚಿವರು ಸೇರ್ಪಡೆಗೊಂಡರು. ಇದರಲ್ಲಿ 20 ಮಂದಿ ಕ್ಯಾಬಿನೆಟ್ ದರ್ಜೆ ಸಚಿವರಾಗಿ 8 ಮಂದಿ ರಾಜ್ಯ ಸಚಿವರಾಗಿ ಪ್ರಮಾಣವಚನ ಸ್ವೀಕರಿದರು ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಹೆಚ್.ಆರ್.ಭಾರದ್ವಾಜ್ ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿಸದರು. ಶನಿವಾರ ಬೆಳಗ್ಗೆ 10.35ಕ್ಕೆ ಪ್ರಮಾಣವಚನ ಸ್ವೀಕಾರ ಸಮಾರಂಭವ ರಾಷ್ಟ್ರಗೀತೆಯೊಂದಿಗೆ ಪ್ರಾರಂಭವಾಯಿತು. ನಂತರ ರಾಜ್ಯಪಾಲರ ಅನುಮತಿ ಪಡೆದು ಸಚಿವರ ಪ್ರಮಾಣ [...]
May 18th, 2013 | Posted in Editor Only,ಬೆಂಗಳೂರು ನಗರ,ರಾಜ್ಯ ಸುದ್ದಿಗಳು | Read More »