Home » ಕೊಡಗು
You are browsing entries filed in “ಕೊಡಗು”

ಮಡಿಕೇರಿ ( ವಿಶ್ವ ಕನ್ನಡಿಗ ನ್ಯೂಸ್ ) : ಆಫ್ರಿಕಾದ ಕ್ಯಾಮರೂನ್ ನಲ್ಲಿ ಉದ್ಯೋಗದಲ್ಲಿದ್ದ ಕವಿ ಹಾಗೂ ಬರಹಗಾರ ರವಿ ಮೂರ್ನಾಡು ಅವರ ಪ್ರಾರ್ಥೀವ ಶರೀರವನ್ನು ಸಕಲ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಮಡಿಕೇರಿಯ ಅವರ ತವರು ಮೂರ್ನಾಡ್ ನಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು . ಈ ಸಂದರ್ಭದಲ್ಲಿ ಅವರ ಕುಟುಂಬ ವರ್ಗದವರು , ಗ್ರಾಮಸ್ಥರು ಮತ್ತು ಮತ್ತು ಬರಹಗಾರ ಮಿತ್ರರು ಪಾಲ್ಗೊಂಡು ರವಿ ಅವರಿಗೆ ಅಂತಿಮ ನಮನ ಸಲ್ಲಿಸಿದರು . ಕ್ಯಾಮರೂನ್ ಭಾರತೀಯ ರಾಯಭಾರಿ ಕಚೇರಿ ಮತ್ತು ಅಲ್ಲಿನ [...]
April 9th, 2013 | Posted in Editor Only,ಕೊಡಗು,ರಾಜ್ಯ ಸುದ್ದಿಗಳು | Read More »

ಮಡಿಕೇರಿ ( ವಿಶ್ವ ಕನ್ನಡಿಗ ನ್ಯೂಸ್ ) : ಇತ್ತೀಚಿಗೆ ಆಫ್ರಿಕಾದ ಕ್ಯಾಮರೂನ್ ನಲ್ಲಿ ನಿಧನರಾದ ಕವಿ , ಬರಹಗಾರ ಶ್ರೀ ರವಿ ಮೂರ್ನಾಡ್ ಅವರ ಪಾರ್ಥೀವ ಶರೀರ ರವಿವಾರ, 07 ಎಪ್ರಿಲ್ 2013 ರಂದು ಮುಂಜಾನೆ ಮುಂಬೈ ತಲುಪಿ ನಂತರ ಮಂಗಳೂರಿಗೆ ವಿಮಾನದ ಮೂಲಕ ಬಂದು ಇಂದು ಸಾಯಂಕಾಲ ಸರಿ ಸುಮಾರು 4 .30 ಕ್ಕೆ ಅವರ ಊರಾದ ಮಡಿಕೇರಿಗೆ ತಲುಪಲಿದೆ . ಆಫ್ರಿಕಾದ ಕ್ಯಾಮರೂನ್ ನಲ್ಲಿ ಉದ್ಯೋಗದಲ್ಲಿದ್ದ ರವಿ ಮೂರ್ನಾಡು ಹಲವು ಕಥೆ , [...]
April 7th, 2013 | Posted in Editor Only,ಕೊಡಗು,ರಾಜ್ಯ ಸುದ್ದಿಗಳು | Read More »

ನಾನು ಆಗಷ್ಟೇ ಪಿ.ಎ.ಪಾಲಿಟೆಕ್ನಿಕ್ ಗೆ ಉಪನ್ಯಾಸಕನಾಗಿ ಸೇರಿದ ಸಂದರ್ಭ. ಅಳುಕಿನಿಂದಲೇ ಹೊಸ ವಾತಾವರಣಕ್ಕೆ ಹೊಂದಿಕೊಳ್ಳುವ ಮೊದಲೇ ನನ್ನನ್ನು ಆಕರ್ಷಿಸಿದ ವ್ಯಕ್ತಿತ್ವವೊಂದಿತ್ತು.ಕ್ರಮೇಣ ಪರಿಚಯ-ಒಡನಾಟವು ಸಹೋದ್ಯೋಗಿ ಸಂಬಂಧಗಳಿಗೂ ಅತೀತವಾಗಿ ಬೆಳೆದು ಗೆಳೆತನವಾಗಿ ಮಾರ್ಪಟ್ಟಿತ್ತು.ಅವರು ದೀನೀ ವಿಷಯದಲ್ಲಾಗಲೀ, ಮಕ್ಕಳ ಮನಶ್ಯಾಸ್ತ್ರದ ಬಗ್ಗೆ ಮಾತನಾಡುವಾಗಲೀ,ಕಲಿಕಾ ಸಂಬಂಧ ಮಾಹಿತಿಯಲ್ಲಾಗಲೀ ಅವರ ಜ್ನಾನವು ಯಾರನ್ನೂ ಅವರೆಡೆಗೆ ಚೂಚಕದಂತೆ ಸೆಳೆಯುತ್ತಿತ್ತು, ಅಲ್ಲೊಂದು ವಿಶಿಷ್ಟ ಬಗೆಯ ಭಾವವಿತ್ತು. ಅಷ್ಟೇಕೆ ಸೇರಿದ ಕೆಲಸಮಯದಲ್ಲೇ ಅವರಿಗೆ ದೊರೆತ ಸಿವಿಲ್ ವಿಭಾಗದ ಮುಖ್ಯಸ್ಥನ ಹೊಣೆಗಾರಿಕೆಯನ್ನು ಅವರು ನಿಭಾಯಿಸಿದ ರೀತಿ ಅದು ಅಭೂತಪೂರ್ವ.ನಾನೇಕೆ ಎಲ್ಲರೂ [...]
March 5th, 2013 | Posted in Editor Only,ಕೊಡಗು,ರಾಜ್ಯ ಸುದ್ದಿಗಳು | Read More »

ಮಡಿಕೇರಿ ( ವಿಶ್ವ ಕನ್ನಡಿಗ ನ್ಯೂಸ್ ) : ಹಾವೇರಿಯಿಂದ ಮಡಿಕೇರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ಸೊಂದು ಸೋಮವಾರಪೇಟೆಗೆ ಬಂದಾಗ ಅದರಲ್ಲಿ ಪೆಟ್ರೋಲ್ ತುಂಬಿದ ಎರಡು ಬಾಟಲಿಗಳನ್ನು ಪ್ಲಾಸ್ಟಿಕ್ ಬ್ಯಾಗೊಂದರಲ್ಲಿ ಇಟ್ಟಿದ್ದು ಪತ್ತೆಯಾಯಿತು . ಎರಡು ಬಿಯರ್ ಬಾಟಲಿಯಲ್ಲಿ ಪೆಟ್ರೋಲ್ ತುಂಬಿ ಅವೆರಡನ್ನೂ ತಂತಿಯೊಂದರಲ್ಲಿ ಕಟ್ಟಿ ಎರಡು ಬಾಟಲಿ ಮಧ್ಯೆ ಖಾಲಿಯಾದ ರಟ್ಟಿನ ಮೊಬೈಲ್ ಬಾಕ್ಸ್ ಅನ್ನು ಇಟ್ಟು ಅದಕ್ಕೆ ಒಂದು ಬತ್ತಿ ಸಹ ಇಡಲಾಗಿತ್ತು . ಯಾರೋ ಕಿಡಿಗೇಡಿಗಳು ಸುಮ್ಮನೆ ಬಾಂಬ್ ವದಂತಿ ಹರಡಲು ನಡೆಸಿದ ಕುತಂತ್ರ [...]
February 28th, 2013 | Posted in Editor Only,ಕೊಡಗು,ರಾಜ್ಯ ಸುದ್ದಿಗಳು | Read More »

ಗೋಣಿಕೊಪ್ಪಲು: ಶ್ರವಣಬೆಳಗೊಳ ಶಾಸಕ ಸಿ.ಎಸ್. ಪುಟ್ಟೇಗೌಡ (ಜೆಡಿಎಸ್) ಅವರು ಇಲ್ಲಿಗೆ ಸಮೀಪದ ಪೊನ್ನಂಪೇಟೆಯಲ್ಲಿ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಅವರನ್ನು ಸೋಮವಾರ ಭೇಟಿ ಮಾಡಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಪತ್ರ ಸಲ್ಲಿಸಿದರು. ರಾಜೀನಾಮೆಯನ್ನು ಅಂಗೀಕರಿಸಿ ಅಧಿಸೂಚನೆ ಹೊರಡಿಸಲಾಗಿದೆ. ನಂತರ ಮಾತನಾಡಿದ ಅವರು, `ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದ ಮನನೊಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ’ ಎಂದು ಹೇಳಿದರು. `ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಲು ಪಕ್ಷದ ವರಿಷ್ಠರೇ ಬಿಡಲಿಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರ ಕುಟುಂಬದ ಸದಸ್ಯರನ್ನು ಶ್ರವಣಬೆಳಗೊಳ ಕ್ಷೇತ್ರದಿಂದ ಕಣಕ್ಕಿಳಿಸುವ [...]
February 19th, 2013 | Posted in ಕೊಡಗು,ರಾಜ್ಯ ಸುದ್ದಿಗಳು | Read More »

ಮಡಿಕೇರಿ: ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ಎಂಬ ಧ್ಯೇಯ ವಾಕ್ಯದಡಿ ಜಿಲ್ಲಾ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ನೆಲ್ಲಿಹುದಿಕೇರಿಯಲ್ಲಿ ಗಣರಾಜ್ಯೋತ್ಸವದಂದು ‘ಮಾನವ ಸರಪಳಿ ಹಾಗೂ ಸರ್ವಧರ್ಮ ಮಹಾ ಸಮ್ಮೇಳನ’ ನಡೆಯಿತು. ಸಿದ್ದಾಪುರದಿಂದ ಹೊರಟ ಮೆರವಣಿಗೆಯಲ್ಲಿ ಸಾವಿರಾರು ಮಂದಿ ಪಾಲ್ಗೊಂಡು ಭಾರತದ ಸಂವಿಧಾನದ ಮೌಲ್ಯಗಳಿಗೆ ಅಪಾಯ ತಂದೊಡ್ಡಿರುವ ಭಯೋತ್ಪಾದನೆ, ಕೋಮುವಾದ, ಭ್ರಷ್ಟಾಚಾರ ವಿರುದ್ದ ಘೋಷಣೆ ಕೂಗುತ್ತ ನೆಲ್ಲಿಹುದಿಕೇರಿ ಮದರಸ ಸಭಾಂಗಣದಲ್ಲಿ ಸರ್ವರಲ್ಲಿ ಸಾಮರಸ್ಯ, ಸಹಬಾಳ್ವೆ ಪ್ರತಿಪಾದಿಸುವ ಶಕ್ತಿಯಾಗಿ ಮಾನವ ಸರಪಳಿ ಮತ್ತು ಭಯೋತ್ಪಾದನೆಯ ವಿರುದ್ಧ ಪ್ರತಿಜ್ಞಾ ವಿಧಿ ಸ್ವೀಕಾರಿಸಿದರು. ಸರ್ವಧರ್ಮ ಸಮ್ಮೇಳನವನ್ನು ಕೂಟದ ಜಿಲ್ಲಾ [...]
January 27th, 2013 | Posted in Editor Only,ಕೊಡಗು,ರಾಜ್ಯ ಸುದ್ದಿಗಳು | Read More »

ಮಡಿಕೇರಿ ( ವಿಶ್ವ ಕನ್ನಡಿಗ ನ್ಯೂಸ್ ) : ಕಳೆದ ಮೂರು ದಿನಗಳಿಂದ ಯಾರ ಸಂಪರ್ಕಕ್ಕೂ ಸಿಗದೇ ನಾಪತ್ತೆಯಾಗಿದ್ದ ವಿಧಾನಸಭಾ ಸ್ಪೀಕರ್ ಬೋಪಯ್ಯ ಮುಂಬೈನಿಂದ ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಅಲ್ಲಿಂದ ಖಾಸಗಿ ಕಾರಿನಲ್ಲಿ ಮಡಿಕೇರಿಯ ತಮ್ಮ ನಿವಾಸಕ್ಕೆ ತಲುಪಿದ್ದಾರೆ . ಬೋಪಯ್ಯ ಆಗಮನದ ಮೂಲಕ ಅವರ ನಾಪತ್ತೆ ಪ್ರಕರಣಕ್ಕೆ ಬ್ರೇಕ್ ಬಿದ್ದಿದೆ . ಮಂಗಳೂರು ವಿಮಾನ ನಿಲ್ಧಾಣದಲ್ಲಿ ಪತ್ರಕರ್ತರ ಕ್ಯಾಮರಾ ಕಣ್ಣಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಸ್ಪೀಕರ್ ಯಾವುದೇ ಪ್ರತಿಕ್ರಿಯೆ ನೀಡದೇ ಖಾಸಗಿ ಕಾರಿನಲ್ಲಿ ಮಡಿಕೇರಿಗೆ [...]
January 25th, 2013 | Posted in Editor Only,ಕೊಡಗು,ರಾಜ್ಯ ಸುದ್ದಿಗಳು | Read More »
ಸುಂಟಿಕೊಪ್ಪ: ಈದ್ ಮಿಲಾದ್ ಅಂಗವಾಗಿ ಸುಂಟಿಕೊಪ್ಪದ ವಿವಿಧ ಜಮಾಅತ್‌ಗಳ ವತಿಯಿಂದ ಮುಸ್ಲಿಂ ಬಾಂಧವರಿಂದ ನಗರದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮತ್ತು ಮದರಸಗಳಲ್ಲಿ ಧಾರ್ಮಿಕಪ್ರವಚನ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮಹಮ್ಮದ್ ಮುಸ್ತಫಾ ಪೈಗಂಬರರ ಜನ್ಮದಿನದ ಅಂಗವಾಗಿ ಮೂರು ದಿನಗಳ ವಿಶೇಷ ಪ್ರಾರ್ಥನೆ ಹಾಗೂ ಕಲಾ ಕಾರ್ಯಕ್ರಮಗಳು ನಡೆಸಲಾಯಿತು. ಹಬ್ಬದ ಅಂಗವಾಗಿ ಸುಂಟಿಕೊಪ್ಪ ಪಟ್ಟಣದಿಂದ ಸುಂಟಿಕೊಪ್ಪ ಜುಮ್ಮಾ ಮಸೀದಿ, ಮುನವ್ವಿರುಲ್ ಮದರಸ, ಖದೀಜ ಉಮ್ಮ ಮದರಸದಲ್ಲಿ ಮತ್ತು ಗದ್ದೆಹಳ್ಳದ ನೂರ್ ಜುಮ್ಮಾ ಮಸೀದಿ, ಹನಫೀ ಜುಮ್ಮಾ ಮಸೀದಿಯ ಮುಸ್ಲಿಂ ಭಾಂದವರು ಗದ್ದೆಹಳ್ಳದ [...]
January 25th, 2013 | Posted in ಕೊಡಗು,ರಾಜ್ಯ ಸುದ್ದಿಗಳು | Read More »

ಮಡಿಕೇರಿ: ಹೋದ ವರ್ಷದ ನವೆಂಬರ್ ತಿಂಗಳು. ಕೊಡಗಿನ ಗಿರಿಕಂದರಗಳಲ್ಲಿ ಧಾರಾಕಾರ ಮಳೆ ಸುರಿಯುತಿತ್ತು. ಕಾವೇರಿ ಒಡಲು ತುಂಬಿ ಹರಿಯುತಿತ್ತು. ಬಿರುಸು ಮಳೆಯಲ್ಲೇ ಶಾಲೆಗೆ ಹೊರಟಿದ್ದ ಹುಡುಗರ ಗುಂಪೊಂದು ಸೇತುವೆ ದಾಟುವಾಗ ವಿದ್ಯಾರ್ಥಿಯೊಬ್ಬ ಶರ್ಟ್‌ಗೆ ಮೆತ್ತಿದ್ದ ಕೆಸರು ತೊಳೆಯಲು ನೀರಿಗಿಳಿದು ಕೊಚ್ಚಿಕೊಂಡು ಹೋಗುತ್ತಿದ್ದ. ಇದನ್ನು ಗಮನಿಸಿದ ಇನ್ನೊಬ್ಬ ತಕ್ಷಣ ನದಿಗೆ ಜಿಗಿದು ಮುಳುಗುತ್ತಿದ್ದ ಗೆಳೆಯನನ್ನು ದಡಕ್ಕೆಳೆದು ತಂದು ಪ್ರಾಣ ಉಳಿಸಿದ. ಈ ಘಟನೆ ನಡೆದಿದ್ದು ಭಾಗಮಂಡಲದಲ್ಲಿ ನವೆಂಬರ್ 3ರಂದು ಬೆಳಿಗ್ಗೆ. ನೀರಿನಲ್ಲಿ ಮುಳುಗುತ್ತಿದ್ದ ಫಾರೂಕ್ ಹಾಗೂ ಆತನ ಜೀವ ಉಳಿಸಿದ [...]
January 19th, 2013 | Posted in Editor Only,ಕೊಡಗು,ರಾಜ್ಯ ಸುದ್ದಿಗಳು | Read More »

ಮಂಗಳೂರು ( ವಿಶ್ವ ಕನ್ನಡಿಗ ನ್ಯೂಸ್) : ಇದೇ ಬರುವ ಜನವರಿ 26 ಗಣರಾಜ್ಯ ದಿನದಂದು ಕರ್ನಾಟಕ, ಕೇರಳ ತಮಿಳುನಾಡು ಮತ್ತು ದೆಹಲಿಯಲ್ಲಿ ರಾಜ್ಯಾದಂತ ಮಾನವ ಸರಪಳಿ ಹಾಗೂ ಭಯೋತ್ಪಾದನೆಯ ವಿರುದ್ದ ಪ್ರತಿಜ್ಞಾ ಸ್ವೀಕಾರವು ನಡೆಯಲಿದೆ. ಸಂಜೆ 4 ಘಂಟೆಗೆ ಸುಳ್ಯದಲ್ಲಿ ಹಾಗೂ ಕೊಡಗಿನ ನೆಲ್ಲ್ವಾಹುದುಕೇರಿಯಲ್ಲಿ ಸಹ ಬೃಹತ್ ಕಾರ್ಯಕ್ರಮ ನಡೆಯಲಿದೆ ಓಂ ಶಾಂತಿ ಎಂಬ ಪದದಿಂದ ಪ್ರಪಂಚದ ಶೃಷ್ಟಿ ನಡೆಯಿತು ಎನ್ನುವುದು ಹಿಂದೂ ವೇಧಗಳು ಹೇಳುತ್ತವೆ.ಶಾಂತಿಗಾಗಿ ಏಸು ಕ್ರಿಸ್ತ (ದೇವರು ಅವರಿಗೆ ಶಾಂತಿ ಕರುಣಿಸಲಿ) [...]
January 17th, 2013 | Posted in Editor Only,ಕೊಡಗು,ದಕ್ಷಿಣ ಕನ್ನಡ,ರಾಜ್ಯ ಸುದ್ದಿಗಳು | Read More »